ಮಂಗಳೂರು: ಎಂಎಂಎ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಮಂಗಳೂರಿಗ ಕೌಶಿಕ್ ಬೋಳೂರು

Spread the love

ಮಂಗಳೂರು: ನಗರದ ಮಾರ್ಷಲ್ ಆಟ್ರ್ಸ್ ಪ್ರವೀಣ ಕೌಶಿಕ್ ಬೋಳೂರು ಜುಲೈ 6ರಿಂದ 11ರ ತನಕ ಅಮೇರಿಕಾದ ಲಾಸ್ ವೇಗಸ್‍ನಲ್ಲಿ ನಡೆಯಲಿರುವ ಅಮೆಚೂರ್ ಮಿಕ್ಸ್ಡ್ ಮಾರ್ಷಲ್ ಆಟ್ರ್ಸ್(ಎಂಎಂಎ)ನ ಐಎಂಎಂಎಎಫ್ ವಿಶ್ವಚಾಂಪಿಯನ್‍ಶಿಪ್ 2015ರಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.

Kaushik_Boloorm

ಭಾರತದಿಂದ ಒಟ್ಟು ಆರು ಜನ ಸ್ಪರ್ಧಾಳುಗಳು ಈ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಲಿದ್ದಾರೆ. ಅವರ ಹೆಸರುಗಳು ಹೀಗಿವೆ:  ಕಾಂತರಾಜ್ ಶಂಕರ್, ಭೂಪೇಂದ್ರ ಕುಮಾರ್, ನವೀನ್ ಆರ್ ಎಸ್, ಶಶಿಕುಮಾರ್(ಎಲ್ಲರೂ ಉತ್ತರ ಕರ್ನಾಟಕದವರು) ಮತ್ತು ಮೊಹಮ್ಮದ್ ಸೊಹೈಲ್ (ತೆಲಂಗಾಣ).

ಈ ಚಾಂಪಿಯನ್‍ಶಿಪ್ ವಿಶ್ವದ ಮಿಕ್ಸ್ಡ್ ಮಾರ್ಷಲ್ ಆಟ್ರ್ಸ್‍ನ ಅತಿ ದೊಡ್ಡ ಸ್ಪರ್ಧೆಯಾಗಿದ್ದು ಅಂತಿಮ ಹಣಾಹಣಿ – ಅಲ್ಟಿಮೇಟ್ ಫೈಟಿಂಗ್ ಚಾಂಪಿಯನ್‍ಶಿಪ್ (ಯುಎಫ್‍ಸಿ)189 ಜುಲೈ 11ರಂದು ನಡೆಯಲಿದೆ.

ಇದೇ ಮೊದಲ ಬಾರಿಗೆ ಭಾರತದ ಸ್ಪರ್ಧಾಳುಗಳು ಈ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸುತ್ತಿದ್ದಾರೆ.

ಭಾರತದ ಪ್ರಪ್ರಥಮ ಎಂಎಂಎ ಅಂತರಾಷ್ಟ್ರೀಯ ಫೈಟರ್ ಅಲನ್ ‘ದಿ ಬುಲ್’ ಫೆರ್ನಾಂಡಿಸ್ ಭಾರತ ತಂಡದ ಕೋಚ್ ಆಗಿದ್ದಾರೆ.

“ನನಗೆ ಈ ಚಾಂಪಿಯನ್‍ಶಿಪ್‍ನಲ್ಲಿ ಭಾರತವನ್ನು ಅದರಲ್ಲೂ ನನ್ನ ನಗರ ಮಂಗಳೂರನ್ನು ಪ್ರತಿನಿಧಿಸಲು ಅತೀವ ಸಂತೋಷವಾಗುತ್ತಿದೆ. ಈ ಸ್ಪರ್ಧೆಯಲ್ಲಿ ವಿಶ್ವದ ಅತ್ಯುತ್ತಮ ಫೈಟರ್‍ಗಳೊಡನೆ ಸೆಣಸಬೇಕಾಗುತ್ತದೆ. ಅಂದ ಹಾಗೆ ಜೀವನದಲ್ಲಿ ಯಾವುದೂ ಅಷ್ಟೊಂದು ಸುಲಭವಲ್ಲ,” ಎನ್ನುತ್ತಾರೆ ಕೌಶಿಕ್.

ಕೌಶಿಕ್ ಪ್ರಸ್ತುತ ಮಂಗಳೂರಿನ ಗ್ರೌಂಡ್ ಸ್ಪೋರ್ಟ್ ಫಿಟ್‍ನೆಸ್‍ನಲ್ಲಿ ಮುವಾಯಿ ಥಾಯ್ ಕೋಚ್ ಆಗಿದ್ದಾರೆ.


Spread the love