Home Mangalorean News Kannada News ಮಂಗಳೂರು: ಎರಡು ಖಾಸಗಿ ಬಸ್ ಸಿಬಂದಿಗಳ ಹೊಡೆದಾಟ – ಪ್ರತ್ಯೇಕ ಪ್ರಕರಣ ದಾಖಲು

ಮಂಗಳೂರು: ಎರಡು ಖಾಸಗಿ ಬಸ್ ಸಿಬಂದಿಗಳ ಹೊಡೆದಾಟ – ಪ್ರತ್ಯೇಕ ಪ್ರಕರಣ ದಾಖಲು

Spread the love

ಮಂಗಳೂರು: ಎರಡು ಖಾಸಗಿ ಬಸ್ ಸಿಬಂದಿಗಳ ಹೊಡೆದಾಟ – ಪ್ರತ್ಯೇಕ ಪ್ರಕರಣ ದಾಖಲು

ಮಂಗಳೂರು: ಬಸ್ಸು ಓವರ್ ಟೇಕ್ ವಿಚಾರದಲ್ಲಿ ಗಲಾಟೆ ನಡೆದು ಒಂದು ಬಸ್ ನ ಕಂಡಕ್ಟರ್ ಗೆ ಮತ್ತೊಂದು ಬಸ್ ನ ಸಿಬ್ಬಂದಿಗಳು ಅವಾಚ್ಯ ಶಬ್ದಗಳಲ್ಲಿ ಬೈದು ಹಲ್ಲೆ ಮಾಡಿದ ಬಗ್ಗೆ ಎರಡು ಪ್ರತ್ಯೇಕ ದೂರು ದಾಖಲಾಗಿದೆ.

ಖಾಸಗಿ ಬಸ್ ನ ನಿರ್ವಾಹಕ ಭುವನೇಶ್ವರ್ ಬಿ ವಿ ಎಂಬವರು ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಬೆಳಿಗ್ಗೆ ವಿಟ್ಲದಿಂದ ಮಂಗಳೂರಿಗೆ ಬರುವಾಗ ಬಿ.ಸಿ.ರೋಡ್ ನಲ್ಲಿ ಅವರ ಬಸ್ಸನ್ನು ಓವರ್ ಟೇಕ್ ಮಾಡಿದೆ ಎಂಬ ಉದ್ದೇಶದಿಂದ ಮಂಗಳೂರಿನ ಸ್ಟೇಟ್ ಬ್ಯಾಂಕ್ ನಿಂದ ವಿಟ್ಲಗೆ ವಾಪಾಸ್ ತೆರಳುತ್ತಿರುವ ಸಮಯ ಅಂದರೆ ಬೆಳಗ್ಗೆ 8.15 ಗಂಟೆಗೆ ಕಂಕನಾಡಿ ಸಿಗ್ನಲ್ ಬಳಿ ಮತ್ತೊಂದು ಖಾಸಗಿ ಬಸ್ಸಿನ ಚಾಲಕ ಸುರೇಶ್ ಮತ್ತು ಕಂಡಕ್ಟರ್ ರಾಕೇಶ್ ಏಕಾಏಕಿಯಾಗಿ ತಮ್ಮ ಬಸ್ಸನ್ನು ಅಡ್ಡಲಾಗಿಟ್ಟು ಬಸ್ಸಿನ ಒಳಗೆ ಬಂದು ಚಾಲಕ ಮತ್ತು ಬಸ್ಸಿನ ಡ್ರೈವರ್ ಗೆ ಆವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಅಲ್ಲದೆ ಕಬ್ಬಿಣದ ರಾಡ್ ನಿಂದ ಎಡಕೈ, ಬಲಕೈ, ಎಡಕಾಲಿಗೆ ಮತ್ತು ಕುತ್ತಿಗೆಗೆ ಹೊಡೆದು ಗಾಯಗೊಳಿಸಿದ್ದಾರೆ. ಇಬ್ಬರು ಸೇರಿ ನಿರ್ವಾಹಕರಿಗೆ ಕೈಯಿಂದ ಬೆನ್ನಿಗೆ ಹೊಡೆದು ಕಾಲಿನಿಂದ ತುಳಿದಿರುತ್ತಾರೆ. ಇನ್ನು ಮುಂದಕ್ಕೆ ತಮ್ಮ ಸುದ್ದಿಗೆ ಬಂದರೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಹಲ್ಲೆಗೆ ಉಪಯೋಗಿಸಿದ ರಾಡನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

ಇದಕ್ಕೆ ಪ್ರತಿಯಾಗಿ ಧರಿತ್ರೀ ಬಸ್ಸಿನ ಚಾಲಕ ಸುರೇಶ್ ಅವರು ಆಸ್ಪತ್ರೆಗೆ ದಾಖಲಾಗಿ ನೀಡಿದ ದೂರಿನಂತೆ ಅ. 10 ರಂದು ಬೆಳಿಗ್ಗೆ 08-00ಗಂಟೆಗೆ ಸೆಲಿನಾ ಬಸ್ಸು ಕಂಡಕ್ಟರ್ ಭುವನೇಶ್ವರನು ಜ್ಯೋತಿ ಸರ್ಕಲ್ ಬಳಿ ಅವಾಚ್ಯ ಶಬ್ದಗಳಿಂದ ಬೈಯ್ದು ಎಂಜಿಲು ಉಗಿದಿದ್ದು, ನಮ್ಮ ಬಸ್ಸಿನ ಕಂಡೆಕ್ಟರ್ ಗೆ ಕೈ ಸನ್ನೆ ಮಾಡಿ ನಿನ್ನ ಮನೆಯವರನ್ನು ಕಳುಹಿಸಿ ಎಂದು ಹೇಳಿ ಬೆಳಿಗ್ಗೆ 08-15 ಗಂಟೆಗೆ ಕಂಕನಾಡಿ ಸಿಗ್ನಲ್ ಬಳಿ ನಮ್ಮ ಬಸ್ಸಿಗೆ ಅಡ್ಡಲಾಗಿ ಬಸ್ಸು ನಿಲ್ಲಿಸಿ ತನಗೆ ಮತ್ತು ಬಸ್ಸು ಕಂಡೆಕ್ಟರ್ ರಾಕೇಶ್ ಗೆ ಗಾಡಿ ತೊಳೆಯುವ ಬ್ರಸ್ಸಿನಿಂದ ಹಲ್ಲೆ ಮಾಡಿ ರಕ್ತಗಾಯ ಮಾಡಿರುತ್ತಾನೆ ಎಂದು ದೂರಿನಲ್ಲಿ ಹೇಳಲಾಗಿದೆ.

ಎರಡು ದೂರುಗಳನ್ನು ಸ್ವೀಕರಿಸಿ ಪೋಲಿಸರು ಪ್ರಕರಣ ದಾಖಲಿಸಿದ್ದು ಎರಡೂ ಪ್ರಕರಣಗಳು ತನಿಖೆಯಲ್ಲಿರುತ್ತದೆ.


Spread the love

Exit mobile version