ಮಂಗಳೂರು: ಎಸ್.ಡಿ.ಎಂ ಕಾಲೇಜಿನ ಸಾಧನೆಗಳ ‘ಸುವರ್ಣ ಪಥ’ ಅನಾವರಣ

Spread the love

ಮಂಗಳೂರು: ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಉಜಿರೆಯ ಎಸ್.ಡಿ.ಎಂ ಕಾಲೇಜಿನ ಕುರಿತಾದ ಸಾಕ್ಷ್ಯಚಿತ್ರ “ಸುವರ್ಣ ಪಥ” ವನ್ನು ಕಾಲೇಜಿನ ಹಳೆಯ ವಿದ್ಯಾರ್ಥಿಗಳೂ ಆದ ಮಾತೃಶ್ರಿ ಹೇಮಾವತಿ ಹೆಗ್ಗಡೆ ಹಾಗೂ ಶ್ರೀಮತಿ ಶ್ರದ್ಧಾ ಅಮಿತ್ ಬಿಡುಗಡೆಗೊಳಿಸಿದರು.

ಸುವರ್ಣ ಮಹೋತ್ಸವ ಸಂಭ್ರಮದ ಪ್ರಥಮ ದಿನವಾದ ಡಿಸೆಂಬರ್ 17 ರಂದು ಕಾಲೇಜಿನ ಪ್ರವೇಶದ್ವಾರದ ಬಳಿ ಈ ಸಾಕ್ಷ್ಯಚಿತ್ರ ಅನಾವರಣ ಕಾರ್ಯಕ್ರಮ ನಡೆಯಿತು.

ಎಸ್.ಡಿ.ಎಂ ಕಾಲೇಜಿನ 50 ವರ್ಷಗಳ ಸಾಧನೆಯ ಕುರಿತಾದ ಸಮಗ್ರ ಮಾಹಿತಿ ಇರುವ ಈ ಸಾಕ್ಷ್ಯಚಿತ್ರವನ್ನು ಕಾಲೇಜಿನ ಪತ್ರಿಕೋದ್ಯಮ ವಿಭಾಗದ “ಎಸ್.ಡಿ.ಎಂ ಮಲ್ಟಿಮೀಡಿಯಾ ಸ್ಟುಡಿಯೋ” ನಿರ್ಮಿಸಿದೆ. ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ. ಯಶೋವರ್ಮ ಅವರ ಪರಿಕಲ್ಪನೆಯಲ್ಲಿ ಈ ಸಾಕ್ಷ್ಯಚಿತ್ರ ಮೂಡಿಬಂದಿದೆ.

ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಸುನಿಲ್ ಹೆಗ್ಡೆ ನಿರ್ದೇಶಿಸಿ, ಸಾಹಿತ್ಯ ಒದಗಿಸಿರುವ ಈ ಸಾಕ್ಷ್ಯಚಿತ್ರಕ್ಕೆ ಎಸ್.ಡಿ.ಎ ಮಲ್ಟಿಮೀಡಿಯಾ ಸ್ಟುಡಿಯೋದ ನಿರ್ವಾಹಕರಾದ ಮಾಧವ ಹೊಳ್ಳ ಸಂಕಲನ, ಗುರುಪ್ರಸಾದ್ ಟಿ. ಎನ್ ಹಿನ್ನೆಲೆ ಧ್ವನಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ. ಭಾಸ್ಕರ ಹೆಗಡೆ ನಿರ್ಮಾಣ, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಶೈಲೇಶ್ ಕುಮಾರ್ ಮೇಲ್ವಿಚಾರಣೆ, ಮಲ್ಟಿಮೀಡಿಯಾ ಸ್ಟುಡಿಯೋದ ಕಾರ್ಯಕ್ರಮ ನಿರ್ಮಾಪಕಿ ಶ್ರುತಿ ಜೈನ್ ಸಹಕಾರ ಹಾಗೂ ಪತ್ರಿಕೊದ್ಯಮ ವಿಭಾಗದ ವಿದ್ಯಾರ್ಥಿಗಳಾದ ಕೃಷ್ಣಪ್ರಶಾಂತ್, ಚೈತನ್ಯ, ವಿಲ್ಸನ್ ಪಿಂಟೋ, ಶಶಾಂಕ್ ಬಜೆ, ಚೇತನ್ ಸೊಲಗಿ, ವಿಕಾಸ್ ದೇವಧರ್ ಹಾಗೂ ಪ್ರಸಾದ್ ಶೆಟ್ಟಿ ಛಾಯಾಗ್ರಹಣ ಈ ಸಾಕ್ಷ್ಯಚಿತ್ರಕ್ಕಿದೆ.

ಸಾಕ್ಷ್ಯಚಿತ್ರ ಬಿಡುಗಡೆ ಸಮಾರಂಭದಲ್ಲಿ ಶ್ರೀಮತಿ ಸುಪ್ರಿಯಾ ಹರ್ಷೇಂದ್ರ ಕುಮಾರ್, ಪೂರನ್ ವರ್ಮ, ಪ್ರೊ. ಭಾಸ್ಕರ್ ಹೆಗಡೆ, ಶೈಲೇಶ್ ಕುಮಾರ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Spread the love