ಮಂಗಳೂರು ಐಟಿಬಿಟಿಗೆ ಪರಿಪಕ್ವ: ಜೆ.ಆರ್.ಲೋಬೊ

Spread the love

ಮಂಗಳೂರು ಐಟಿಬಿಟಿಗೆ ಪರಿಪಕ್ವ: ಜೆ.ಆರ್.ಲೋಬೊ

ಬೆಂಗಳೂರು: ಎರಡನೇ ಹಂತದ ನಗರಗಳಲ್ಲಿ ಮಂಗಳೂರು ಮುಂಚೂಣೆಯಲ್ಲಿದೆ ಮತ್ತು ಮಂಗಳೂರು ಬೆಂಗಳೂರಿಗೆ ಯಾವುದೇ ರೀತಿಯಲ್ಲಿ ಕಡಿಮೆ ಇಲ್ಲದ ಪರಿಸರ ಹಾಗೂ ಮೂಲಭೂತ ಸೌಕರ್ಯಗಳನ್ನು ಹೊಂದಿದೆ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.

ಅವರು ಬೆಂಗಳೂರಲ್ಲಿ ಜರಗಿದ ಐಟಿ ಬಿಟಿ ಸಮಾವೇಶದಲ್ಲಿ ಮಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಇರುವ ವಿಫುಲ ಅವಕಾಶಗಳು ಎನ್ನುವ ಕುರಿತು ಮಾತನಾಡಿದರು.

itbt-jr-lobo

 ಮಂಗಳೂರಿನ ವಿದ್ಯಾ ಸಂಸ್ಥೆಗಳು, ಮೂಲಭೂತ ಸೌಕರ್ಯಗಳು, ಸಂಸ್ಕøತಿ ಮತ್ತು ಮಂಗಳೂರಿನ ಶಕ್ತಿಯ ಕುರಿತು ವಿವರವಾದ ವಿವರಣೆ ನೀಡಿದರು.

ಎರಡನೇ ಹಂತದ ನಗರಗಳಾದ ಮಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ ಮತ್ತು ಗುಲ್ಬರ್ಗ ನಗರಗಳಲ್ಲಿ ಮಾಹಿತಿ ತಂತ್ರಜ್ಞಾನ ಕೈಗಾರಿಕೆಗಳನ್ನು ಆರಂಭಿಸಲು ವಿಶೇಷ ಉತ್ತೇಜನ ನೀಡುವ ಬಗ್ಗೆ ಒತ್ತು ನೀಡಲಾಯ್ತು.

 ಕೆನರಾ ಚೇಂಬರ್ ಆಫ್ ಕಾಮರ್ಸಿನ ಅಧ್ಯಕ್ಷರಾದ ಜೀವನ್ ಸಲ್ಡಾನ ಅವರು ಮಾತನಾಡಿ ಮಂಗಳೂರಿನಲ್ಲಿ ಕೈಗಾರಿಕೆಗಳನ್ನು ಆರಂಭಿಸಲು ಇರುವ ವಿಫುಲ ಅವಕಾಶಗಳ ಕುರಿತು ವಿವರಣೆ ನೀಡಿದರು.

 ಜಿಲ್ಲಾಧಿಕಾರಿಗಳಾದ ಜಗದೀಶ್ ರವರು ಪ್ಯಾನೆಲ್ ಚರ್ಚೆಯಲ್ಲಿ ಭಾಗವಹಿಸಿ, ಮಂಗಳೂರಿನಲ್ಲಿ ಜಿಲ್ಲಾಡಳಿತವು ಬಂಡವಾಳ ಹೂಡಿಕೆದಾರರಿಗೆ ಎಲ್ಲಾ ರೀತಿಯಲ್ಲಿ ಸಹಕಾರ ನೀಡುವುದು, ಉತ್ತಮ ಕಾನೂನು ಸುವ್ಯವಸ್ಥೆ ಕಾಪಾಡಲಾಗುವುದು ಎಂಬ ಭರವಸೆ ನೀಡಿರುವರು.

ಎರಡನೇ ಹಂತದ ನಗರದಿಂದ ಬಂದಿರುವ ಪ್ರತಿನಿಧಿಗಳ ಪೈಕಿ ಶಾಸಕರು, ಕೈಗಾರಿಕಾ ಕ್ಷೇತ್ರದ ಪ್ರತಿನಿಧಿಗಳು ಮತ್ತು ಜಿಲ್ಲಾಡಳಿತವನ್ನು ಒಳಗೊಂಡ ಪ್ರತಿನಿಧಿಗಳ ತಂಡ ಮಂಗಳೂರಿದ್ದು ಮಾತ್ರ ಆಗಿರುವುದು ಒಂದು ವಿಶೇಷ.  ಇದನ್ನು ಹಾಜರಿದ್ದ ಎಲ್ಲಾ ಹೂಡಿಕೆದಾರರು ವಿಶೇಷವಾಗಿ ಗಮನಿಸಿ, ತಮ್ಮ ಶ್ಲಾಘನೆ ವ್ಯಕ್ತಪಡಿಸಿರುವುದು ವಿಶೇಷವಾಗಿರುತ್ತದೆ, ಬೇರೆ ಎಲ್ಲಾ ನಗರಗಳಿಂದ ಕೇವಲ ಕೈಗಾರಿಕಾ ಪ್ರತಿನಿಧಿಗಳು ಮಾತ್ರ ಪ್ರತಿನಿಧಿಸಿದ್ದು, ರಾಜಕೀಯ ಕ್ಷೇತ್ರದಿಂದ ಮತ್ತು ಜಿಲ್ಲಾಡಳಿತ ಪ್ರತಿನಿಧಿಸಿರುವುದಿಲ್ಲ.

ಕೈಗಾರಿಕೆಗಳ ಅಭಿವೃದ್ಧಿಗೆ, ಬಂಡವಾಳ ಹೂಡಿಕೆದಾರರಿಗೆ ಭರವಸೆ ಹೂಡಲು, ಸ್ಥಳೀಯವಾಗಿ ರಾಜಕೀಯ ಇಚ್ಛಾಶಕ್ತಿ, ಜಿಲ್ಲಾಢಳಿತದ ಬೆಂಬಲ ಮತ್ತು ಸ್ಥಳೀಯ ಕೈಗಾರಿಕೋದ್ಯಮಿಗಳ ನಂಬಿಕೆ ಬಹಳ ಪ್ರಮುಖ್ಯವಾಗಿರುವುದು ಎಂದು ಹಾಜರಿದ್ದ ಪ್ರತಿನಿಧಿಗಳು ತಮ್ಮ ಅಭಿಪ್ರಾಯಗಳ ಕೈಗಾರಿಕಾ ಜಂಟಿ ನಿರ್ದೇಶಕರಾದ ಶ್ರೀ ಗೋಕುಲ್‍ದಾಸ್ ನಾಯಕ್ ರವರು ಮತ್ತು ಐ.ಟಿ. ಕ್ಷೇತ್ರದ ಮಂಗಳೂರಿನ ಉದ್ಯಮಿಗಳು ಭಾಗವಿಹಸಿದರು.

ಮಂಗಳೂರಿನಲ್ಲಿ ಐ.ಟಿ. ಕ್ಷೇತ್ರಕ್ಕೆ ಇರುವ ವಿಫುಲ ಅವಕಾಶಗಳ ಕುರಿತು, ಮಂಗಳೂರಿನ ಮೂಲಭೂತ ಸೌಕರ್ಯಗಳ ಕುರಿತು ಮಾಹಿತಿ ನೀಡುವ ಕಿರು ಚಿತ್ರವನ್ನು ಪ್ರದರ್ಶಿಸಲಾಯ್ತು.

ಬೆಂಗಳೂರಿನಲ್ಲಿ 19ನೇ I.T. com ಬಂಡವಾಳ ಹೂಡಿಕೆದಾರರ ಸಮ್ಮೇಳನವನ್ನು ಸೋಮವಾರ, 28ನೇ ನವೆಂಬರ್ 2016 ರಂದು ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರು ಬೆಂಗಳೂರಿನ ಅರಮನೆ ಆವರಣದಲ್ಲಿ ಉದ್ಘಾಟಿಸಿದರು.

ಕೈಗಾರಿಕಾ ಸಚಿವರಾದ ದೇಶಪಾಂಡೆ ಯವರು, ಮಾಹಿತಿ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ ಖರ್ಗೆ ಯವರು, ಬೆಂಗಳೂರು ಅಭಿವೃದ್ಧಿ ಸಚಿವರಾದ ಕೆ.ಜೆ. ಜಾರ್ಜ್ ರವರು, ಶಾಸಕರು, ಹಿರಿಯ ಅಧಿಕಾರಿಗಳು, ಮಾಹಿತಿ ತಂತ್ರಜ್ಞಾನ ಉದ್ಯಮಿ ದಿಗ್ಗಜರು, ನೆದಲ್ರ್ಯಾಂಡ್, ಬಾಂಗ್ಲಾದೇಶ, ಜಪಾನ್, ಆಸ್ಟ್ರೇಲಿಯ, ಕೆನಡಾ, ಅಮೇರಿಕಾ ಮುಂತಾದ ಹಲವಾರು ದೇಶಗಳ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪರಿಣತರು ಹಾಜರಿದ್ದರು.


Spread the love