ಮಂಗಳೂರು: ಕಣಂತ್ತೂರು ಶ್ರೀ ಕ್ಷೇತ್ರದ ವೆಬ್ ಸೈಟ್ ಅನಾವರಣ

Spread the love

ಮಂಗಳೂರು: ಮುಡಿಪು, ಬಾಳೇಪುಣಿ ಗ್ರಾಮದ ಕಣಂತ್ತೂರು ಶ್ರೀ ತೋಡಕುಕ್ಕಿನಾರ್ ದೈವಸ್ಥಾನದ ವಾರ್ಸಿಕ ಜಾತ್ರೆಯ ವೇಳೆ ಶ್ರೀ ವೈದ್ಯನಾಥ ಸೇವಾ ಸಂಘದ ವಾರ್ಸಿಕೋತ್ಸವ ನಡೆಯಿತು ಈ ಸಂದರ್ಭದಲ್ಲಿ ಕ್ಷೇತ್ರದ ಪರಿಚಯ ಮಾಡಬಲ್ಲ ನೂತನ ವೆಬ್ ಸೈಟ್ ಅನಾವರಣಗೊಂಡಿತು.

kanthoro

 

ಮುಖ್ಯ ಅತಿಥಿಯಾಗಿದ್ದ ವಾಗ್ಮಿ ವಾಸುದೇವ ಆರ್ ಕೊಟ್ಟಾರಿಯವರು ಮಾತನಾಡುತ್ತಾ ಭಾರತೀಯ ಸಂಸ್ಕೃತಿ ಗ್ರಾಮೀಣ ಸೊಗಡಿನಲ್ಲಿದೆ, ಈ ತುಳುನಾಡಿನ ಮಕ್ಕಳು ಅಂಡರ್ ವಲ್ಡ್ನಿಂದ ಮಿಸ್ ವಲ್ಡ್ ತನಕ ಎಲ್ಲಾ ರಂಗದಲ್ಲೂ ಇದ್ದಾರೆ ತುಳುವ ಮಣ್ಣಿನ ಸುವಾಸನೆಯನ್ನು ಎಲ್ಲಿ ಹೋದರೂ ಪಸರಿಸುವ ಪ್ರಯತ್ನ ಮಾಡತ್ತಿದ್ದಾರೆ ಎಂದರು.
ಕೈರಂಗಳ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಮಹೇಶ್ ಚಟ, ಸಾಂದರ್ಭಿಕವಾಗಿ ಮಾತನಾಡಿದರು.

ಸಭಾಧ್ಯಕ್ಷತೆ ವಹಿಸಿದ್ದ ಕೈರಂಗಳ ಶ್ರೀ ಗೋಪಾಲ ಕೃಷ್ಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ತೋಡುಗುಳಿ ಮಹಾಬಲೇಶ್ವರ ಭಟ್ ಮಾತನಾಡಿ ದೇವರು ಒಬ್ಬನೇ, ಶೈವ-ವೈಷ್ಣವ ಎಂಬತ್ಯಾದಿ ಬೇಧಗಳೊಂದಿಗೆ ನಮ್ಮ ತನಮನ್ನು ಕಳೆದುಕೊಳ್ಳತ್ತಿರುವುದು ಹಿಂದೂ ಧರ್ಮಕ್ಕೆ ಶ್ರೇಯಸ್ಸು ಅಲ್ಲ ಎಂದರು ಈ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತ್ತು.

ತಿಮ್ಮಪ್ಪಗೊಂಡೆ ಯಾನೆ ಮಾಂಜು ಭಂಡಾರಿ, ಸಂತೋಷ್ ರೈ ಬೋಳಿಯಾರು ಮುಂತಾದವರು ಅತಿಥಿಗಳಾಗಿ ಉಪಸ್ಥಿತರಿದ್ದರು. ಶ್ರೀ ವೈದ್ಯನಾಥ ಸೇವಾ ಸಂಘದ ಅಧ್ಯಕ್ಷರಾದ ದೇವಿಪ್ರಸಾದ್ ಪೊಯ್ಯತ್ತಬೈಲ್ ಸ್ವಾಗತಿಸಿದರು. ನಿಕಟಪೂರ್ವ ಕಾರ್ಯದರ್ಶಿ ಸೀತಾರಾಮ ಗಟ್ಟಿ ವರದಿವಾಚಿಸದರು. ಭಾಸ್ಕರ್ ಕೋಟ್ಯಾನ್ ವಂದಿಸಿ ಚಂದ್ರಹಾಸ್ ಕಣಂತ್ತೂರು ನಿರೂಪಿಸಿದರು.


Spread the love