ಮಂಗಳೂರು: ಯುವ ವಕೀಲರ ಮೇಲೆ ಹಲ್ಲೆ ನಡೆಸಿದ ಕದ್ರಿ ಠಾಣಾಧಿಕಾರಿ ಟಿ ಡಿ ನಾಗರಾಜ್ ಅವರನ್ನು ಒತ್ತಾಯಿಸುವಂತೆ ಮಂಗಳೂರು ವಕೀಲ ಸಂಘದಿಂದ ನ್ಯಾಯಾಲಯ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಎಸ್ ಪಿ ಚೆಂಗಪ್ಪ ಜುಲೈ 31 ರಂದು ಠಾಣಾಧಿಕಾರಿ ನಾಗರಾಜ್ ಅವರು ಯುವ ವಕೀಲ ಉತ್ತಮ್ ಕುಮಾರ್ ರೈ ಅವರು ತಮ್ಮ ಕಕ್ಷಿದಾರರನ ಕುರಿತಾದ ಕೇಸಿನ ಮೇಲೆ ಠಾಣಾಧಿಕಾರಿಯವರಲ್ಲಿ ಮಾತನಾಡಲು ತೆರಳಿದ ವೇಳೆ ನಾಗರಾಜ್ ಅವರು ವಕೀಲರ ಮೇಲೆ ಹಲ್ಲೆ ನಡೆಸಿದ್ದರು. ಈ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಅವರನ್ನು ಅಮಾನತುಗೊಳಿಸಲು ಒತ್ತಾಯಿಸಲಾಗಿತ್ತು. ಪೋಲಿಸ್ ಕಮೀಷನರ್ ಕೂಡಲೇ ಅವರನ್ನು ಅಮಾನತುಗಳಿಸಿದ್ದು ಅಭಿನಂದನಾರ್ಹ ಆದರೆ ಈ ವರೆಗೆ ಅವರನ್ನು ಬಂಧಿಸಲಾಗಿಲ್ಲ ಇದು ಖಂಡನೀಯ.
ಠಾಣಾಧಿಕಾರಿ ನಾಗರಾಜ್ ಅವರನ್ನು ಕಾನೂನು ವ್ಯಾಪ್ತಿಯಲ್ಲಿ ಬರುವಂತವರಾದಲ್ಲಿ ಅವರನ್ನು ಕೂಡಲೇ ಬಂಧಿಸಬೇಕು. ವಕೀಲರಾದ ನಾವು ಕಾನೂನನ್ನು ಗೌರವಿಸಿದ್ದು, ಕಾನೂನಿನ ಪ್ರಕಾರ ವಕೀಲ ಉತ್ತಮ್ ಕುಮಾರ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಜಾಮೀನು ಪಡೆದಿರುತ್ತೇವೆ ಇಲ್ಲವಾದಲ್ಲಿ ಅವರನ್ನು ಕೂಡ ಬಂಧಿಸಲು ಅವಕಾಶವಿತ್ತು. ಒಂದು ವೇಳೆ ಸಂಬಂಧಿತ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳದೆ ಹೋದಲ್ಲಿ ನಾವು ಕಾನೂನು ರೀತಿಯಲ್ಲಿ ಹೋರಾಟ ನಡೆಸಲಾಗುವುದು ಎಂದರು.
ಸಂಘದ ಉಪಾಧ್ಯಕ್ಷ ಯಶೋಧರ ಕರ್ಕೆರಾ, ಕಾರ್ಯದರ್ಶಿ ರಾಘವೇಂದ್ರ ಎಚ್ ವಿ, ಕೋಶಾಧಿಕಾರಿ ಯತೀಶ್, ವಕೀಲರಾದ ಉತ್ತಮ್ ಕುಮಾರ್ ರೈ, ರಾಘವೇಂದ್ರ, ಸುಮನಾ ಶರಣ್ ಇನ್ನಿತರರು ಉಪಸ್ಥಿತರಿದ್ದರು.