Home Mangalorean News Kannada News ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 2015ನೇ ಸಾಲಿನ ಕೊಂಕಣಿ ಕ್ಯಾಲೆಂಡರ್ ಬಿಡುಗಡೆ

ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 2015ನೇ ಸಾಲಿನ ಕೊಂಕಣಿ ಕ್ಯಾಲೆಂಡರ್ ಬಿಡುಗಡೆ

Spread the love

ಮಂಗಳೂರು: ಅಕಾಡೆಮಿಯು 2015ನೇ ಸಾಲಿನಲ್ಲಿ ಕೊಂಕಣಿ ಕ್ಯಾಲೆಂಡರನ್ನು ಪರಿಚಯಿಸಿತ್ತು. ಕೊಂಕಣಿ ನೃತ್ಯ ಪ್ರಕಾರಗಳ ಚಿತ್ರಗಳು, ಅವುಗಳಿಗೆ ವಿವರಣೆ, ಅದೇ ರೀತಿ ಕೊಂಕಣಿ ಅಕಾಡೆಮಿಯ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲಾಗಿತ್ತು. ಆ ಪ್ರಯೋಗ ಜನಮೆಚ್ಚುಗೆ ಗಳಿಸಿದ ಪರಿಣಾಮ ಈ ಸಲ ವಿಶೇಷವಾಗಿ ಕೊಂಕಣಿ ಕ್ಯಾಲೆಂಡರನ್ನು ರೂಪಿಸಲಾಗಿದೆ.

kksa

ಚಿತ್ರಕಲೆಯಲ್ಲಿ ಪರಿಣತಿ ಪಡೆದ 6 ಕಲಾವಿದರಿಂದ, ನಾಲ್ಕು ದಿನಗಳ ಕಾರ್ಯಾಗಾರದಲ್ಲಿ ರಚಿಸಿದ ಕೊಂಕಣಿ ಸಂಸ್ಕøತಿಯನ್ನು ಬಿಂಬಿಸುವ 12 ವಿವಿಧ  ಕಲಾಕೃತಿಗಳನ್ನು ಕ್ಯಾಲೆಂಡರ್‍ನಲ್ಲಿ ಬಳಸಲಾಗಿದೆ. ಈ ಶಿಬಿರದಲ್ಲಿ ವೀಣಾ ಶ್ರೀನಿವಾಸ್ (ಕಾವಿಕಲೆ ಮತ್ತು ರಂಗೋಲಿ) ಸ್ವಪ್ನಾ ನೊರೊನ್ಹಾ (ಕ್ರೈಸ್ತ ಮದುವೆ ಮತ್ತು ಕುಂಬಾರಿಕೆ) ವಿಶ್ವಾಸ್ ಎಂ., (ಸಿದ್ದಿ ನೃತ್ಯ ಮತ್ತು ಸಿದ್ದಿ ದೈವಾರಾಧನೆ) ವಿಲ್ಸನ್ ಡಿಸೋಜ, (ಕ್ರಿಸ್ಮಸ್ ಆಟ ಮತ್ತು  ಚೂಡಿ ಪೂಜೆ) ಜೀವನ್ ಸಾಲ್ಯಾನ್ (ಕೃಷಿ ಮತ್ತು ಕೊಂಕಣಿಯ 9 ನೃತ್ಯ ಪ್ರಕಾರಗಳು) ಹಾಗೂ ರವಿ ವಾಗ್ಳೆ (ಮೇಸ್ತ ಮತ್ತು ಖಾರ್ವಿ) ಇವರು ಭಾಗವಹಿಸಿದ್ದರು. ಕಲಾವಿದ ಪಿ.ಎಮ್. ಕುಮಾರ್ ಇವರ ಒಂದು ಕಲಾಕೃತಿಯನ್ನು ಕ್ಯಾಲೆಂಡರ್‍ಗೆ ವಿಶೇಷವಾಗಿ ಬಳಸಲಾಗಿದೆ. ಅದೇ ರೀತಿ ಈ ಕಲಾಕೃತಿಗಳಿಗೆ ಸಂಬಂಧಪಟ್ಟಂತೆ ಕೊಂಕಣಿ ಲೇಖಕ ವಿತೊರಿ ಕಾರ್ಕಳ ವಿವರಣೆಗಳನ್ನು ಬರೆದಿದ್ದಾರೆ.

ಈ ಮೂಲಕ ಕೊಂಕಣಿಯ ವೈವಿಧ್ಯಮಯ ಸಾಂಸ್ಕøತಿಕ ಜಗತ್ತನ್ನು ವಿಶಿಷ್ಟವಾಗಿ ಅನಾವರಣಗೊಳಿಸುವ ಕೆಲಸವನ್ನು ಕೊಂಕಣಿ ಅಕಾಡೆಮಿ ಮಾಡಿದೆ.

ಕೊಂಕಣಿ ಕಲಿಕೆ:

2007 ವರ್ಷದಿಂದ ಕೊಂಕಣಿ ಕಲಿಕೆ ಆರಂಭವಾಗಿದ್ದರೂ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ  ಶಾಲೆಗಳು ಮಾತ್ರ ಕೊಂಕಣಿ ಕಲಿಸುತ್ತಿವೆ. ಸುಮಾರು 50,000 ಕೊಂಕಣಿ ಮಾತೃಭಾಷಿಕ ವಿದ್ಯಾರ್ಥಿಗಳಿದ್ದಾರೆ ಎಂದು ಅಂದಾಜಿದ್ದರೂ, ಕನ್ನಡ ಅಥವಾ ದೇವನಾಗರಿ ಲಿಪಿಯಲ್ಲಿ ಕೊಂಕಣಿ ಕಲಿಸಲು ಅವಕಾಶ ನೀಡಿದ್ದರೂ ಕೊಂಕಣಿ ಕಲಿಯುವ ಮಕ್ಕಳ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿಲ್ಲ. ಹತ್ತನೇ ತರಗತಿಯಲ್ಲಿ ಕೊಂಕಣಿ ಪರೀಕ್ಷೆ ಬರೆಯಲು ಅವಕಾಶವಿದೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪದವಿಯಲ್ಲಿ ಕೊಂಕಣಿ ಕಲಿಯಲು ಅವಕಾಶ ನೀಡಲಾಗಿದೆ. ಪದವಿ ಪೂರ್ವ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಕೊಂಕಣಿ ಸೇರ್ಪಡೆಗೆ ಅವಕಾಶ ಕೋರಲಾಗಿದೆ. ಜಾಗೃತಿ ಅಭಿಯಾನ, ಮಾಹಿತಿ ಸಭೆ ಇತ್ಯಾದಿ ಮಾಡಿ ಜನರಿಗೆ ತಮ್ಮ ಮಾತೃಭಾಷೆಯನ್ನು ತಮ್ಮ ಮಕ್ಕಳಿಗೆ ಕಲಿಸುವ ಅವಕಾಶದ ಬಗ್ಗೆ ಮನವರಿಕೆ ಮಾಡಲಾಗಿದೆ.

ಆದರೆ ಇದುವರೆಗೆ ಉತ್ತರ ಕನ್ನಡದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲದ ಕಾರಣ ಡಿಸೆಂಬರ್ 9 ರಿಂದ 11 ವರೆಗೆ ಮೂರು ದಿನ ಜಿಲ್ಲೆಯ ಕೆಲ ಪ್ರಮುಖ ಸ್ಥಳಗಳ ಶಾಲೆ ಕಾಲೇಜುಗಳು, ಆಡಳಿತ ಮಂಡಳಿ, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಇವರುಗಳನ್ನು ಭೇಟಿ ಮಾಡಿ ಕೊಂಕಣಿ ಕಲಿಕೆ ಬಗ್ಗೆ ಅಭಿಯಾನ ನಡೆಸಲಾಗುವುದು. ಮುಂದಿನ ಸಾಲಿನಿಂದ ಹೆಚ್ಚು ಮಕ್ಕಳು ಕೊಂಕಣಿ ಕಲಿಯುವಂತೆ ಮನವರಿಕೆ ಮಾಡಲು ಈ ಅಭಿಯಾನ ಅಯೋಜಿಸಲಾಗಿದೆ.

ಕೊಂಕಣಿ ಸಾಕ್ಷ್ಯಚಿತ್ರ: ಸಿದ್ದಿ ಕಲಾವಿದೆ

ಕೊಂಕಣಿಯ 41 ಸಮುದಾಯಗಳಲ್ಲಿ ಸಿದ್ದಿ ಸಮುದಾಯವು ಒಂದು. ಕೊಂಕಣಿ ಮಾತೃಭಾಷಿಕ ಏಕೈಕ ಪರಿಶಿಷ್ಟ ಪಂಗಡವಾಗಿರುವ ಸಿದ್ದಿ ಜನರು ಉತ್ತರ ಕನ್ನಡದಲ್ಲಿ ಹೆಚ್ಚಾಗಿ ಕಂಡು ಬರುತ್ತಾರೆ. ಇವರಲ್ಲಿ ಜನಪದ ಕಲೆ ಮತ್ತು ಸಂಸ್ಕøತಿ ಶ್ರೀಮಂತವಾಗಿದೆ.

ಕೊಂಕಣಿ ಅಕಾಡೆಮಿ ವತಿಯಿಂದ ಗಿರಿಜನ ಅಭಿವೃದ್ಧಿ ಯೋಜನೆಯಡಿ ಈ ಸಾಕ್ಷ್ಯಚಿತ್ರವನ್ನು ತಯಾರಿಸಲಾಗಿದೆ. ಜುಬೆಲಾ ಫ್ರಾನ್ಸಿಸ್ ಸಿದ್ದಿ ಎಂಬ ಯಲ್ಲಾಪುರದ ಹಿರಿಯ ಕಲಾವಿದೆಯ ಪರಿಚಯವನ್ನು ಈ ಸಾಕ್ಷ್ಯಚಿತ್ರದಲ್ಲಿ ನೀಡಲಾಗಿದೆ. ಮತ್ತು ಸಿದ್ದಿ ಕಲೆ, ಸಂಸ್ಕøತಿ, ವಸತಿ, ಶಿಕ್ಷಣ, ಭಾಷಾ ಪ್ರಬೇಧ ಇತ್ಯಾದಿ ಅವರ ಜೀವನ ವಿವರಗಳ ಕಿರು ಪರಿಚಯ ನೀಡಲಾಗಿದೆ.

ಲೋಕಾರ್ಪಣೆಗೊಳ್ಳುವ ಹೊಸ ಪುಸ್ತಕಗಳು:

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕೊಂಕಣಿ ಸಾಹಿತ್ಯದ ಬೆಳವಣಿಗೆಗೆ ಸಹಕಾರ ನೀಡಿದೆ. ವಿವಿಧ ಪ್ರಕಾರಗಳ ಪುಸ್ತಕಗಳನ್ನು ಪ್ರಕಟಿಸಿ ಜನರಿಗೆ ತಲುಪಿಸುವಲ್ಲಿ ಶ್ರಮ ವಹಿಸಿದೆ. ಪ್ರಸ್ತುತ 2014-17 ನೇ ಸಾಲಿನ ಸಮಿತಿಯು ಕೊಂಕಣಿ ಸಾಹಿತ್ಯ ಪ್ರಕಟಣೆ ಮತ್ತು ಮಾರಾಟಕ್ಕೆ ವಿಶೇಷ ಒತ್ತು ನೀಡಿದೆ. ಪ್ರತಿ ತಿಂಗಳಿಗೆರಡು ಹೊಸ ಪುಸ್ತಕಗಳನ್ನು ಪ್ರಕಟಿಸುವ ಯೋಜನೆಯಂತೆ ಸಾಹಿತ್ಯದ ವಿವಿಧ ಪ್ರಕಾರ, ಕೊಂಕಣಿಯ ವಿವಿಧ ಪ್ರಬೇಧ ಹಾಗೂ ಪ್ರದೇಶಗಳ ಮತ್ತು ವಿವಿಧ ವಯೋಮಾನದ ಲೇಖಕರಿಗೆ ಅವಕಾಶ ನೀಡಿ ಅವರ ಸಾಹಿತ್ಯ ಪ್ರಕಟಿಸಿದೆ.

ಆ ಸಾಹಿತ್ಯವನ್ನು ಜನರಿರುವಲ್ಲಿ ತಲುಪಿಸಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು `ಮೊಬೈಲ್ ಕೊಂಕಣಿ ಬಜಾರ್’ ಎಂಬ ವಿಶಿಷ್ಟ ಮಾರಾಟ ವ್ಯವಸ್ಥೆಯನ್ನು ಕೂಡಾ ಮಾಡಿದೆ. ಅಕಾಡೆಮಿಯೊಡನೆ ಇತರ ಪ್ರಕಾಶಕರ ಪುಸ್ತಕ ಮತ್ತು ಸಿಡಿಗಳನ್ನು ಕೂಡಾ ಮೊಬೈಲ್ ಕೊಂಕಣಿ ಬಜಾರ್‍ನಲ್ಲಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಲಾಭಕ್ಕಾಗಿ ಅಲ್ಲದ, ಜನರಲ್ಲಿ ಸಾಹಿತ್ಯ ಪ್ರೀತಿಯನ್ನು ಬೆಳೆಸುವ ಉದ್ದೇಶದಿಂದ ಆರಂಭಿಸಿದ ಈ ವ್ಯವಸ್ಥೆಯಿಂದ ಹಳ್ಳಿಗಾಡಿನ, ರಾಜ್ಯದ ಕೊಂಕಣಿ ಜನಬಾಹುಳ್ಯವಿರುವ, ಹಬ್ಬ, ಜಾತ್ರೆ, ಕಾರ್ಯಕ್ರಮಗಳಲ್ಲಿ, ಜನರಿಗೆ ತಮಗೆ ಬೇಕಾದ ಪುಸ್ತಕ, ಸಿಡಿಗಳನ್ನು ತಮ್ಮ ಖರೀದಿಸುವ ಅವಕಾಶ ದೊರೆತಿದೆ.

ಲೋಕಾರ್ಪಣೆಗೊಳ್ಳುವ ಪುಸ್ತಕಗಳು: ಕೊಂಕ್ಣಿ ಭಾಸ್ (ವ್ಯಾಕರಣ್): ಕೊಂಕಣಿಯ 77 ವರ್ಷಗಳ ಹಿರಿತನವಿರುವ ರಾಕ್ಣೊ ಪತ್ರಿಕೆಯ ಪ್ರಸ್ತುತ ಸಂಪಾದಕರಾಗಿರುವ ಫಾದರ್ ವಾಲೆರಿಯನ್ ಫೆರ್ನಾಂಡಿಸ್ ಇವರು ಕೊಂಕಣಿ ಭಾಷೆ, ವ್ಯಾಕರಣ ಮತ್ತು ಪ್ರಮಾಣ ರೀತಿಯ ಬಗ್ಗೆ ಬರೆದಿರುವ ಪುಸ್ತಕ. ಇಂದು ಕೊಂಕಣಿ ಕಲಿಯುವ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ಕೊಂಕಣಿ ಕಲಿಯಲು ಆಸಕ್ತಿ ಇರುವ ಭಾಷಾಭಿಮಾನಿಗಳಿಗೆ ಉಪಯುಕ್ತ ಪುಸ್ತಕ.

ಅನಾಮಿಕ: ಕೊಂಕಣಿ ಮತ್ತು ಮಲಯಾಳಂನ ಪ್ರಸಿದ್ಧ ಲೇಖಕರಾದ ಭಕ್ತಾ ಆರ್. ಕಾಞÁಂಗಾಡ್ ಅವರು ದೇವನಾಗರಿ ಲಿಪಿಯಲ್ಲಿ ಬರೆದ ಹತ್ತು ಕಥೆಗಳ ಸಂಗ್ರಹ.

ಈ ಸಮಿತಿಯ ಅವಧಿಯಲ್ಲಿ ಇದುವರೆಗೆ ಪ್ರಕಟಿಸಿದ ಪುಸ್ತಕಗಳ ವಿವರ:

1              ಫೂಲ್ ಆನ್ನಿ ಕಾಂಟೊ (ಕವಿತಾ ಸಂಗ್ರಹ)              ಕೊಚ್ಚಿ ಅನಂತ್ ಭಟ್, ಕೇರಳ                30.00

2              ಮೇಘದೂತ (ಅನುವಾದಿತ ಕಾವ್ಯ)       ಡಾ. ಅರವಿಂದ ಶ್ಯಾನುಭಾಗ, ಬಿಜಾಪುರ30.00

3              ಅಸ್ತಮಾನ (ಕಾದಂಬರಿ)        ಕೆ. ಶಾರದಾ ಭಟ್, ಉಡುಪಿ   75.00

4              ಪುಷ್ಪಮಾಳ್ (ಬಾಲ ಗೀತೆ)    ಡಾ. ವಾರಿಜಾ ನಿರ್ಬೈಲ್, ಬಂಟ್ವಾಳ     50.00

5              ಭಾಂಗ್ರಾಚಿ ಗೊದ್ದಡಿ (2 ನಾಟಕ)           ದಿ. ವಾಸುದೇವ ಶೆಣೈ, ಉಡುಪಿ             75.00

6              ಸುಮತಿ (ಸಣ್ಣ ಕತೆ)                ಹೇಮಾಚಾರ್ಯ, ಮಂಗಳೂರು             75.00

7              ಸರ್ಣೆತಾಂ (ಕಾದಂಬರಿ)        ಜೊಯೆಲ್ ಪಿರೇರಾ, ಮಂಗಳೂರು       100.00

8              ಜ್ಞಾನೇಶ್ವರಿ (ಲಿಪ್ಯಂತರಿತ ಮಹಾಕಾವ್ಯ)               ಮಧುಕರ್ ಚಂದಾವರ್ಕರ್, ಮುಂಬಯಿ 125.00

9              ಕೊಂಕಣಿ ಸಂಪದ (ಶಿಕ್ಷಕರಿಗೆ ಕೈಪಿಡಿ)   ವಿವಿಧ ಶಿಕ್ಷಕರು       60.00

10           ಅಪಹರಣ್ (ಅನುವಾದಿತ ಕತೆಗಳು)      ಜೆ. ವಿ. ಕಾರ್ಲೊ, ಹಾಸನ      75.00

11           ಚಾಲ್ತಿ ಕೊಂಕ್ಣಿ (ಸಾಮಾನ್ಯ ಕೊಂಕಣಿ ಮಾಹಿತಿ)   ದಿ. ಜೊರ್ಜಿ ಪಿಂಟೊ, ಐಕಳ    50.00

12           ಬಾಯ್ಲ ಮೆಗೆಲಿ ಕುಳಾರ್ ಗೆಲಿ (3 ನಾಟಕಗಳು)    ದಿ. ಗಣೇಶ ಶÀರ್ಮಾ, ಉಡುಪಿ              75.00

13           ರತ್ನಗಿರಿಚೊ ಸರ್ದಾರ್ (3 ನಾಟಕಗಳು)               ಜೊನ್ ಎಮ್. ಪೆರ್ಮನ್ನೂರು 75.00

14           ಭಾಂಗಾರಾಚೊ ಕೀರ್ (ಮಕ್ಕಳ ಕತೆಗಳು)          ಜೆ.ಎಫ್. ಡಿಸೋಜ, ಅತ್ತಾವರ               75.00

15           ಜಾದೂ ಡೋಲ್ (ಮಕ್ಕಳ ಅನುವಾದಿತ ಕತೆಗಳು)               ಗೌರಿ ಮಲ್ಯ, ಮಂಗಳೂರು     75.00

16           ಉಣ್ಯಾ ಭಾವಾಡ್ತಾಚೆ (1008 ಪುಟಗಳ ಬೃಹತ್ ಕಾದಂಬರಿ)                ಎಡ್ವಿನ್ ಜೆ. ಎಫ್. ಡಿಸೊಜಾ, ಮಂಗಳೂರು          750.00

17           ಆಯೆರಾಚೊ ಬೂಕ್ (ಕವಿತಾ ಸಂಗ್ರಹ)                ಆ್ಯಂಡ್ರೂ ಎಲ್. ಡಿಕುನ್ಹಾ, ಬಿಜೈ             75.00

18           ಖಾಂದಿ ಖುರಿಸ್ (ಕತಾ ಸಂಗ್ರಹ)           ವಲ್ಲಿ ವಗ್ಗ, ಮೈಸೂರು              75.00

19           ತಸ್ವೀಂತ್ (ಚಿತ್ರ-ಕವಿತೆ)        ವಿಲ್ಸನ್ ಕಯ್ಯಾರ/ವಿಲ್ಸನ್, ಕಟೀಲು     250.00

20           ರಾಮರಸಾಳೊ (ಜಾನಪದ ಸಂಗ್ರಹ)   ರಾಜೇಶ್ ಯು. ಮರಾಠಿ, ಕಾರವಾರ     50.00

21           ಗಾಬಿತ್ (ಕೊಂಕಣಿ ಫೆಲೊಶಿಫ್)           ವಿತ್ತಿ, ಬೆಂಗಳೂರು (ಮಸ್ಕತ್)                100.00

22           ನೈಸರ್ಗಿಕ್ ಭಲಾಯ್ಕಿ (ಬಯೊಸೆರಾಮಿಕ್ ಉಪಚಾರ)         ಡಾ ವಿನ್ಸೆಂಟ್ ಡಿಮೆಲ್ಲೊ, ವಸಯಿ, ಮಹಾರಾಷ್ಟ್ರ.00

23           ವಿಂಚ್ಣಾರ್ ಸಾಂಗ್ಣ್ಯೊ (ಹೇಳಿಕೆಗಳು)     ವಿಲ್ಫ್ರೆಡ್ ಡಾಯಸ್, ಹೊನ್ನಾವರ           30.00

24           ರಂಗೋಲಿ (ಕೊಂಕಣಿ ಫೆಲೊಶಿಫ್)       ವಿದ್ಯಾ ನಾಯಕ್, ಮಂಗಳೂರು            100.00

25           ಗ್ಯಾನ್ ವಿಗ್ಯಾನ್ (ವೈಜ್ಞಾನಿಕ ಲೇಖನಗಳು)        ಪ್ರಮೋದ್ ರೊಡ್ರಿಗಸ್, ಹೊಸ್ಪೆಟ್ (ಬೆಂಗಳೂರು)                100.00

26           ಕೊಂಕ್ಣಿ  ಕ್ರಿಸ್ತಾಂವ್ ಕಾಜಾರಾಂ (ಸಂಸ್ಕøತಿ ಮಾಹಿತಿ)        ಹೆರೊಲ್ಪಿಯುಸ್, ಮಂಗಳೂರು              75.00

27           ಲೊಸುಣ್ ಲೂಸಿ (9 ಕಿರು ನಾಟಕಗಳು) ಮುಂಡ್ರೆಲ್ ಸಿರಿಲ್, ಮಂಗಳೂರು          75.00

28           ಅಧ್ಭುತ ಲೋಕಾಂತು ಆಲಿಸ್ (ಅನುವಾದ)           ಪದ್ಮಾ ಬಾಳಿಗಾ/ವಿದ್ಯಾ ಶೆಣೈ, ಬೆಂಗಳೂರು       60.00

29           ಉತ್ರಾಂ ಆನ್ನಿ ಮೌನ (ವೈಚಾರಿಕ ಲೇಖನಗಳು)  ಬಿ.ಪಿ. ಶಿವಾನಂದ ರಾವ್, ಬೆಂಗಳೂರು 75.00

30           ಮೇಸ್ತ (ಕೊಂಕಣಿ ಫೆಲೊಶಿಫ್)               ರಮಾನಾಥ ಮೇಸ್ತ, ಶಿರೂರು 100.00

31           ಸಂತಕವಿ ಕನಕದಾಸ (ಅನುವಾದ)       ಡಾ. ಗೀತಾ ಶೆಣೈ, ಬೆಂಗಳೂರು            60.00

32           ಜ್ಞಾನೇಶ್ವರಿ (ಮಹಾಕಾವ್ಯ-ದೇವನಾಗರಿ ಲಿಪಿಯಲ್ಲಿ)             ಮಧುಕರ್ ಚಂದಾವರ್ಕರ್, ಮುಂಬಯಿ 500.00

33           ಬ್ರಹ್ಮಾಲಿ ಗಾಂಟಿ (2 ನಾಟಕಗಳು)        ಕೆ. ಶಾಂತಾರಾಮ ಹೆಗಡೆ, ಕುಂದಾಪುರ               75.00

34           ಪಯ್ಣ್ (ಕತಾ ಸಂಗ್ರಹ)           ಮೆಲ್ವಿನ್ ಪಿಂಟೊ, ನೀರುಡೆ

                                                (ಇದು ಅಕಾಡೆಮಿಯ 100 ನೇ ಪ್ರಕಟಣೆ)

35           ಗುಲ್‍ಮೊಹರ್ (ಕವಿತಾ ಸಂಗ್ರಹ ದೇವನಾಗರಿ ಲಿಪಿಯಲ್ಲಿ)   ಫಿಲೊಮಿನಾ ಸಾಂಫ್ರಾನ್ಸಿಸ್ಕೊ, ಮುಂಬಯಿ,

36           ಕೊಂಕ್ಣಿ ಭಾಸ್ (ವ್ಯಾಕರಣ)   ಫಾ. ವಾಲೆರಿಯನ್ ಫೆರ್ನಾಂಡಿಸ್, ಮಂಗಳೂರು 100.00

37           ಅನಾಮಿಕಾ (ಸಣ್ಣ ಕತೆಗಳು-ದೇವನಾಗರಿ ಲಿಪಿಯಲ್ಲಿ)          ಭಕ್ತಾ ಆರ್. ಕಾಞÁಂಗಾಡ್, (ಕೇರಳ), ಬೆಂಗಳೂರು

ಪತ್ರಿಕಾ ಗೋಷ್ಟಿಯಲ್ಲಿ ರೊಯ್ ಕ್ಯಾಸ್ತೆಲಿನೊ, ಅಧ್ಯಕ್ಷರು, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಲಾರೆನ್ಸ್ ಡಿಸೋಜ, ಸದಸ್ಯರು, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಡಾ ಬಿ. ದೇವದಾಸ ಪೈ, ರಿಜಿಸ್ಟ್ರಾರ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಅರವಿಂದ ಶಾನಭಾಗ, ಸದಸ್ಯರು, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಉಪಸ್ಥಿತರಿದ್ದರು.


Spread the love

Exit mobile version