ಮಂಗಳೂರು: ಕಾಂಗ್ರೆಸ್ ವತಿಯಿಂದ ನಿರಂತರ ಉಚಿತ ವ್ಯೆದ್ಯಕೀಯ ಶಿಬಿರ: ಜೆ.ಆರ್. ಲೋಬೊ

Spread the love

ಮಂಗಳೂರು: ಶಾಸಕ ಜೆ.ಆರ್. ಲೋಬೊ ನಾಯಕತ್ವದಲ್ಲಿ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ 43ನೇ ಕುದ್ರೋಳಿ ವಾರ್ಡ್ ಕಾಂಗ್ರೆಸ್ ಸಮಿತಿ ಇದರ ಜಂಟಿ ಆಶ್ರಯದಲ್ಲಿ ದ್ವೀತಿಯ ಉಚಿತ ವ್ಯೆದ್ಯಕೀಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ ಮತ್ತು ಉಚಿತ ದಂತ ವ್ಯೆದ್ಯಕೀಯ ತಪಾಸಣಾ ಶಿಬಿರ ಆದಿತ್ಯವಾರ ಕುದ್ರೋಳಿಯ ಸರಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಸ್ವಾಸ್ಥ ಸಮಾಜದ ನಿರ್ಮಾಣಕ್ಕೆ ವ್ಯೆದ್ಯಕೀಯ ಶಿಬಿರಗಳು ಸಹಕಾರಿಯಾಗಿದ್ದು, ಮುಂದಿನ ದಿನಗಳಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರ ವ್ಯಾಪ್ತಿಯಲ್ಲಿರುವ ಎಲ್ಲಾ ವಾರ್ಡುಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಈ ಮೂಲಕ ಕಾಂಗ್ರೆಸ್ ಸರಕಾರದ ಸಾಧನೆ ಹಾಗು ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಹೇಳಿದರು.

1 2 3

ಮೆರವಣಿಗೆಯ ಮೂಲಕ ಪ್ರಾರಂಭಗೂಂಡ ಈ ಶಿಬಿರದಲ್ಲಿ ಸುಮಾರು 250ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದು, 100ಕ್ಕೂ ಅಧಿಕ ಜನರಿಗೆ ಉಚಿತ ಕನ್ನಡಕ ವಿತರಿಸಲಾಯಿತು. ನಗರದ ಕೆ.ಎಂ.ಸಿ. ಆಸ್ಪತ್ರೆ, ರೆಡ್‍ಕ್ರಾಸ್ ಬ್ಲಡ್ ಬ್ಯಾಂಕ್ ಮತ್ತು ಎ.ಜೆ. ಶೆಟ್ಟಿ ಆಸ್ಪತ್ರೆಯ ಸಹಯೋಗದೊಂದಿಗೆ ನಡೆದ ಈ ಶಿಬಿರದಲ್ಲಿ ಕಣ್ಣು, ಕಿವಿ, ಗಂಟಲು, ಮೂಳೆ, ಸ್ತ್ರಿ ರೋಗ, ಚರ್ಮ, ಸಾಮಾನ್ಯ ಕಾಯಿಲೆಯ ಪರೀಕ್ಷೆಯನ್ನು ಉಚಿತವಾಗಿ ನೀಡಲಾಯಿತು.

ಹಿರಿಯ ಕಾಂಗ್ರೆಸ್ ಮುಖಂಡ ಮೊಹಮ್ಮದ್ ಮಸೂದ್ ಕಾರ್ಯಕ್ರಮ ಉದ್ಘಾಟಿಸಿದರು. ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜ, ನಗರ ಪಾಲಿಕೆಯ ಮಹಾ ಪೌರರಾದ ಜೆಸಿಂತಾ ಅಲ್ಫ್ರೇಡ್, ಪಾಲಿಕೆಯ ಸದಸ್ಯಯರು, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎಮ್.ಎಸ್. ಮೊಹಮ್ಮದ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್‍ದಾಸ್, ಸುರೇಶ್ ಬಲ್ಲಾಳ್, ನಗರ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಂಶುದ್ದೀನ್, ಬಿ. ಪ್ರಭಾಕರ್ ಶ್ರೀಯಾನ್, ಜುಮ್ಮ ಮಸೀದಿಯ ಧರ್ಮಗುರು ಮೊಯ್ದಿನ್, ಅಬೂಬಕ್ಕರ್, ಯುಸುಫ್ ಖಾರ್‍ದರ್, ಮಕ್‍ಬೂಲ್, ಟಿ.ಕೆ. ಸುಧೀರ್, ರಾಮನಚಿದ್ ಪೂಜಾರಿ ಮುತ್ತಾದವರು ಉಪಸ್ಥಿತರಿದ್ದರು.


Spread the love