Spread the love
ಮಂಗಳೂರು ಕಾರಾಗೃಹಕ್ಕೆ ಕಮಿಷನರ್ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ದಾಳಿ
ಮಂಗಳೂರು : ಮಂಗಳೂರು ಜೈಲಿಗೆ ನೂತನ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದ ಪೊಲೀಸ್ ತಂಡ ರವಿವಾರ ಬೆಳಗ್ಗೆ ದಾಳಿ ನಡೆಸಿ, ವಿವಿಧ ಸೆಲ್ ಗಳಲ್ಲಿ ತೀವ್ರ ತಪಾಸಣೆ ನಡೆಸಿದೆ.
ಈ ಸಂದರ್ಭ ಜೈಲಿನಲ್ಲಿ 6 ಮೊಬೈಲ್ ಗಳು ಹಾಗು 3 ಚೂರಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಮಾತನಾಡಿದ ಆಯುಕ್ತರು, ಮಂಗಳೂರು ಜಿಲ್ಲಾ ಕಾರಾಗೃಹದ ಡಿಡೀರ್ ತಪಾಸಣೆ ನಡೆಸಿದಾಗ ಕೈದಿಗಳು ಉಪಯೋಗಿಸುತ್ತಿದ್ದ ಆರು ಮೊಬೈಲ್ ಹಾಗೂ ಮೂರು ಮೊನಚಾದ ಚಾಕುಗಳು ಪತ್ತೆಯಾಗಿರುತ್ತವೆ. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ತನಿಖೆ ಕೈಗೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
Spread the love