ಮಂಗಳೂರು: ಸಂಘದ ಕಛೇರಿಯಲ್ಲಿ ಜರಗಿದ ಗಾಂಧಿ ಜಯಂತಿ/ ಪ್ರತಿಭಾ – ಪುರಸ್ಕಾರ/ಸನ್ಮಾನ ಕಾರ್ಯಕ್ರಮವನ್ನು ಶ್ರೀ ಮೊಹಿದ್ದೀನ್ ಭಾವ ಶಾಸಕರು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಇವರು ಮಹಾತ್ಮ ಗಾಂಧಿ ಭಾವ ಚಿತ್ರಕ್ಕೆ ಹೂಹಾರ ಹಾಕಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಶ್ರೀ ರೊನಾಲ್ಡ್ ಅನಿಲ್ ಫೆರ್ನಾಂಡೀಸ್ ಅಧ್ಯಕ್ಷರು ಪ್ರೆಸ್ ಕ್ಲಬ್, ಉಪಾಧ್ಯಕ್ಷರು ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ದ.ಕ ಮಂಗಳೂರು, ಶ್ರೀ ಪ್ರಕಾಶ್ ನಾಯಕ್ ಅಧ್ಯಕ್ಷರು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ (ರಿ) ದಕ್ಷಿಣ ಕನ್ನಡ ಜಿಲ್ಲಾ ಶಾಖೆ, ಮಂಗಳೂರು, ಸಂಘದ ಅಧ್ಯಕ್ಷ ಪ್ರಾಂಕಿ ಪ್ರಾನ್ಸಿಸ್ ಕುಟಿನ್ಹ ಅಧ್ಯಕ್ಷತೆಯಲ್ಲಿ ಸ್ವಾಗತ ಭಾಷಣದೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಜಾರ್ಜ್ ಪಿಂಟೋ ಮಾಜಿ ಅಧ್ಯಕ್ಷರು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ (ರಿ) ಮಂಗಳೂರು, ಶ್ರೀ ಹರೇಕಳ ಹಾಜಬ್ಬ “ಅಕ್ಷರ ಸಂತ” ಸರಕಾರಿ ಪ್ರೌಢ ಶಾಲೆ, ಹರೇಕಳ, ಶ್ರೀ ಕಮಲಾಕ್ಷ ನಿವೃತ್ತ ನೌಕರ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ (ರಿ) ಮಂಗಳೂರು ಹಾಗೂ ಜನಪ್ರಿಯ ಶಾಸಕರಾದ ಶ್ರೀ ಮೊಹಿದ್ದೀನ್ ಭಾವ ಇವರೆಲ್ಲರನ್ನೂ ಈ ಸಮಾರಂಭರದಲ್ಲಿ ಸಂಘದ ವತಿಯಿಂದ ಗೌರವಿಸಿ ಸ್ಮರಣಿಕೆ ನೀಡಿ ಸನ್ಮಾನ ಮಾಡಲಾಯಿತು. ಸದಸ್ಯರ ಮಕ್ಕಳಲ್ಲಿ ಪ್ರತಿಭೆಗಳನ್ನು ಗುರುತಿಸಿ ಕುಮಾರಿ ದೀಕ್ಷಾ ಮತ್ತು ಕೆ.ಹೆಚ್ ಆದರ್ಶ ಕಲೆ ಕ್ರೀಡೆಗಳನ್ನು ಗುರುತಿಸಿ ಸನ್ಮಾನಿಸಲಾಯಿತು.
ಸಂಘದ ವತಿಯಿಂದ ದೇಣಿಗೆ ರೂಪದಲ್ಲಿ ಶ್ರೀ ಹರೇಕಳ ಹಾಜಬ್ಬರವರ ಮನೆ ನಿರ್ಮಾಣ ಕಾರ್ಯಕ್ಕೆ ರೂ.10,000/- ಚೆಕ್ಕನ್ನು ಮಂಗಳೂರಿನ ಯನೈಟೆಡ್ ಕ್ರಿಶ್ಚಿಯನ್ ಸೋಷಿಯಲ್ ಸಂಸ್ಥೆಗೆ ಹಸ್ತಾಂತರಿಸಲಾಯಿತು.
ಮಂಗಳೂರಿನಲ್ಲಿ ಜರುಗುವ ಎಂ.ಪಿ.ಎಲ್ ಕ್ರಿಕೆಟ್ ಪಂದ್ಯಾಟವು ಡಿಸೆಂಬರ್ ತಿಂಗಳಿನಲ್ಲಿ ಜರಗಲ್ಲಿದ್ದು ಉಳ್ಳಾಲ ಯುನೈಟೆಡ್ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಪ್ರಜ್ವಲ್ ಕಿರಣ್ ಡಿ’ಸೋಜ ಭಟ್ನಗರ ತೊಕ್ಕೊಟ್ಟು ಇವರಿಗೆ ಕ್ರೀಡಾ ಸಲಕರಣೆಗೆ ಪ್ರೋತ್ಸಾಹವಾಗಿ ರೂ. 10,000/- ನಗದನ್ನು ಸಮಾರಂಭದಲ್ಲಿ ಸಂಘದ ಅಧ್ಯಕ್ಷರು ಶಾಸಕರ ಮುಖಾಂತರ ಹಸ್ತಾಂತರಿಸಿದರು.
ಸುಮಾರು 20 ಮಂದಿ ಸದಸ್ಯರ ಮಕ್ಕಳು 2014-15ನೇ ಸಾಲಿನ ಪಿ.ಯು.ಸಿ ಮತ್ತು ಎಸ್.ಎಸ್.ಎಲ್.ಸಿ ಅತೀ ಹೆಚ್ಚು ಅಂಕಗಳಿಸಿದ ಪ್ರತಿಭಾ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಪ್ರಸ್ತಾವನೆಯನ್ನು ಶ್ರೀ ಸಿರಿಲ್ ರಾಬರ್ಟ್ ಡಿ ಸೋಜ (ದ.ಕ.ಜಿಲ್ಲಾ ಪಂಚಾಯತ್) ಕಾರ್ಯಕ್ರಮದ ನಿರೂಪಣೆಯನ್ನು ಬಿ.ಮನಮೋಹನರಾವ್ (ಪೋಲೀಸ್ ಇಲಾಖೆ, ವಯರ್‍ಲೆಸ್ ವಿಭಾಗ), ಉಡುಪಿ ಜಿಲ್ಲೆ ಇವರು ನಿರ್ವಹಿಸಿ ಕೊನೆಗೆ ಸಂಘದ ಉಪಾಧ್ಯಕ್ಷರಾದ ಶ್ರೀ ಎಸ್ ಬಾಲಸುಬ್ರಮಣ್ಯ ಧನ್ಯವಾದವಿತ್ತರು.