Home Mangalorean News Kannada News ಮಂಗಳೂರು: ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆಯರ ಹುದ್ಧೆಗೆ ಅರ್ಜಿ ಆಹ್ವಾನ 

ಮಂಗಳೂರು: ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆಯರ ಹುದ್ಧೆಗೆ ಅರ್ಜಿ ಆಹ್ವಾನ 

Spread the love

ಮಂಗಳೂರು: ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆಯರ ಹುದ್ಧೆಗೆ ಅರ್ಜಿ ಆಹ್ವಾನ 

ಮಂಗಳೂರು: ಮಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ 2023-24ನೇ ಸಾಲಿನ ಶಿಶು ಅಭಿವೃದ್ಧಿ ಯೋಜನೆಯಡಿ ಮಂಗಳೂರು, ಮುಲ್ಕಿ, ಉಳ್ಳಾಲ ಹಾಗೂ ಮೂಡಬಿದ್ರೆ ತಾಲೂಕಿನಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆಯರ ಹುದ್ಧೆಗೆ ಅರ್ಜಿ ಆಹ್ವಾನಿಸಲಾಗಿದೆ.

ಮಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತ್‍ಗೆ ಒಬ್ಬರಂತೆ ಎಸ್.ಎಸ್.ಎಲ್.ಸಿಯಲ್ಲಿ ಉತ್ತೀರ್ಣ/ಅನುತ್ತಿರ್ಣರಾದ ವಿಕಲಚೇತನರನ್ನು ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆಯರ (ವಿ.ಆರ್.ಡ್ಲ್ಯೂ) ನೇಮಕ ಮಾಡಲು ಅವಕಾಶವಿದ್ದು 18 ರಿಂದ 45 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮಾಸಿಕ ಗೌರವಧನ ರೂ.9000 ನೀಡಲಾಗುತ್ತದೆ.

ಖಾಲಿ ಇರುವ ಪುನರ್ವಸತಿ ಕೇಂದ್ರಗಳು:
ಮಂಗಳೂರು ತಾಲೂಕಿನ ಮಲ್ಲೂರು ಗ್ರಾಮ ಪಂಚಾಯತ್, ಮೂಡಬಿದ್ರೆ ತಾಲೂಕಿನ ಪಡುಮಾರ್ನಾಡು, ಪಾಲಡ್ಕ, ಪುತ್ತಿಗೆ ಗ್ರಾಮ ಪಂಚಾಯತ್, ಮುಲ್ಕಿ ತಾಲೂಕಿನ ಹಳೆಯಂಗಡಿ ಗ್ರಾಮ ಪಂಚಾಯತ್ ಹಾಗೂ ಉಳ್ಳಾಲ ತಾಲೂಕಿನ ಅಂಬ್ಲಮೊಗರು ಗ್ರಾಮ ಪಂಚಾಯತ್ ಗಳಿಗೆ ಅರ್ಹ ವಿಕಲಚೇತನ ಅಭ್ಯರ್ಥಿಗಳು ಮಾರ್ಚ್ 20 ರೊಳಗೆ ನಗರದ ಬಿಜೈ ನಲ್ಲಿರುವ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ, 1ನೇ ಮಹಡಿ ಜಿಲ್ಲಾ ಸ್ತ್ರೀಶಕ್ತಿ ಭವನ ಕಟ್ಟಡ ಇಲ್ಲಿಂದ ಅರ್ಜಿ ನಮೂನೆಯನ್ನು ಪಡೆದು ದ್ವಿಪ್ರತಿಯಲ್ಲಿ ಕಚೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಮಂಗಳೂರು ತಾಲೂಕು ಪಂಚಾಯತ್ ಎಂ.ಆರ್.ಡಬ್ಲ್ಯೂ ಜಯಪ್ರಕಾಶ್ ಇವರನ್ನು (ಮೊಬೈಲ್ ಸಂಖ್ಯೆ 9110897458 )ಸಂಪರ್ಕಿಸುವಂತೆ ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version