ಮಂಗಳೂರು ಜಂಕ್ಷನ್ ರೈಲ್ವೆ ಸ್ಟೇಷನ್ ರಸ್ತೆ ಅಗಲೀಕರಣ ಕಾರ್ಯ ಪ್ರಗತಿಯಲ್ಲಿದೆ – ಶಾಸಕ ಜೆ.ಆರ್.ಲೋಬೊ

Spread the love

ಮಂಗಳೂರು ಜಂಕ್ಷನ್ (ಕಂಕನಾಡಿ) ರೈಲ್ವೆ ಸ್ಟೇಷನ್ ರಸ್ತೆ ಅಗಲೀಕರಣ ಕಾರ್ಯ ಪ್ರಗತಿಯಲ್ಲಿದೆ – ಶಾಸಕ ಜೆ.ಆರ್.ಲೋಬೊ

ಮಂಗಳೂರು ಜಂಕ್ಷನ್ (ಕಂಕನಾಡಿ) ರೈಲ್ವೆ ಸ್ಟೇಷನ್‍ಗೆ ಹೋಗುವ ರಸ್ತೆ ಅತ್ಯಂತ ಕಿರಿದಾಗಿದ್ದು, ಸಾರ್ವಜನಿಕರಿಗೆ ಅಲ್ಲಿಗೆ ಮುಟ್ಟಲು ಬಹಳ ಕಷ್ಟದ ಪರಿಸ್ಥಿತಿ ಎದುರಾಗಿತ್ತು. ಬೆಂಗಳೂರು, ಮುಂಬಯಿ, ದೆಹಲಿ, ಉತ್ತರ ಬಾರತಕ್ಕೆ ಚಲಿಸುವ ರೈಲುಗಳು ಆ ನಿಲ್ದಾಣಕ್ಕೆ ಆಗಮಿಸುವುದರಿಂದ ಈ ರಸ್ತೆಯ ಅಭಿವೃದ್ಧಿ ಅತ್ಯಂತ ಅಗತ್ಯವಾಗಿದ್ದು, ಈಗಾಗಲೇ ಕಾರ್ಯ ಆರಂಭಿಸಲಾಗಿದೆ. ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಶ್ರೀ.ಜೇ.ಆರ್ ಲೋಬೊರವರು ಇಂದು ತಾ. 05-01-2018 ರಂದು ಅಗಲೀಕರಣ ಕಾಮಗಾರಿ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ಮಾಡಿ, ಈ ರಸ್ತೆಯು ಅತೀ ಕಿರಿದಾಗಿದ್ದು, ಸಾರ್ವಜನಿಕರಿಗೆ ಪ್ರಯಾಣಿಸಲು ತೊಂದರೆಯಾಗುತ್ತಿತ್ತು.

ಜನರು ಅನೇಕ ಬಾರಿ ಈ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಮನವಿಯನ್ನು ನನಗೆ ನೀಡಿದ್ದರು. ಸದ್ರಿ ರಸ್ತೆಯ ಅಗಲೀಕರಣ ಕಾಮಗಾರಿ ಪ್ರಾರಂಭವಾಗಿದ್ದು, ಪ್ರೀಮಿಯಮ್ ಅಫೈರ್ ನಿಧಿಯನ್ನು ಇದಕ್ಕೆ ಬಳಸಲಾಗಿದೆ. ಸುಮಾರು ರೂ. 2 ಕೋಟಿ ವೆಚ್ಚದಲ್ಲಿ ಅಗಲೀಕರಣ ಕಾಮಗಾರಿಯಲ್ಲಿ ರಸ್ತೆ ಅಗಲೀಕರಣ ಹಾಗೂ ತಡೆಗೋಡೆ ನಿರ್ಮಾಣವಾಗಲಿದೆ. ಸುಮಾರು 40 ಫೀಟ್ ಅಗಲ ರಸ್ತೆ ನಿರ್ಮಾಣವಾಗಲಿದ್ದು, ಖಂಡಿತವಾಗಿಯೂ ಈ ಪ್ರದೇಶದ ಜನರು ಒಳ್ಳೆಯ ಸಹಕಾರ ನೀಡಿರುತ್ತಾರೆ. ರಸ್ತೆಯ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಮದ ರೂ.1ಕೋಟಿ ಮಂಜೂರಾತಿಯಾಗಿದೆ. ಈ ಅಗಲೀಕರಣ ಕಾಮಗಾರಿಯ ನಂತರ ರಸ್ತೆ ಅಭಿವೃದ್ಧಿ ಕಾರ್ಯ ಆಗಲಿದೆ ಎಂದರು.

ಈ ಸಂದರ್ಭದಲ್ಲಿ ಕಾರ್ಪೋರೇಟರ್ ಪ್ರವೀಣ್‍ಚಂದ್ರ ಆಳ್ವ, ಕೆಎಸ್‍ಆರ್‍ಟಿಸಿ ನಿರ್ದೇಶಕ ಟಿ.ಕೆ ಸುಧೀರ್, ಕೃತಿನ್ ಕುಮಾರ್, ಎಲಿಕೆಯ ಉಪ ಆಯುಕ್ತ (ಅಭಿವೃದ್ಧಿ) ಲಿಂಗೇಗೌಡ, ಕಿರಿಯ ಅಭಿಯಂತರ ಗುರುರಾಜ್, ಮರಳಹಳ್ಳಿ ಸಹಾಯ ಅಭಿಯಂತರ ವಿಶಾಲನಾಥ, ಕಿರಿಯ ಅಭಿಯಂತರ ರಘುಪಾಲ, ಗುತ್ತಿಗೆದಾರ ಜಸೀರುದ್ಧಿನ್ ಮೊದಲಾದವರು ಉಪಸ್ಥಿತರಿದ್ದರು.


Spread the love