ಮಂಗಳೂರು ಜಂಕ್ಷನ್ (ಕಂಕನಾಡಿ) ರೈಲ್ವೆ ಸ್ಟೇಷನ್ ರಸ್ತೆ ಅಗಲೀಕರಣ ಕಾರ್ಯ ಪ್ರಗತಿಯಲ್ಲಿದೆ – ಶಾಸಕ ಜೆ.ಆರ್.ಲೋಬೊ
ಮಂಗಳೂರು ಜಂಕ್ಷನ್ (ಕಂಕನಾಡಿ) ರೈಲ್ವೆ ಸ್ಟೇಷನ್‍ಗೆ ಹೋಗುವ ರಸ್ತೆ ಅತ್ಯಂತ ಕಿರಿದಾಗಿದ್ದು, ಸಾರ್ವಜನಿಕರಿಗೆ ಅಲ್ಲಿಗೆ ಮುಟ್ಟಲು ಬಹಳ ಕಷ್ಟದ ಪರಿಸ್ಥಿತಿ ಎದುರಾಗಿತ್ತು. ಬೆಂಗಳೂರು, ಮುಂಬಯಿ, ದೆಹಲಿ, ಉತ್ತರ ಬಾರತಕ್ಕೆ ಚಲಿಸುವ ರೈಲುಗಳು ಆ ನಿಲ್ದಾಣಕ್ಕೆ ಆಗಮಿಸುವುದರಿಂದ ಈ ರಸ್ತೆಯ ಅಭಿವೃದ್ಧಿ ಅತ್ಯಂತ ಅಗತ್ಯವಾಗಿದ್ದು, ಈಗಾಗಲೇ ಕಾರ್ಯ ಆರಂಭಿಸಲಾಗಿದೆ. ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಶ್ರೀ.ಜೇ.ಆರ್ ಲೋಬೊರವರು ಇಂದು ತಾ. 05-01-2018 ರಂದು ಅಗಲೀಕರಣ ಕಾಮಗಾರಿ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ಮಾಡಿ, ಈ ರಸ್ತೆಯು ಅತೀ ಕಿರಿದಾಗಿದ್ದು, ಸಾರ್ವಜನಿಕರಿಗೆ ಪ್ರಯಾಣಿಸಲು ತೊಂದರೆಯಾಗುತ್ತಿತ್ತು.
ಜನರು ಅನೇಕ ಬಾರಿ ಈ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಮನವಿಯನ್ನು ನನಗೆ ನೀಡಿದ್ದರು. ಸದ್ರಿ ರಸ್ತೆಯ ಅಗಲೀಕರಣ ಕಾಮಗಾರಿ ಪ್ರಾರಂಭವಾಗಿದ್ದು, ಪ್ರೀಮಿಯಮ್ ಅಫೈರ್ ನಿಧಿಯನ್ನು ಇದಕ್ಕೆ ಬಳಸಲಾಗಿದೆ. ಸುಮಾರು ರೂ. 2 ಕೋಟಿ ವೆಚ್ಚದಲ್ಲಿ ಅಗಲೀಕರಣ ಕಾಮಗಾರಿಯಲ್ಲಿ ರಸ್ತೆ ಅಗಲೀಕರಣ ಹಾಗೂ ತಡೆಗೋಡೆ ನಿರ್ಮಾಣವಾಗಲಿದೆ. ಸುಮಾರು 40 ಫೀಟ್ ಅಗಲ ರಸ್ತೆ ನಿರ್ಮಾಣವಾಗಲಿದ್ದು, ಖಂಡಿತವಾಗಿಯೂ ಈ ಪ್ರದೇಶದ ಜನರು ಒಳ್ಳೆಯ ಸಹಕಾರ ನೀಡಿರುತ್ತಾರೆ. ರಸ್ತೆಯ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಮದ ರೂ.1ಕೋಟಿ ಮಂಜೂರಾತಿಯಾಗಿದೆ. ಈ ಅಗಲೀಕರಣ ಕಾಮಗಾರಿಯ ನಂತರ ರಸ್ತೆ ಅಭಿವೃದ್ಧಿ ಕಾರ್ಯ ಆಗಲಿದೆ ಎಂದರು.
ಈ ಸಂದರ್ಭದಲ್ಲಿ ಕಾರ್ಪೋರೇಟರ್ ಪ್ರವೀಣ್‍ಚಂದ್ರ ಆಳ್ವ, ಕೆಎಸ್‍ಆರ್‍ಟಿಸಿ ನಿರ್ದೇಶಕ ಟಿ.ಕೆ ಸುಧೀರ್, ಕೃತಿನ್ ಕುಮಾರ್, ಎಲಿಕೆಯ ಉಪ ಆಯುಕ್ತ (ಅಭಿವೃದ್ಧಿ) ಲಿಂಗೇಗೌಡ, ಕಿರಿಯ ಅಭಿಯಂತರ ಗುರುರಾಜ್, ಮರಳಹಳ್ಳಿ ಸಹಾಯ ಅಭಿಯಂತರ ವಿಶಾಲನಾಥ, ಕಿರಿಯ ಅಭಿಯಂತರ ರಘುಪಾಲ, ಗುತ್ತಿಗೆದಾರ ಜಸೀರುದ್ಧಿನ್ ಮೊದಲಾದವರು ಉಪಸ್ಥಿತರಿದ್ದರು.