Home Mangalorean News Kannada News ಮಂಗಳೂರು: ಜಿಲ್ಲಾಡಳಿತದಿಂದ ಅಂಬಿಗರ ಚೌಡಯ್ಯ ಜಯಂತಿ

ಮಂಗಳೂರು: ಜಿಲ್ಲಾಡಳಿತದಿಂದ ಅಂಬಿಗರ ಚೌಡಯ್ಯ ಜಯಂತಿ

Spread the love

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತ, ದ. ಕ. ಜಿಲ್ಲಾ ಪಂಚಾಯತ್, ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಮೊಗವೀರ ವ್ಯವಸ್ಥಾಪಕ ಮಂಡಳಿ, ದಕ್ಷಿಣ ಕನ್ನಡ ಮತ್ತು ಉಡುಪಿ, ನಿಜಶರಣ  ಅಂಬಿಗರ ಚೌಡಯ್ಯ ಯುವಕ ವೃಂದ ಮೂಲ್ಕಿ ಇವರ ಸಂಯುಕ್ತ ಆಶ್ರಯದಲ್ಲಿ ಜ.29 ರಂದು ಬೆಳಿಗ್ಗೆ 12. ಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ‘ವಚನಕಾರ ಅಂಬಿಗರ ಚೌಡಯ್ಯ ಜಯಂತಿ’ ಆಚರಣೆಯು ನಡೆಯಲಿರುವುದು.

ಮಧ್ಯಾಹ್ನ 12 ಕ್ಕೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಲಿರುವರು.  ಶಾಸಕ  ಜೆ. ಆರ್ .ಲೋಬೋ ಅಧ್ಯಕ್ಷತೆ ವಹಿಸಲಿರುವರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ ಖಾದರ್, ಯುವಜನ ಸೇವೆ, ಕ್ರೀಡೆ ಮತ್ತು ಮೀನುಗಾರಿಕಾ ರಾಜ್ಯ ಸಚಿವ ಕೆ. ಅಭಯಚಂದ್ರ ಜೈನ್ ಮತ್ತಿತರರು ಭಾಗವಹಿಸಲಿರುವರು. ಮಂಗಳೂರು ವಿಶ್ವವಿದ್ಯಾನಿಲಯದ ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ಸಂಯೋಜಕರಾದ ಡಾ. ಜಯರಾಜ ಅಮೀನ್ ಇವರು ಅಂಬಿಗರ ಚೌಡಯ್ಯ ಜಯಂತಿ ಸಂದೇಶವನ್ನು ನೀಡಲಿರುವರು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರಕಟಣೆ ತಿಳಿಸಿದೆ.

ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ಸನ್ಮಾನ

ಮಂಗಳೂರು : 2015ನ ನೇ ಸಾಲಿಗೆ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಯೋಜನೆಯಡಿ ಸಾಂಸ್ಕøತಿಕ, ಕಲೆ, ಶಿಕ್ಷಣ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ 4 ರಿಂದ 15 ವರ್ಷದ 8 ಮಕ್ಕಳನ್ನು ಜನವರಿ 26 ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ಜರುಗಿದ ಗಣರಾಜ್ಯೋತ್ಸವ ದಿನಾಚರಣೆಯಂದು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸನ್ಮಾನಿಸಿದರು.

ಸನ್ಮಾನಿತರಿಗೆ ರೂ. 10 ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.

ಪ್ರಶಸ್ತಿಗೆ ಆಯ್ಕೆಯಾದವರು:  1.  ಡಿ.ಕೆ ಗೌತಮ್, ಶ್ರೀನಿವಾಸನಗರ, ಸುರತ್ಕಲ್ (ಸಾಂಸ್ಕøತಿಕ) 2. ಭೂಮಿಕಾ ಪ್ರಿಯದರ್ಶಿನಿ, ಪಣಂಬೂರು, (ಸಾಂಸ್ಕøತಿಕ) 3. ಸಾತ್ವಿಕ್ ಡಿ. ಅಮೀನ್, ಕುಂಜತ್ ಬೈಲ್ (ಕಲಾಕ್ಷೇತ್ರ), 4.  ಪ್ರಥ್ವಿಶ್, ಬನ್ನಡ್ಕ ಬೆಳುವಾಯಿ (ಕಲಾಕ್ಷೇತ್ರ), 5.   ಶ್ರೀಲಕ್ಷ್ಮೀ ಪೈ ಎನ್.  ಪುತ್ತೂರು(ಶಿಕ್ಷಣ ), 6. ಸಾರ್ಥಕ್ ಶೆಣೈ, ಕೊಟ್ಟಾರ ಚೌಕಿ (ಶಿಕ್ಷಣ),  7.  ಮನೋಹರ ಪ್ರಭು ಎಂ, ಕೊಟ್ಟಾರ ಕ್ರಾಸ್(ಕ್ರೀಡೆ) 8.  ಶಿರಿನ್ ಇನಾಯತ್ ಆಲಿ, ಕುದ್ರೋಳಿ( ಕ್ರೀಡೆ)


Spread the love

Exit mobile version