Home Mangalorean News Kannada News ಮಂಗಳೂರು ಜಿಲ್ಲಾ ಕಾರಾಗ್ರಹಕ್ಕೆ ಡಿಸಿಪಿ ನೇತೃತ್ವದಲ್ಲಿ ದಾಳಿ; ಮೊಬೈಲ್, ಗಾಂಜಾ ವಶ

ಮಂಗಳೂರು ಜಿಲ್ಲಾ ಕಾರಾಗ್ರಹಕ್ಕೆ ಡಿಸಿಪಿ ನೇತೃತ್ವದಲ್ಲಿ ದಾಳಿ; ಮೊಬೈಲ್, ಗಾಂಜಾ ವಶ

Spread the love

ಮಂಗಳೂರು ಜಿಲ್ಲಾ ಕಾರಾಗ್ರಹಕ್ಕೆ ಡಿಸಿಪಿ ನೇತೃತ್ವದಲ್ಲಿ ದಾಳಿ; ಮೊಬೈಲ್, ಗಾಂಜಾ ವಶ

ಮಂಗಳೂರು: ಮಂಗಳೂರು ಜಿಲ್ಲಾ ಕಾರಾಗೃಹದ ಮೇಲೆ ಇಂದು ಬೆಳ್ಳಂಬೆಳಗ್ಗೆ ಡಿಸಿಪಿ ಹನುಮಂತರಾಯ ನೇತೃತ್ವದ ತಂಡ ದಾಳಿ ನಡೆಸಿದೆ.

ಜೈಲಿಗೆ ಮಾರಕಾಯುಧಗಳು ಪೂರೈಕೆಯಾಗುತ್ತಿವೆ ಎಂಬ ಮಾಹಿತಿಯ ಮೇರೆಗೆ ಈ ದಾಳಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ 50 ಮಂದಿ ಅಧಿಕಾರಿಗಳು, 129 ಸಿಬ್ಬಂದಿಯೊಂದಿಗೆ ದಾಳಿ ನಡೆಸಲಾಗಿದೆ.

ದಾಳಿಯ ವೇಳೆ 2 ಮೊಬೈಲ್, ಮೊಬೈಲ್ ಚಾರ್ಜರ್, ಪೆನ್ಡ್ರೈವ್, ಪಂಚ್, ರಾಡ್, ಗಾಂಜಾ ಪ್ಯಾಕೆಟ್ ಮುಂತಾದವುಗಳನ್ನು ಅಧೀಕಾರಿಗಳು ವಶಪಡಿಸಿಕೊಂಡಿದ್ದಾರೆ. ಜೈಲಿನಲ್ಲಿ ಸಿಕ್ಕಿರುವ ಮಾರಕಾಯುಧಗಳ ಕುರಿತು ತನಿಖೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


Spread the love

Exit mobile version