ಮಂಗಳೂರು ಜಿಲ್ಲಾ ಕಾರಾಗ್ರಹದಲ್ಲಿ ವಿಶ್ವ ಪರಿಸರ ದಿನಾಚರಣೆ
ಮಂಗಳೂರು : ಇತ್ತೀಚಿನ ದಿನಗಳಲ್ಲಿ ವಾಯು ಮಾಲಿನ್ಯ ದಿಂದಾಗಿ ಪರಿಸರ ನಾಶ ವಾಗುತ್ತಿದೆ .ಪರಿಸರ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ ಆಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರಾಗ್ರಹದ ಅಧೀಕ್ಷಕ ಚಂದನ್ ಪಾಟೀಲ್ ಹೇಳಿದರು.
ಮಂಗಳೂರಿನ ಐಸಿರಿ healthy ಇಂಡಿಯಾ ಮಿಶನ್ ಬುಧವಾರ ಜಿಲ್ಲಾ ಕಾರಾಗ್ರಹದಲ್ಲಿ ವಿಶ್ವ ಪರಿಸರ ದಿನಾಚರಣೆ ಆಯೋಜಿಸಿತ್ತು .ಕಾರ್ಯಕ್ರಮದಲ್ಲಿ ಭಾಗವಹಿಸಿ ಮತನಾಡಿದ ಚಂದನ್ ಪಾಟೀಲ್ ಪರಿಸರದ ಬಗ್ಗೆ ನಾಗರಿಕರು ಹೆಚ್ಚಿನ ಕಾಳಜಿ ವಹಿಸುವಂತೆ ಕರೆ ನೀಡಿದರು .
ಕಾಯಕ್ರಮದಲ್ಲಿ ಜಿಲ್ಲಾ ಕಾರಾಗ್ರಹದ ಸಿಬ್ಬಂದಿಗಳು ಕೈದಿಗಳು ಕೆನರಾ ಇಂಗ್ಲಿಷ್ ಮೀಡಿಯಂ ಶಾಲೆಯ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ,ಸಿ ಎಚ್ ಡಿ ಗ್ರೂಪ್ ಸೆಂಟರ್ ಫಾರ್ ಹೆಲ್ತ್ ಅಂಡ್ ಡೆವಲಪ್ಮೆಂಟ್ ಸಂಸ್ಥೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು .ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೈಲ್ ಆವರಣದಲ್ಲಿ ವಿವಿಧ ಹೂವಿನ ಹಾಗೂ ಅಲಂಕಾರಿಕ ಗಿಡಗಳನ್ನು ನೆಡಲಾಯಿತು .
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಕಾರ್ಯಕಾರಿ ಸಮಿತಿ ಸದಸ್ಯ ಭಾಸ್ಕರ್ ರೈ ಐಸಿರಿ healthy ಇಂಡಿಯಾ ಮಿಷನ್ ನಿರ್ದೇಶಕ ದರ್ಶನ ಜೈನ್ ದಿಶಿತ್ ಶೆಟ್ಟಿ ಗಣೇಶ್ ನಾಯಕ್ ಮೂಲ್ಕಿ ಸಿ ಎಚ್ ಡಿ ಸಂಸ್ಥೆಯ ದಿವ್ಯಾ ಕಾಮತ್ ಉಪಸ್ಥಿತರಿದ್ದರು .