ಮಂಗಳೂರು: ಜಿಲ್ಲೆಯಲ್ಲಿ ಹೆರಿಗೆ ವೇಳೆಯಲ್ಲಿ ನಡೆದ ಏಳು ಬಾಣಂತಿಯರ ಸಾವಿನ ಕುರಿತು ತನಿಖೆ ನಡೆಸಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಏ ಬಿ ಇಬ್ರಾಹಿಂ ಆದೇಶ ನೀಡಿದ್ದಾರೆ.
ಅವರು ಮಂಗಳವಾರ ಜಿಲ್ಲಾ ಆರೋಗ್ಯ ಮಿಶನ್ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು, ಸಭೆಯಲ್ಲಿ ಸಾವನಪ್ಪಿದ ಬಾಣಂತಿಯರ ಕುಟುಂಬದ ಸದಸ್ಯರು ತಮ್ಮ ನೋವನ್ನು ಜಿಲ್ಲಾಧಿಕಾರಿ ಸಭೆಯಲ್ಲಿ ತೋಡಿಕೊಂಡ ಬಳಿಕ ಮಾತನಾಡಿದ ಜಿಲ್ಲಾಧಿಕಾರಿಗಳು ಜಿಲ್ಲೆಯ 2014-15 ರಲ್ಲಿ 262 ಸಾವನಪ್ಪಿದ್ದರೆ, 2015-16 ರ ಜೂನ್ ವರೆಗೆ 72 ಸಾವುಗಳು ಸಂಭವಿಸಿವೆ ಅವುಗಳಲ್ಲಿ 12 ಸಾವುಗಳು ಬಂಟ್ವಾಳ, ಪುತ್ತೂರು, ಸುಳ್ಯಗಳಲ್ಲಿ ಸಂಭವಿಸಿದರೆ, 14 ಬೆಳ್ತಂಗಡಿ ಹಾಗೂ 22 ಮಂಗಳೂರಿನಲ್ಲಿ ಸಂಭವಿಸಿವೆ.
ಜಿಲ್ಲೆಯಲ್ಲಿ 6985 ಹೆರಿಗೆ ಪ್ರಕರಣಗಳು ನಡೆದಿದ್ದು, ಎಪ್ರಿಲ್ ನಿಂದ ಜೂನ್ ವರೆಗಿನ ಮೂರು ತಿಂಗಳಲ್ಲಿ 7 ಸಾವಿನ ಪ್ರಕರಣಗಳು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಸಂಭವಿಸಿವೆ.
ಬಾಣಂತಿಯರ ಸಾವಿನ ಪ್ರಕರಣಗಳನ್ನು ತನಿಖೆ ನಡೆಸುವ ಸಲುವಾಗಿ 5 ಸದಸ್ಯರನ್ನೊಳಗೊಂಡ ಸಮಿತಿಯೊಂದನ್ನು ರಚಿಸಿದ್ದು, ವಾರದೊಳಗೆ ತನಿಖೆಯನ್ನು ನಡೆಸಿ ವಾರದೊಳಗೆ ವರದಿಯನ್ನು ಒಪ್ಪಿಸುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದರು. ಎಲ್ಲಾ ಪ್ರಕರಣಗಳನ್ನು ಸವಿಸ್ತಾರವಾಗಿ ತನಿಖೆ ನಡೆಸಿ ನೊಂದ ಕುಟುಂಬಗಳಿಗೆ ನ್ಯಾಯ ಒದಗಿಸುವಂತೆ ಆದೇಶ ನೀಡಿದರು. ಬಾಣಂತಿಯರ ಸಾವಿನ ಪ್ರಕರಣದಲ್ಲಿ ವೈದ್ಯರ ನಿರ್ಲಕ್ಷ್ಯ ಕೂಡ ಇರಲು ಸಾಧ್ಯವಿದ್ದು, ನೊಂದ ಕುಟುಂಬಗಳು ವೈದ್ಯರು ಈಗಾಗಲೇ ನೀಡಿರುವ ವರದಿಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದು, ವೈದ್ಯರು ನರ್ಸ್ ಗಳು ಕೂಡ ತಮ್ಮ ಕೆಲಸದಲ್ಲಿ ನಿರ್ಲಕ್ಷ್ಯತನವನ್ನು ತೋರಿಸಿದ್ದಾರೆ ಇದರಿಂದ ಬಾಣಂತಿಯರ ಜೀವ ಬಲಿಯಾಗಿದೆ ಆದ್ದರಿಂದ ಸರಿಯಾಗಿ ತನಿಖೆ ನಡೆಸಬೇಕು ಎಂದರು.
ಅಲ್ಲದೆ ಒಂದು ಸಾವಿನ ಪ್ರಕರಣ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಸಾವನಪ್ಪಿದ್ದರಿಂದ ಉಡುಪಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳಿಂದ ವರದಿ ಪಡೆಯುವಂತೆ ಕುಡ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಸರ್ಜನ್ ಡಾ ರಾಜೇಶ್ವರಿ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾ, ಜಿಲ್ಲಾ ಆರೋಗ್ಯಾಧಿಕಾರಿ ರಾಮಕೃಷ್ಣ ರಾವ್ ಕೂಡ ಉಪಸ್ಥಿತರಿದ್ದರು.