ಮಂಗಳೂರು: ತೋಟಗಾರಿಕೆ ಪಿತಾಮಹ ಡಾ. ಎಂ.ಎಚ್. ಮರೀಗೌಡ ಜಯಂತಿ
ಮಂಗಳೂರು: ತೋಟಗಾರಿಕೆ ಪಿತಾಮಹಾರಾದ ದಿವಂಗತ ಡಾ. ಎಂ.ಎಚ್. ಮರೀಗೌಡ ನಿವೃತ್ತ ತೋಟಗಾರಿಕೆ ನಿರ್ದೇಶಕರ ಜನ್ಮ ದಿನೋತ್ಸವವನ್ನು ರಾಷ್ಟ್ರೀಯ ತೋಟಗಾರಿಕೆ ದಿನಾಚರಣೆ ಆಗಿ ಆಗಸ್ಟ್ 8 ರಂದು ಜಿಲ್ಲಾ ಪಂಚಾಯತ್ ನ ತೋಟಗಾರಿಕೆ ಉಪನಿರ್ದೇಶಕರ ಕಚೇರಿಯಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಡಾ. ಎಂ.ಎಚ್. ಮರೀಗೌಡ ಅವರ ಭಾವಚಿತ್ರಕ್ಕೆ ಪುμÁ್ಪರ್ಚನೆ ಮಾಡಲಾಯಿತು ಹಾಗೂ ನೆನಪಿನ ಕಾಣಿಕೆಯಾಗಿ ರೈತರಿಗೆ ಗಿಡಗಳನ್ನು ವಿತರಿಸಲಾಯಿತು.
ತೋಟಗಾರಿಕೆ ಉಪನಿರ್ದೇಶಕ ಡಿ. ಮಂಜುನಾಥ್ ಅವರು ಮಾತನಾಡಿ ಡಾ. ಎಂ.ಎಚ್. ಮರೀಗೌಡರು ತೋಟಗಾರಿಕೆ ಇಲಾಖೆಯನ್ನು ಅಭಿವೃದ್ಧಿಪಡಿಸಿ, ಕರ್ನಾಟಕ ರಾಜ್ಯವನ್ನು ಮಾದರಿ ತೋಟಗಾರಿಕೆ ಬೆಳೆಗಳ ರಾಜ್ಯವನ್ನಾಗಿ ಅಭಿವೃದ್ಧಿಪಡಿಸಿದರು. ಅವರು ತೋಟಗಾರಿಕೆಗೆ ನೀಡಿದ ಕೊಡುಗೆಯನ್ನು ಮನಗಂಡು ಇಲಾಖೆಯು ಅವರ ಹುಟ್ಟು ಹಬ್ಬವನ್ನು “ರಾಷ್ಟ್ರೀಯ ತೋಟಗಾರಿಕೆ ದಿನಾಚರಣೆ”ಯಾಗಿ ಆಚರಿಸುತ್ತಿದೆ ಎಂದು ಹೇಳಿದರು. ಡಾ. ಎಂ.ಎಚ್. ಮರೀಗೌಡ ಇಲಾಖೆಯಲ್ಲಿ ಕೆಲಸ ನಿರ್ವಹಿಸಿರುವ ಯಶೋಗಾಥೆ ಬಗ್ಗೆ ವಿವರಿಸಿದರು.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಕೆ. ಪ್ರವೀಣ್ ಸ್ವಾಗತಿಸಿದರು. ಮಂಗಳೂರು ರಾಜ್ಯವಲಯದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಪ್ರಮೋದ್ ಸಿ.ಎಂ., ಹಾಗೂ ಬಂಟ್ವಾಳ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಪ್ರದೀಪ್ ಡಿ’ಸೋಜ ಹಾಗೂ ತೋಟಗಾರಿಕೆ ಇಲಾಖೆಯ ಎಲ್ಲಾ ಅಧಿಕಾರಿಗಳು, ಅಧೀಕ್ಷಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.