ಮಂಗಳೂರು : ನಗರದ ವಿವಿಧ ಠಾಣಾ ವ್ಯಾಪ್ತಿಯಲ್ಲಿ ದಾಖಲಾದ ವಿವಿಧ ರೀತಿಯ ಕಳವು ಪ್ರಕರಣಗಳಲ್ಲಿ ಹಾಗೂ ಸರ ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಕುಖ್ಯಾತ ಐವರು ಆರೋಪಿಗಳನ್ನು ಪಾಂಡೇಶ್ವರ ಪೋಲಿಸರು ಬಂಧಿಸಿ ಸುಮಾರು ಐದು ಲಕ್ಷ ಮೌಲ್ಯದ ಸೊತ್ತುಗಳ ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಪೋಲಿಸ್ ಕಮೀಷನರ್ ಮುರುಗನ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಬಂಧಿತ ಆರೋಪಿಗಳನ್ನು ಹ್ಯಾರಿಸ್ @ ಚಂದ್ರು (24) , ಮಹಮ್ಮದ್ ಶಬೀರ್ ಪ್ರಾಯ 24 ವರ್ಷ , ಅಲ್ತಾಫ್ ಪ್ರಾಯ 24 , ಉಮ್ಮರ್ ಫಾರೂಕ್ ಪ್ರಾಯ 20 ವರ್ಷ , ಮಹಮ್ಮದ್ ರಫೀಕ್ ಪ್ರಾಯ 29 ವರ್ಷ ಮಂಗಳೂರು ಎಂದು ಗುರುತಿಸಲಾಗಿದೆ.
ಬಂಧಿತರಿಂದ ಪೋಲಿಸರು 34 ವಿವಿಧ ಕಂಪೆನಿಯ ಮೊಬೈಲ್ ಹ್ಯಾಂಡ್ ಸೆಟ್ಟುಗಳು, 6 ದ್ವಿಚಕ್ರ ವಾಹನಗಳು, 12 ಗ್ರಾಂ ತೂಕದ ಚಿನ್ನದ ಸರ, 4 Halogen ಲೈಟ್ ಒಟ್ಟು ಸುಮಾರು 5 ಲಕ್ಷ ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ. .
ಆರೋಪಿಗಳ ಪೈಕಿ ಹ್ಯಾರಿಸ್ @ ಚಂದ್ರು ಎಂಬಾತನು ಕುಖ್ಯಾತ ಆರೋಪಿಯಾಗಿದ್ದು, ಈತನು ದ್ವಿ-ಚಕ್ರ ವಾಹನಗಳ ಹ್ಯಾಂಡ್ ಲಾಕ್ ಮುರಿದು ಕಳ್ಳತನ ಮಾಡುವಲ್ಲಿ ನಿಸ್ಸೀಮನಾಗಿರುತ್ತಾನೆ. ಈ ಹಿಂದೆ ಮಂಗಳೂರು ದಕ್ಷಿಣ ಠಾಣೆ, ಪಣಂಬೂರು ಠಾಣೆ, ಮತ್ತು ಮಂಗಳೂರು ಉತ್ತರ ಠಾಣೆಯ ಒಟ್ಟು 9 ಪ್ರಕರಣಗಳು ದಾಖಲಾಗಿರುತ್ತದೆ.
ಆರೋಪಿ ಮಹಮ್ಮದ್ ಶಬೀರ್ ನ ಮೇಲೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ಒಂದು ಪ್ರಕರಣ, ಆರೋಪಿ ಅಲ್ತಾಫ್ ನ ಮೇಲೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ಎರಡು ಪ್ರಕರಣಗಳು, ಉಮ್ಮರ್ ಫಾರೂಕ್ ಎಂಬಾತನ ಮೇಲೆ ಮಂಗಳೂರು ದಕ್ಷಿಣ ಠಾಣೆ, ಉಪ್ಪಿನಂಗಡಿ ಠಾಣೆ ಮತ್ತು ಉಳ್ಳಾಲ ಠಾಣೆಯಲ್ಲಿ ಒಟ್ಟು ಮೂರು ಪ್ರಕರಣಗಳು, ಮಹಮ್ಮದ್ ರಫೀಕ್ ಎಂಬಾತನ ಮೇಲೆ ಉಪ್ಪಿನಂಗಡಿ ಠಾಣೆ ಮತ್ತು ಉಳ್ಳಾಲ ಠಾಣೆಯಲ್ಲಿ ಒಟ್ಟು ಎರಡು ಪ್ರಕರಣಗಳು ದಾಖಲಾಗಿರುತ್ತದೆ.
ಪೊಲೀಸ್ ಆಯುಕ್ತರಾದ ಎಸ್. ಮುರುಗನ್ ಐಪಿಎಸ್, ಉಪ ಪೊಲೀಸ್ ಆಯುಕ್ತರಾದ (ಕಾನೂನು ಮತ್ತು ಸುವ್ಯವಸ್ಥೆ) ಕೆ.ಎಮ್. ಶಾಂತರಾಜು, ಉಪ ಪೊಲೀಸ್ ಆಯುಕ್ತರಾದ (ಅಪರಾಧ ಮತ್ತು ಸಂಚಾರ ) ಡಾ. ಸಂಜೀವ್ ಎಮ್ ಪಾಟೀಲ್, ಹಾಗೂ ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಆರ್. ಆರ್. ಕಲ್ಯಾಣ್ ಶೆಟ್ಟಿ ಇವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ದಿನಕರ ಶೆಟ್ಟಿರವರು ಆರೋಪಿಯನ್ನು ಬಂಧಿಸಿ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.
ಆರೋಪಿ ಹಾಗೂ ಸೊತ್ತು ಪತ್ತೆಗೆ ಪಿಎಸ್ಐ ಮಹಮ್ಮದ್ ಶರೀಫ್ ಎಎಸ್ ಐ ಮಂಜುಳಾ ಸಿಬ್ಬಂಧಿಗಳಾದ ವಿಶ್ವನಾಥ, ಗಂಗಾಧರ, ಧನಂಜಯ ಗೌಡ, ಶೇಖರ್ ಗಟ್ಟಿ, ಸತ್ಯನಾರಾಯಣ, ನೂತನ್ ಕುಮಾರ್, ಚಂದ್ರಶೇಖರ, ಪುರುಶೋತ್ತಮ, ಬಶೀರ್ ಅಹಮ್ಮದ್, ಭೀಮಪ್ಪ, ನಾಗರಾಜ, ಶರತ್ ಕುಮಾರ್ ಹಾಗೂ ವಿಶ್ವನಾಥ ಬುಡೋಳಿ ರವರು ಸಹಕರಿಸಿರುತ್ತಾರೆ.