ಮಂಗಳೂರು ಧರ್ಮಪ್ರಾಂತ್ಯದ ನೂತನ ವಿಕಾರ್ ಜನರಲ್ ಆಗಿ ವಂ| ಮ್ಯಾಕ್ಷಿಂ ನೋರೊನ್ಹಾ ನೇಮಕ
ಮಂಗಳೂರು: ಮಂಗಳೂರು ಧರ್ಮಪ್ರಾಂತ್ಯದ ನೂತನ ವಿಕಾರ್ ಜನರಲ್ ಆಗಿ ವಂ| ಮ್ಯಾಕ್ಷಿಂ ನೋರೊನ್ಹಾ ಅವರನ್ನು ನೇಮಕಗೊಳಿಸಿ ನೂತನ ಧರ್ಮಾಧ್ಯಕ್ಷ ಅತಿ|ವಂ|ಡಾ| ಪೀಟರ್ ಪೌಲ್ ಸಲ್ಡಾನಾ ಶುಕ್ರವಾರ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.
ವಂ| ಮ್ಯಾಕ್ಷಿಂ ನೊರೊನ್ಹಾ, ಪಾಂಬೂರಿನ ಆಲ್ಬರ್ಟ್ ನೊರೊನ್ಹಾ ಮತ್ತು ಫ್ಲೋರಿನ್ ನೋರೊನ್ಹಾ ಅವರ ಮಗನಾಗಿ ಡಿಸೆಂಬರ್ 27, 1961 ರಂದು ಜನಿಸಿದರು.
ಅಕ್ಟೋಬರ್ 10, 1981 ರಂದು ಮಂಗಳೂರು ಧರ್ಮಪ್ರಾಂತ್ಯದ ಗುರುಗಳಾಗಿ ದೀಕ್ಷೆ ಪಡೆದರು. ಇವರು ಸಹಾಯಕ ಗುರುಗಳಾಗಿ ಬೀದರ್ ಜಿಲ್ಲೆಯ ಭಾಲ್ಕಿ ಮತ್ತು ಜಲಸಂಗಿ ಕೇಂದ್ರಗಳಲ್ಲಿ ಹಾಗೂ ಬೆಂದೂರು ಮತ್ತು ಶಂಕರಪುರ ಧರ್ಮಕೇಂದ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ವಿಚಾರಣಾ ಗುರುಗಳಾಗಿ ಪಿಯುಸ್ ನಗರ ಮತ್ತು ಫೆರಾರ್ ಧರ್ಮ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದ್ದು, 2008ನೇ ಸಾಲಿನಿಂದ ಮಂಗಳೂರ ಧರ್ಮಪ್ರಾಂತ್ಯದ ಹಣಕಾಸು ವಿಭಾಗದ ಮೇಲ್ವಿಚಾರಕರಾಗಿ ಕೂಡ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಬಂಟ್ವಾಳ ಮೊಡಂಕಾಪು ಧರ್ಮಕೇಂದ್ರದ ವಿಚಾರಣಾ ಗುರುಗಳಾಗಿ ಹಾಗೂ ಬಂಟ್ವಾಳ ವಲಯ ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಪ್ಟೆಂರಬ್ 26ರಂದು ಮಂಗಳೂರು ಧರ್ಮಪ್ರಾಂತ್ಯದ ಶ್ರೇಷ್ಟ ಗುರುಗಳಾಗಿ ಹುದ್ದೆಯನ್ನು ಸ್ವೀಕರಿಸಲಿದ್ದಾರೆ.