ಮಂಗಳೂರು ನಗರ ಟ್ರಾಫಿಕ್ ವ್ಯವಸ್ಥೆಯನ್ನು ಮಾದರಿ ವ್ಯವಸ್ಥೆಯನ್ನಾಗಿ ಮಾರ್ಪಡಿಸಿದ ಎ.ಸಿ.ಪಿ. ಮಂಜುನಾಥ ಶೆಟ್ಟಿ
ಮಂಗಳೂರು: ಎಂ.ಎ. ಅಪ್ಪಯ್ಯ , ಸಿ.ಮೋಹನ್, ಬಿ.ಜೆ. ಭಂಡಾರಿ ಹಾಗು ತಿಲಕ್ ಚಂದ್ರ ಸೇವೆ ಸಲ್ಲಿಸಿದ ಮಂಗಳೂರು ಟ್ರಾಫಿಕ್ ಉಪ ವಿಭಾಗಕ್ಕೆ ಎಂ.ಮಂಜುನಾಥ ಶೆಟ್ಟಿ ಎ ಸಿ ಪಿ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಮಂಗಳೂರು ಟ್ರಾಫಿಕ್ ವ್ಯವಸ್ಥೆಯನ್ನೇ ಒಂದು ಮಾದರಿ ವ್ಯವಸ್ಥೆಯನ್ನಾಗಿ ಮಾರ್ಪಡಿಸುವ ಸನ್ನಾಹದಲ್ಲಿರುವುದು ಮಂಗಳೂರು ನಗರಕ್ಕೆ ಒಂದು ಆಶಾದಾಯಕ ಕೊಡುಗೆಯಾಗಿ ಪರಿಣಾಮಿಸಲಿದೆ, ಎಷ್ಟೇ ಸಮರ್ಥರು ಬಂದಿದ್ದರೂ ಸಹ ಮಂಗಳೂರಿನ ಟ್ರಾಫಿಕ್ ವ್ಯವಸ್ಥೆ ಇನ್ನೂ ಕೂಡ ಸಮರ್ಪಕವಾಗಿ ಆಗಿಲ್ಲ ಎಂಬುದು ಒಂದು ಯಥಾರ್ಥ.
ಈ ಒಂದು ಅವ್ಯವಸ್ಥೆಯನ್ನು ಹೋಗಲಾಡಿಸಿ ಮಂಗಳೂರಿಗೆ ಸುವ್ಯವಸ್ಥಿತ ಟ್ರಾಫಿಕ್ ನಿಯಮಗಳನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಪೊಲೀಸ್ ವರಿಷ್ಠರು ಮಂಗಳೂರು ಟ್ರಾಫಿಕ್ ವಿಭಾಗಕ್ಕೆ ಶಿಸ್ತಿನ ಪ್ರತೀಕವಾದ ಮಂಜುನಾಥ ಶೆಟ್ಟಿ ಅವರನ್ನು ನಿಯುಕ್ತಿ ಗೊಳಿಸಿದ್ದು ಮಂಗಳೂರು ಟ್ರಾಫಿಕ್ ವ್ಯವಸ್ಥೆಗೆ ಒಂದು ಹೊಸ ಆಯಾಮ ಬಂದಂತಾಗಿದೆ.
ದ.ಕ. ಜಿಲ್ಲೆ, ಉಡುಪಿ ಜಿಲ್ಲೆ, ಶಿವಮೊಗ್ಗ ಜಿಲ್ಲೆ ಗಳ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ ಜನತೆಯ ಅಚ್ಚು ಮೆಚ್ಚಿನ ಪೊಲೀಸ್ ಅಧಿಕಾರಿಯಗಿ ಮೆರೆದ ಮಂಜುನಾಥ ಶೆಟ್ಟಿ ಅವರು ತನ್ನ ನಯವಿನಯದ ಮಾತುಗಳಿಂದ ಮತ್ತು ಹಿತೋಪದೇಶಗಳಿಂದ ಅದೆಷ್ಟೋ ರೌಡಿಗಳ, ಕ್ರಿಮಿನಲ್ ಗಳ, ಸಮಾಜ ಘಾತುಕರ ಮನ ಪರಿವರ್ತಿಸಿ ಮಾನವರಾಗಿ ಬದುಕಲು ಪ್ರೇರೇಪಿಸಿದ್ದಾರೆ.
ಮಂಜುನಾಥ ಶೆಟ್ಟಿ ಯವರು ಎಲ್ಲಿ ಅಧಿಕಾರ ವಹಿಸಿಕೊಳ್ಳುತ್ತಾರೊ ಅಲ್ಲೆಲ್ಲಾ ಸಮಾಜ ಘಾತುಕರು ತಾವಾಗಿಯೇ ತಮ್ಮ ಅಕ್ರಮ ಧಂದೆ ಗಳಿಗೆ ತಿಲಾಂಜಲಿ ಇಟ್ಟು ಸತ್ಪ್ರಜೆಯಾಗಿ ಮನ ಪರಿವರ್ತಿಸಿಕೊಂಡ ಅದೆಷ್ಟೋ ಉದಾಹರಣೆಗಳಿವೆ. ಶೀಘ್ರದಲ್ಲೇ ಎಸ್ಪಿ ಯಾಗಿ ಬಡ್ತಿಯ ನಿರೀಕ್ಷೆಯಲ್ಲಿರುವ ಎಂ.ಮಂಜುನಾಥ ಶೆಟ್ಟಿಯವರು ಪೊಲೀಸ್ ಇಲಾಖೆಗೊಂದು ವರಧಾನ ವಾಗಿದ್ದಾರೆ.