ಮಂಗಳೂರು ನಗರ ಪೊಲೀಸ್ ಆಯುಕ್ತಾಲಯದಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ
ಮಂಗಳೂರು: 2025 ನೇ ಸಾಲಿನ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯ ಅಂಗವಾಗಿ, ಮಂಗಳೂರು ನಗರದ ಸಂಚಾರ ಪೊಲೀಸ್ ವತಿಯಿಂದ ರಸ್ತೆ ಸುರಕ್ಷತಾ ಸಮಾರಂಭವನ್ನು ಪಾಂಡೇಶ್ವರ ಫಿಜಾ ಬೈ ನೆಕ್ಸಸ್ ಮಾಲ್ನಲ್ಲಿ ಹಮ್ಮಿಕೊಂಡಿದ್ದು, ಸದರಿ ಕಾರ್ಯಕ್ರಮಕ್ಕೆ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ಬಸ್ಸು, ಆಟೋ ಸಂಘದ ಪದಾಧಿಕಾರಿಗಳು, ಇತರೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದು, ಸಮಾರಂಭದಲ್ಲಿ ಸೈಂಟ್ ಆಗ್ನೆಸ್ ಕಾಲೇಜು ವಿದ್ಯಾರ್ಥಿಗಳು ರಸ್ತೆ ಸುರಕ್ಷತೆಯ ಬಗ್ಗೆ ಬೀದಿನಾಟಕ ಪ್ರದರ್ಶನವನ್ನು ನಡೆಸಿ ಕೊಟ್ಟಿರುತ್ತಾರೆ. ಮಂಗಳೂರು ನಗರದಲ್ಲಿ ನಡೆದಂತಹ ಕೆಲವು ಅಪಘಾತಗಳ ಲೈವ್ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳನ್ನು ಪ್ರದರ್ಶಿಸಿ ಪ್ರೇಕ್ಷಕರಿಗೆ ರಸ್ತೆ ಸುರಕ್ಷತೆ ಬಗ್ಗೆ ಮನವರಿಕೆ ಮಾಡಲಾಯಿತು.
ಸದರಿ ಕಾರ್ಯಕ್ರಮದಲ್ಲಿ ಸಂಚಾರಿ ಕರ್ತವ್ಯಕ್ಕೆ ನಿರಂತರ ಸೇವೆ ಸಲ್ಲಿಸಿದ ಟ್ರಾಫಿಕ್ ವಾರ್ಡನ್ರವರುಗಳಾದ ಫ್ರಾನ್ಸಿಸ್ ಮ್ಯಾಕ್ಸಿಮ್ ಮೋರಸ್, ರೋಶನ್ ರೋಯ್ ಸಿಕ್ವೇರಾ, ಸುನೀಲ್ ಜೆ ಡಿಸೋಜಾರವರಿಗೆ ಹಾಗೂ ಆಟೋ ಚಾಲಕರಾದ ರಮೇಶ್ರವರಿಗೆ ಸನ್ಮಾನಿಸಲಾಯಿತು ಹಾಗೂ ಸಮಾರಂಭದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸಂಚಾರಿ ವಿಷಯಗಳ ಬಗ್ಗೆ ರಸಪ್ರಶ್ನೆ ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಯಿತು.
ಕರ್ನಾಟಕ ರಾಜ್ಯದಲ್ಲಿ 2024 ನೇ ಸಾಲಿನಲ್ಲಿ 42000 ಅಪಘಾತ ಪ್ರಕರಣಗಳು ವರದಿಯಾಗಿದ್ದು, 11300 ಮೃತಪಟ್ಟಿದ್ದು, 54400 ಜನ ಗಾಯಗೊಂಡಿರುತ್ತಾರೆ.
ಮಂಗಳೂರು ನಗರದಲ್ಲಿ 2022, 2023 ಮತ್ತು 2024 ನೇ ಸಾಲಿನಲ್ಲಿ ಸಂಭವಿಸಿದ ರಸೆ ಅಪಘಾತ ಪ್ರಕರಣಗಳು ವಿವರ:
- 2022 ನೇ ಸಾಲಿನಲ್ಲಿ 153 ಮಾರಣಾಂತಿಕ ಅಪಘಾತಗಳು, 775 ಮಾರಣಾಂತಿಕವಲ್ಲದ ಅಪಘಾತಗಳು, ಒಟ್ಟು 928 ಪ್ರಕರಣಗಳು ವರದಿಯಾಗಿದ್ದು, 160 ಜನ ಮೃತಪಟ್ಟವರು, 1049 ಜನ ಗಾಯಗೊಂಡಿರುತ್ತಾರೆ.
- 2023 ನೇ ಸಾಲಿನಲ್ಲಿ 159 ಮಾರಣಾಂತಿಕ ಅಪಘಾತಗಳು, 848 ಮಾರಣಾಂತಿಕವಲ್ಲದ ಅಪಘಾತಗಳು, ಒಟ್ಟು 1007 ಪ್ರಕರಣಗಳು ವರದಿಯಾಗಿದ್ದು, 165 ಜನ ಮೃತಪಟ್ಟವರು, 1156 ಜನ ಗಾಯಗೊಂಡಿರುತ್ತಾರೆ.
- 2024 ನೇ ಸಾಲಿನಲ್ಲಿ 160 ಮಾರಣಾಂತಿಕ ಅಪಘಾತಗಳು, 863 ಮಾರಣಾಂತಿಕವಲ್ಲದ ಅಪಘಾತಗಳು, ಒಟ್ಟು 1023 ಪ್ರಕರಣಗಳು ವರದಿಯಾಗಿದ್ದು, 165 ಜನ ಮೃತಪಟ್ಟವರು, 1186 ಜನ ಗಾಯಗೊಂಡಿರುತ್ತಾರೆ.
- 2022 ನೇ ಸಾಲಿದಲ್ಲಿ 1,63,454 ಪ್ರಕರಣವನ್ನು ದಾಖಲಿಸಿ ರೂ 6,43,31,100/- ದಂಡವನ್ನು ವಿಧಿಸಲಾಗಿದೆ.
- 2023 ನೇ ಸಾಲಿದಲ್ಲಿ 136493 ಪ್ರಕರಣವನ್ನು ದಾಖಲಿಸಿ ರೂ 5,41,88,300/- ದಂಡವನ್ನು ವಿಧಿಸಲಾಗಿದೆ. 2024 ನೇ ಸಾಲಿದಲ್ಲಿ 1,44,859 ಪ್ರಕರಣವನ್ನು ದಾಖಲಿಸಿ 6,65,76,800/- ದಂಡವನ್ನು ವಿಧಿಸಲಾಗಿದೆ.
ಪೊಲೀಸ್ ಆಯುಕ್ತರು ಮಂಗಳೂರು ನಗರದ ಜನತೆಗೆ ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಕರೆ ಕೊಟ್ಟಿರುತ್ತಾರೆ ಅದೇ ರೀತಿ ತುಳು ಚಲನಚಿತ್ರ ನಟ ತುಳುನಾಡ ಮಾಣಿಕ್ಯ ಶ್ರೀ ಅರವಿಂದ ಬೋಳಾರ್ ರವರು ತನ್ನ ಸ್ವಂತ ಅನುಭವವನ್ನು ಹಂಚಿಕೊಂಡು ತನಗೂ ಸಹ ದ್ವಿಚಕ್ರ ವಾಹನದಲ್ಲಿ ಅಪಘಾತವಾಗಿದ್ದು, ತಾನು ಹೆಲ್ಮೆಟ್ ಧರಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ತಿಳಿಸಿ ತಮ್ಮ ಸುರಕ್ಷತೆಗೆ ಹಾಗೂ ತಮ್ಮ ಕುಟುಂಬದವರ ಒಳಿತಿಗಾಗಿ ಸಾರ್ವಜನಿಕ ರಸ್ತೆಯಲ್ಲಿ ಜಾಗೃತರಾಗಿರುವಂತೆ ಮನವಿ ಮಾಡಿರುತ್ತಾರೆ.