ಮಂಗಳೂರು: ರಾಜ್ಯ ಸರಕಾರದ ಹಿಂದೂ ವಿರೋಧಿ ನೀತಿಯ ವಿರುದ್ದ ಹಿಂದೂ ಸಂಘಟನೆಗಳು ನವೆಂಬರ್ 13 ರಂದು ರಾಜ್ಯದಾದ್ಯಂತ ರಸ್ತೆ ತಡೆ ನಡೆಸುವ ಮೂಲಕ ಪ್ರತಿಭಟನೆ ನಡೆಸಲಿವೆ ಎಂದು ವಿಶ್ವ ಹಿಂದೂ ಪರಿಷತ್ ಇದರ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ಹೇಳಿದ್ದಾರೆ.
ಕಳೆದ 3 ವರುಷಗಳಿಂದ ರಾಜ್ಯದಲ್ಲಿ ಸತತವಾಗಿ ಹಿಂದೂಗಳ ಮೇಲೆ ಧಾಳಿಗಳು ನಡೆಯುತ್ತಿದ್ದು ಹಿಂದೂ ಯುವಕರು ಸಾಯುತ್ತಿದ್ದಾರೆ. ಕಾಂಗ್ರೆಸ್ ಸರಕಾರದ ಹಿಂದೂ ವಿರೋಧಿ ನೀತಿಗಳಿಂದ ಇಂತಹ ಸಮಸ್ಯೆಗಳು ನಡೆಯುತ್ತಿದ್ದು, ಗೋಹತ್ಯಾ ತಡೆ ಮಸೂದೆ ಹಿಂತೆಗೆತ, ಟಿಪ್ಪು ಜಯಂತಿ ಆಚರಣೆ ಇವುಗಳ ಮೂಲಕ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಒಂದು ಸಮುದಾಯವನ್ನು ಒಲೈಸುವ ವೋಟ್ ಬ್ಯಾಂಕ್ ರಾಜಕೀಯ ನಡೆಸುತ್ತಿದೆ.
ಮೂಡಬಿದ್ರೆಯಲ್ಲಿ ತನ್ನ ತಂದೆಯ ಮುಂದೆ ಪ್ರಶಾಂತ್ ಪೂಜಾರಿ ಕೊಲೆಯಾದರು, ವಿಎಚ್ ಪಿ ನಾಯಕ ಕುಟ್ಟಪ್ಪ ಕಲ್ಲು ತೂರಾಟದಲ್ಲಿ ಸಾವನಪ್ಪಿದ್ದಾರೆ. ಅನಧಿಕೃತ ಗೋಸಾಗಾಟ, ಗೋಹತ್ಯೆ, ಲವ್ ಜಿಹಾದ್, ಹಿಂದೂ ಯುವತಿಯರ ನಾಪತ್ತೆಯಂತ ಘಟನೆಗಳು ಸರಕಾರದ ಹಿಂದೂ ವಿರೋಧಿ ನೀತಿಯನ್ನು ತೋರಿಸುತ್ತದೆ. ಕಾಂಗ್ರೆಸ್ ಸರಕಾರದ ಹಿಂದೂ ವಿರೋಧಿ ನೀತಿ ಖಂಡನಾರ್ಹ. ಇದನ್ನು ವಿರೋಧಿಸಿ ಬಜರಂಗ ದಳ ಹಾಗೂ ವಿಶ್ವ ಹಿಂದೂ ಪರಿಷತ್ ನವೆಂಬರ್ 13 ರಂದು ರಸ್ತೆ ತಡೆಯನ್ನು ನಡೆಸಲಾಗುತ್ತದೆ. ಸಂಘಟನೆಯ ವತಿಯಿಂದ ಪಂಪ್ ವೆಲ್ ಸರ್ಕಲ್, ಹಂಪನಕಟ್ಟೆ ಸರ್ಕಲ್, ಮುಲ್ಕಿ ಜಂಕ್ಷನ್, ಸುರತ್ಕಲ್ ಜಂಕ್ಷನ್, ತೊಕ್ಕೊಟ್ಟು, ಮೂಡಬಿದ್ರೆ, ಬಜ್ಪೆ, ಗುರುಪುರ ಹಾಗೂ ಕೈಕಂಬಗಳಲ್ಲಿ ರಸ್ತೆ ತಡೆ ನಡೆಸಲಾಗುವುದು. ಸಂಘಟನೆಯ ವತಿಯಿಂದ ಯಾವುದೇ ರೀತಿಯ ಬಂದ್ ಆಚರಣೆ ನಡೆಸಲಾಗುವುದು ಬದಲಾಗಿ ರಸ್ತೆ ತಡೆಯನ್ನು ಮಾತ್ರ ನಡೆಸಲಾಗುತ್ತದೆ ಎಂಧರು.
ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಜೀತೆಂದ್ರ ಕೊಟ್ಟಾರಿ, ಪ್ರವೀಣ್ ಕುತ್ತಾರ್, ಗೋಪಾಲ್ ಕುತ್ತಾರ್ ಇತರರು ಉಪಸ್ಥಿತರಿದ್ದರು.