ಮಂಗಳೂರು: ನಿಲ್ಲಿಸಿದ್ದ ಟ್ಯಾಂಕರ್‌ಗಳಿಂದ ಡೀಸೆಲ್ ಕಳವು: ನಾಲ್ವರ ಬಂಧನ

Spread the love

ಮಂಗಳೂರು: ನಿಲ್ಲಿಸಿದ್ದ ಟ್ಯಾಂಕರ್‌ಗಳಿಂದ ಡೀಸೆಲ್ ಕಳವು: ನಾಲ್ವರ ಬಂಧನ

ಮಂಗಳೂರು: ನಿಲ್ಲಿಸಿದ್ದ ಟ್ಯಾಂಕರ್‌ಗಳಿಂದ ಡೀಸೆಲ್ ಕಳವು ಮಾಡುತ್ತಿದ್ದ ನಾಲ್ವರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಕುಳಾಯಿಗುಡ್ಡೆ ನಿವಾಸಿ ಸಂತೋಷ್(42), ಕಾಟಿಪಳ್ಳ ನಿವಾಸಿ ಐರನ್ ರಿತೇಶ್ ಮಿನೇಜ್(36), ಬೆಳ್ತಂಗಡಿ ನಿವಾಸಿ ನಾರಾಯಣ್(23), ಉಡುಪಿಯ ಹೆಜಮಾಡಿ ನಿವಾಸಿ ರವಿ ಜನಾರ್ದನ ಪುತ್ರನ್ (59) ಎಂದು ಗುರುತಿಸಲಾಗಿದೆ.

ಮಂಗಳೂರಿನ ಹೊರವಲಯದ ಬಾಳ ಗ್ರಾಮದ ಬಳಿ ಇರುವ ಟ್ಯಾಂಕರ್‌ ಯಾರ್ಡ್‌ನಲ್ಲಿ‌ ನಿಲ್ಲಿಸಿರುವ ಟ್ಯಾಂಕರ್‌ಗಳಿಂದ ಈ ಗ್ಯಾಂಗ್ ಡೀಸೆಲ್ ಕಳವು ಮಾಡುತ್ತಿತ್ತು. ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಡೀಸೆಲ್‌ ಕಳವುಗೈದು ದಾಸ್ತಾನು ಇರಿಸಿದ್ದ ಶೆಡ್ಡ್ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ದಾಸ್ತಾನು ಇರಿಸಿಟ್ಟಿದ್ದ 1,685 ಲೀಟರ್ ಡಿಸೇಲ್ ಮತ್ತು 20 ಲೀಟರ್ ಪೆಟ್ರೋಲ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸ್ವಾಧಿನಪಡಿಸಿದ ಡೀಸಲ್ ಮತ್ತು ಪೆಟ್ರೋಲ್ ನ ಮೌಲ್ಯ 1,52,000/- ಹಾಗೂ ಇತರೆ ವಸ್ತುಗಳು ಮತ್ತು ಮೊಬೈಲ್ ನ ಮೌಲ್ಯ 50,000 ಸಾವಿರ ರೂಗಳಾಗಿದ್ದು, ಒಟ್ಟು ಮೌಲ್ಯ 2,02,000 ರೂಗಳಾಗಿರುತ್ತದೆ.

ಸದ್ರಿ ದಾಳಿ ಪತ್ತೆ ಕಾರ್ಯದಲ್ಲಿ ಪೊಲೀಸ್ ಆಯುಕ್ತರಾದ ಅನುಪಮ್ ಅಗ್ರವಾಲ್ ರವರ ನಿರ್ದೇಶನದಂತೆ ಹಾಗೂ ಸಿದ್ದಾರ್ಥ ಗೋಯಲ್ , ಡಿ.ಸಿ.ಪಿ (ಕಾ&ಸು) ಹಾಗೂ ರವಿಶಂಕರ್, ಡಿ.ಸಿ.ಪಿ (ಅಪರಾಧ &ಸಂಚಾರ) ರವರ ಮಾರ್ಗದಶನಲ್ಲಿ ಉತ್ತರ ಉಪ ವಿಬಾಗದ ಸಹಾಯಕ ಪೊಲೀಸ್ ಆಯುಕ್ತರಾದ  ಶ್ರೀಕಾಂತ.ಕೆ. ಹಾಗೂ ಸಿಬ್ಬಂದಿಗಳಾದ ಎ.ಎಸ್.ಐ ಪ್ರಕಾಶ ಮೂರ್ತಿ, ಹೆಚ್ಸಿ:747 ಉದಯಕುಮಾರ್ ಹೆಚ್ಸಿ;383 ಕುಮಾರಸ್ವಾಮಿ ಪಿಸಿ:906 ಹಾಲೇಶ್ ನಾಯ್ಕ್ ಪಿಸಿ:3231 ಸುನಿಲ್, ಪಿಸಿ:584 ಆನಂದ, ಪಿಸಿ: 3233 ಆಶೋಕ ಪಿಸಿ:2451 ಬಸವರಾಜ ರವರು ಭಾಗವಹಿಸಿರುತ್ತಾರೆ.


Spread the love
Subscribe
Notify of

0 Comments
Inline Feedbacks
View all comments