ಮಂಗಳೂರು ನೂತನ ಪೋಲಿಸ್ ಆಯುಕ್ತರಾಗಿ ಟಿ ಆರ್ ಸುರೇಶ್ ನೇಮಕ

Spread the love

ಮಂಗಳೂರು ನೂತನ ಪೋಲಿಸ್ ಆಯುಕ್ತರಾಗಿ ಟಿ ಆರ್ ಸುರೇಶ್ ನೇಮಕ

ಮಂಗಳೂರು: ಮಂಗಳೂರು ನಗರ ನೂತನ ಪೋಲಿಸ್ ಆಯುಕ್ತರಾಗಿ ಐಪಿಎಸ್ ಅಧಿಕಾರಿ ಟಿ ಆರ್ ಸುರೇಶ್ ಅವರನ್ನು ನೇಮೀಸಿ ರಾಜ್ಯ ಸರಕಾರ ಸೋಮವಾರ ಆದೇಶ ಹೊರಡಿಸಿದೆ.

ನಿರ್ಗಮಿತ ಪೋಲಿಸ್ ಆಯುಕ್ತ ಚಂದ್ರಶೇಖರ್ ಅವರ ಸ್ಥಾನಕ್ಕೆ ಸತೀಶ್ ಕುಮಾರ್ ಅವರನ್ನು ನೇಮಿಸಿ ರಾಜ್ಯ ಸರಕಾರ ಮೇ 25 ರಂದು ಆದೇಶ ಹೊರಡಿಸಿತ್ತು. ಆದರೆ ಸತೀಶ್ ಕುಮಾರ್ ಅವರ ನೇಮಕದ ಕುರಿತು ಜಿಲ್ಲೆಯ ಕಾಂಗ್ರೆಸ್ ಸಚಿವರು ಮತ್ತು ಶಾಸಕರು ಅಪಸ್ವರ ಎತ್ತಿದ್ದು, ಸತೀಶ್ ಕುಮಾರ್ ಅವರು ಮಂಗಳೂರು ಚರ್ಚ್ ಧಾಳಿ ಪ್ರಕರಣವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸದೆ ಅನಾಹುತಕ್ಕೆ ಕಾರಣವಾಗಿದ್ದರು ಎಂದು ಕಾಂಗ್ರೆಸ್ ಸಚಿವರು ಮತ್ತು ಶಾಸಕರು ಮುಖ್ಯಮಂತ್ರಿಯವರಲ್ಲಿ ದೂರಿದ್ದರು. ಆದ್ದರಿಂದ ನೇಮಕವಾದ ಮಾರನೇ ದಿನವೆ ಸತೀಶ್ ಕುಮಾರ್ ನೇಮಕವನ್ನು ಸರಕಾರ ತಡೆ ಹಿಡಿದಿತ್ತು. ಸೋಮವಾರ ಸತೀಶ್ ಕುಮಾರ್ ಅವರ ನೇಮಕವನ್ನು ರದ್ದುಗೊಳಿಸಿ ಟಿ ಆರ್ ಸುರೇಶ್ ಅವರನ್ನು ಸರಕಾರ ನೇಮಿಸಿದೆ.

ನೂತನ ಆಯುಕ್ತರು 2003 ನೇ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿದ್ದು, ಅಗ್ನಿಶಾಮಕ ಸೇವೆ ಬೆಂಗಳೂರು ಇಲ್ಲಿ ಡಿಐಜಿ ಆಗಿ ಸೇವೆ ಸಲ್ಲಿಸುತ್ತಿದ್ದು ಪ್ರಸ್ತುತ ಮಂಗಳೂರಿನ ನೂತನ ಆಯುಕ್ತರಾಗಿ ನೇಮಕವಾಗಿದ್ದರೆ. ಮೂಲತಃ ಶಿವಮೊಗ್ಗದವರಾದ ಟಿ ಆರ್ ಸುರೇಶ್ ಅವರು ಬೆಂಗಳೂರಿನಲ್ಲಿ ಡಿಸಿಪಿ ಹಾಗೂ ತುಮಕೂರಿನಲ್ಲಿ ಎಸ್ಪಿಯಾಗಿ ಕೂಡ ಸೇವೆ ಸಲ್ಲಿಸಿದ್ದಾರೆ.


Spread the love