ಮಂಗಳೂರು: ಪದಕ ಗೆದ್ದ ಪವರ್ ಲಿಪ್ಟರ್ ಗಳಿಗೆ ಹೃದಯಸ್ಪರ್ಶಿ ಸ್ವಾಗತ

Spread the love

ಮಂಗಳೂರು: ಪದಕ ಗೆದ್ದ ಲಿಪ್ಟರ್ ಗಳಿಗೆ ಹೃದಯಸ್ಪರ್ಶಿ ಸ್ವಾಗತ

ಮಂಗಳೂರು: ಕಜಕಿಸ್ತಾನದಲ್ಲಿ ನಡೆದ ಏಷ್ಯನ್ ಪವರ್ ಲಿಪ್ಟಿಂಗ್ ಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನ, ಬೆಳ್ಳಿ ಗೆದ್ದ ಪವರ್ ಲಿಪ್ಟರ್ಗಳನ್ನು ಮಂಗಳೂರು ವಿಮಾನ‌ ನಿಲ್ದಾಣದಲ್ಲಿ ಆರತಿ ಬೆಳಗಿ ಸ್ವಾಗತಿಸಲಾಯಿತು.

ಚಿನ್ನದ ಪದಕ ಪಡೆದ ಅರೆನ್ ಫರ್ನಾಂಡಿಸ್, ಶರತ್ ಪೂಜಾರಿ, ಸುಲೋಚನಾ, ಸತೀಶ್ ಖಾರ್ವಿ, ನಾಲ್ಕು ಬೆಳ್ಳಿಪದಕ ಪಡೆದ ದೀಪಾ ಕೆ.ಸ್., ನಾಗಶ್ರೀ ಅವರನ್ನು ಮಂಗಳೂರು ಜನತೆ ಪರವಾಗಿ ಕೋಚ್ ಪ್ರದೀಪ್ ಆಚಾರ್ಯ, ಕಾರ್ಪೊರೇಟರ್ ಶಕೀಲಾ ಕಾವ ಸ್ವಾಗತಿಸಿದರು.

ಕಾರ್ಪೊರೇಟರ್ ಶಕೀಲಾ ಕಾವ, ಮಾಜಿ ಕಾರ್ಪೊರೇಟರ್ ರೂಪಾ ಡಿ. ಬಂಗೇರ, ಭಾರತೀಯ ಜನ ಸೇವಾ ಟ್ರಸ್ಟ್ ಸಂಚಾಲಕಿ ವಿಜಯಶ್ರೀ ಗಟ್ಟಿ, ಕುಂಜತ್ತೋಡಿ ವಾಸುದೇವ ಕದ್ರಿ, ಪತ್ರಕರ್ತರ ಸಂಘದ ಜಿಲ್ಲಾ ಕೇಂದ್ರ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ವಿಪ್ರ ಸಮಾಗಮ ವೇದಿಕೆ ಅಧ್ಯಕ್ಷ ರಾಮಕೃಷ್ಣ ರಾವ್, ಕಾಮನ್ ವೆಲ್ತ್ ಚಿನ್ನದ ಪದಕ ವಿಜೇತ ಪ್ರದೀಪ್ ಆಚಾರ್ಯ ಇದ್ದರು.

ಕಜಕಿಸ್ತಾನದಲ್ಲಿ ಮೈನಸ್ 4 ಡಿಗ್ರಿ ಚಳಿ.ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟವಾದರೂ 22ದೇಶಗಳಿದ್ದ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ನಾಲ್ಕು ಪದಕ ಪಡೆದಿರುವುದು ಖುಷಿ ತಂದಿದೆ. ಬೆಂಬಲ ನೀಡಿದ ಪತಿ ಕುಂಜತ್ತೋಡಿ ವಾಸುದೇವ ಕದ್ರಿ, ಕೋಚ್ ಪ್ರದೀಪ್ ಆಚಾರ್ಯ ಅವರಿಗೆ ಕೃತಜ್ಞತೆಗಳು ಎಂದು ಪದಕ ವಿಜೇತ ದೀಪಾ ಕೆ.ಎಸ್. ಹೇಳಿದರು.

ಕೋಚ್ ಪ್ರದೀಪ್ ಆಚಾರ್ಯ ಮಾತನಾಡಿ, ನಮ್ಮವರು ಪದಕ ಗೆದ್ದಿರುವುದು ಖುಷಿ ಕೊಟ್ಟಿದೆ. ಮಂಗಳೂರು ಮಹಾನಗರ ಪಾಲಿಕೆ ಪವರ್ ಲಿಪ್ಟರ್ ಗಳಿಗೆ ಪ್ರೋತ್ಸಾಹ ನೀಡುತ್ತಿದೆ. ರಾಜ್ಯ ಸರಕಾರ, ಕೇಂದ್ರ ಸರ್ಕಾರ ಪ್ರೋತ್ಸಾಹ ನೀಡಬೇಕು ಎಂದು ವಿನಂತಿಸಿದರು.


Spread the love