Home Mangalorean News Kannada News ಮಂಗಳೂರು: ಪಬ್‌ನಲ್ಲಿ ಮಹಿಳೆಗೆ ಕಿರುಕುಳ ಆರೋಪ; ನಾಲ್ವರ ಬಂಧನ

ಮಂಗಳೂರು: ಪಬ್‌ನಲ್ಲಿ ಮಹಿಳೆಗೆ ಕಿರುಕುಳ ಆರೋಪ; ನಾಲ್ವರ ಬಂಧನ

Spread the love

ಮಂಗಳೂರು: ಪಬ್‌ನಲ್ಲಿ ಮಹಿಳೆಗೆ ಕಿರುಕುಳ ಆರೋಪ; ನಾಲ್ವರ ಬಂಧನ

ಮಂಗಳೂರು: ನಗರದ ಪಾಂಡೇಶ್ವರದ ಪಬ್ ಒಂದಕ್ಕೆ ಬಂದಿದ್ದ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿ, ನಿಂದನೆ ಮಾಡಿರುವ ಆರೋಪದಲ್ಲಿ ನಾಲ್ವರನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ

ಬಂಧಿತರನ್ನು ಪುತ್ತೂರು ನಿವಾಸಿಗಳಾದ ಮಹೇಶ್ (28), ವಿನಯ್ (30), ನಿತೇಶ್ (32), ಪ್ರಿತೇಶ್ (33) ಎಂದು ಗುರುತಿಸಲಾಗಿದೆ.

ಪಾಂಡೇಶ್ವರದ ಮಾಲ್ವೊಂದರಲ್ಲಿರುವ ಪಬ್ಗೆ ಶನಿವಾರ ಮಹಿಳೆಯೊಬ್ಬರು ತನ್ನ ಗೆಳತಿ ಜತೆ ತೆರಳಿದ್ದರು. ಅಲ್ಲಿ ಪುತ್ತೂರಿನ ಯುವಕರ ತಂಡವೊಂದು ಪಾರ್ಟಿಯಲ್ಲಿ ತೊಡಗಿತ್ತು. ನಂತರ ಮಹಿಳೆಗೆ ಕಿರುಕುಳ ನೀಡಿದ ಯುವಕರು ಮಹಿಳೆಯ ಜತೆ ಅಸಭ್ಯವಾಗಿ ವರ್ತಿಸಿ, ಅವರನ್ನು ಚುಡಾಯಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರಲಾಗಿದೆ.

ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಒಬ್ಬನಿಗೆ ನ್ಯಾಯಾಂಗ ಬಂಧನ ವಿಧಿಸಿದ್ದರೆ, ಮೂವರನ್ನು ಜಾಮೀನು ಮೇಲೆ ಬಿಡುಗಡೆಗೊಳಿಸಿದೆ ಎಂದು ತಿಳಿದುಬಂದಿದೆ.


Spread the love

Exit mobile version