Spread the love
ಮಂಗಳೂರು | ಪಾನ್ ಮಸಾಲಾ, ಸುಪಾರಿ ಟ್ರೇಡಿಂಗ್ ಕಂಪೆನಿಗಳ ಮೇಲೆ ಐಟಿ ದಾಳಿ
ಮಂಗಳೂರು: ನಗರದಲ್ಲಿ ನಾಲ್ಕು ಪಾನ್ ಮಸಾಲಾ, ಸುಪಾರಿ ಟ್ರೇಡಿಂಗ್ ಕಂಪೆನಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರುವುದಾಗಿ ವರದಿಯಾಗಿದೆ.
ಮಂಗಳೂರಿನ ಪಾನ್ ಮಸಾಲಾ, ಸುಪಾರಿ ಮತ್ತು ಇತರ ಗುಟ್ಕಾ ಉತ್ಪನ್ನಗಳ ವ್ಯವಹಾರಗಳನ್ನು ನಡೆಸುತ್ತಿರುವ ನಾಲ್ಕು ಟ್ರೇಡಿಂಗ್ ಕಂಪೆನಿಗಳ ಮೇಲೆ ಐಟಿ ಅಧಿಕಾರಿಗಳ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಟ್ರೇಡಿಂಗ್ ಕಂಪೆನಿಗಳ ಕಚೇರಿ, ಗೋಡಾನ್ ಹಾಗೂ ಈ ಕಂಪೆನಿಗಳ ಮಾಲಕರ ಮನೆಗಳ ಮೇಲೂ ದಾಳಿ ಐಟಿ ಅಧಿಕಾರಿಗಳು ನಡೆಸಿದ್ದಾರೆ.
ಈ ಟ್ರೇಡಿಂಗ್ ಕಂಪೆನಿಗಳು ಪಾನ್ ಮಸಾಲಾ, ಸುಪಾರಿ ಮತ್ತು ಇತರ ಗುಟ್ಕಾ ಉತ್ಪನ್ನಗಳ ವ್ಯವಹಾರ ನಡೆಸುತ್ತಿವೆ ಎಂದು ತಿಳಿದುಬಂದಿದೆ.
Spread the love