ಮಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ

Spread the love

ಮಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಜಮಿಯ್ಯತುಲ್ ಫಲಾಹ್ ಸಂಭಾಗಣದಲ್ಲಿ ನಡೆಯಿತು.

ವಿದ್ಯಾರ್ಥಿಗಳು ಭವಿಷ್ಯದ ನಾಯಕರು, ಜೀವಿಸುವ ಹಕ್ಕನ್ನು ಬೇರೆ ಬೇರೆ ರೂಪಗಳಿಗೆ ತಿರುಗಿಸುವ ಮೂಲಕ ಹಕ್ಕನ್ನು ಕಸಿದು ಕೊಳ್ಳುತ್ತಿರುವುದು ತುಂಬಾ ಖೇದಕರ. ವಿದ್ಯಾರ್ಥಿ ಸಮೂಹವು ಜಾತಿ ಮತ ಬೇಧ ಮರೆತು ಅವರ ಹಕ್ಕನ್ನು ತೆಗೆಯುವಂತೆ ಮಾಡಬೇಕು, ವಿದ್ಯಾಭ್ಯಾಸದ ವ್ಯಾಪರೀಕರಣದಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸದಿಂದ ಮೂಲೆಗುಂಪಾಗಿದ್ದಾರೆ.

a c d f

ವಿದ್ಯಾರ್ಥಿಗಳು ಸ್ವಚ್ಛ ಸಮಾಜವನ್ನು ರೂಪಿಸಬೇಕು. ತಂದೆ ತಾಯಿ ಕೊಡುವ ಪ್ರೀತಿ ಯಾವುದೇ ಜನರಿಂದ ಪಡೆಯಲು ಸಾಧ್ಯವಿಲ್ಲ, ನಾವು ಪಡೆದ ಪ್ರೀತಿಯನ್ನು ಸಮಾಜದ ಜನರಿಗೆ ಬೋಧಿಸಬೇಕು. ಪ್ರೀತಿ ಸಹನೆಯಿಂದ ಜೀವಿಸಬೇಕು ಎಂದು ಮಂಗಳೂರಿನ ಜಮಿಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ಮಾನವ ಹಕ್ಕು ಹೋರಾಟಗಾರ ಅಡ್ವಕೇಟ್ ದಿನೇಶ್ ಹೆಗ್ಡೆ ಉಳೇಪಾಡಿ ಕರೆ ನೀಡಿದರು.

 ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಸಿರ್ ಹಸನ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವಿದ್ಯಾರ್ಥಿಗಳು ದೇಶದ ಅಭಿವೃದ್ಧಿಯ ಕೇಂದ್ರ ಬಿಂದು ಎಂದು ಬನ್ನಿಸುತ್ತಾ, ವಿದ್ಯಾರ್ಥಿಗಳಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಳೆದ ಏಳು ವರ್ಷಗಳಿಂದ ವಿದ್ಯಾರ್ಥಿವೇತನವನ್ನು ನೀಡುತ್ತಾ ಬಂದಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂವಿದಾನದ ಎಲ್ಲಾ ಹಕ್ಕುಗಳು ಕಟ್ಟಕಡೆಯ ವ್ಯಕ್ತಿಗೂ ಸಿಗುವ ವರೆಗೂ ಹೋರಾಡುವುದು, ಈ ಕಾರ್ಯಕ್ರಮದ ಭಾಗವಾಗಿ ದೇಶಾದ್ಯಂತ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ದೇಶಾದ್ಯಂತ ಹಮ್ಮಿಕೊಂಡಿದೆ. ಈ ಪ್ರಯುಕ್ತ ಒಂದು ಕೋಟಿ ರೂ ವೆಚ್ಚ ಮಾಡುತ್ತಿದೆ. ಅದಲ್ಲದೆ ಸ್ಲೂಲ್ ಚಲೋ, ಶೈಕ್ಷಣಿಕ ಮಾಹಿತಿ ಶಿಬಿರವನ್ನು ವರ್ಷಂಪ್ರತಿ ಹಮ್ಮಿಕೊಳ್ಳುತ್ತಿದೆ. ಈ ವರ್ಷ 15 ಮಾಹಿತಿ ಕೇಂದ್ರವನ್ನು ಕರ್ನಾಟಕ ರಾಜ್ಯಾದ್ಯಂತ ತೆರೆದಿದೆ. ಇದರಲ್ಲಿ ಸುಮಾರು 13000 ವಿದ್ಯಾರ್ಥಿಗಳು ವಿವಿಧ ರೀತಿಯಲ್ಲಿ ಸದುಪಯೋಗ ಪಡೆದಿದ್ದಾರೆ ಎಂದು ವಿವರಿಸಿದರು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಸಿರ್ ಹಸನ್ ವಹಿಸದರು. ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಮಾನವ ಹಕ್ಕು ಹೋರಾಟಗಾರ ಅಡ್ವಕೇಟ್ ದಿನೇಶ್ ಹೆಗ್ಡೆ ಉಳೇಪಾಡಿ, ಅಡ್ವಕೇಟ್ ಸಾದುದ್ದೀನ್ ಎಮ್.ಸಾಲಿಹ್ ಜಮಿಯ್ಯತುಲ್ ಫಲಾಹ್ ಮಂಗಳೂರು, ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಪ್ರೋಫೆÀಸರ್ ಮುಸ್ತಫ ಬಸ್ತಿಕೋಡಿ, ಪಾಪ್ಯುಲರ್ ಫ್ರಂಟ್ ಜಿಲ್ಲಾಧ್ಯಕ್ಷರಾದ ಮುಹಮ್ಮದ್ ಹನೀಫ್, ನ್ಯಾಶನಲ್ ವುಮನ್ಸ್ ಫ್ರಂಟ್ ಜಿಲ್ಲಾಧ್ಯಕ್ಷೆ ದುಲೈಕಾ ಬಜ್ಪೆ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪಾಪ್ಯುಲರ್ ಫ್ರಂಟ್ ಜಿಲ್ಲಾಧ್ಯಕ್ಷರು ಮುಹಮ್ಮದ್ ಹನೀಫ್ ಸ್ವಾಗತಿಸಿದರು. ಫಯಾಝ್ ಮಂಜನಾಡಿ ವಂದಿಸಿದರು. ಝಾಹಿದ್ ಮಲಾರ್ ಕಾರ್ಯಕ್ರಮವನ್ನು ನಿರೂಪಿಸಿದರು.


Spread the love