ಮಂಗಳೂರು: ಗುಜರಾತಿನ ಸಕ್ಕರ್ ಭಾಗ್ ಮೃಗಾಲಯದಿಂದ ವನ್ಯಪ್ರಾಣಿ ವಿನಿಮಯ ಯೋಜನೆಯಡಿ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಒಂದು ಜೊತೆ ಏಶ್ಯಾಟಿಕ್ ಸಿಂಹಗಳು, ಎರಡು ಜೊತೆ ಬಿಳಿ ನವಿಲುಗಳು, ನಾಲ್ಕು ಅಲೆಕ್ಸ್‍ಂಡ್ರಿಯನ್ ಗಿಳಿಗಳು, ಐಬಿಸ್, ಚಮಚ ಕೊಕ್ಕಿನ ಪಕ್ಷಿ, ಲೇಡಿ ಅಮ್ಹೆರ್‍ಸ್ಟ್ ಪೆಸೆಂಟ್ ಇತ್ಯಾದಿಗಳು ಆಗಮಿಸಿವೆ. ಇವುಗಳನ್ನು ಸಂದರ್ಶಕರ ವೀಕ್ಷಣೆಗೆ ತೇರೆದಿಡಲಾಗಿದೆ.
ಪಿಲಿಕುಳದಿಂದ ಗುಜರಾತಿಗೆ, ಮೌಸ್ ಡೀರ್, ಕಾಳಿಂಗ ಸರ್ಪ, ವಿವಿಧ ಜಾತಿಯ ಹಾವುಗಳು, ಆಮೆಗಳನ್ನು ಕಳುಹಿಸಿ ಕೊಡಲಾಗಿದೆ.