ಮಂಗಳೂರು: ಪಿಲಿಕುಳದಲ್ಲಿ ಮತ್ಸ್ಯೋತ್ಸವ

Spread the love

ಮಂಗಳೂರು (ಕರ್ನಾಟಕ ವಾರ್ತೆ): ಪಿಲಿಕುಳ ರಾಜ್ಯದಲ್ಲೇ  ಪ್ರಸಿದ್ಧವಾದ  ನಿಸರ್ಗಧಾಮವಾಗಿದ್ದು, ಇನ್ನಷ್ಟು ಪ್ರವಾಸಿಗರನ್ನು  ಆಕರ್ಷಿಸಲು ಬೇರೆ ಬೇರೆ ಪಾರಂಪರಿಕ, ಪರಿಸರ ಕಾರ್ಯಕ್ರಮಗಳನ್ನು ಕೂಡಾ ಹಮ್ಮಿಕೊಳ್ಳಲಾಗುತ್ತಿದೆ.    ಈ ನಿಟ್ಟಿನಲ್ಲಿ ಮೀನು ಪ್ರಿಯರಿಗೆ ಒಂದು ಉತ್ತಮ ಸದವಕಾಶವನ್ನು ಕಲ್ಪಿಸುವ ದೃಷ್ಠಿಯಿಂದ ಹಾಗೂ ಮೀನುಗಾರಿಕೆ ಬಗ್ಗೆ ಅರಿವು ಮೂಡಿಸುವ ಕುರಿತು ದಿನಾಂಕ: 17.05.2015 ರಂದು  ಭಾನುವಾರ ಬೆಳಿಗ್ಗೆ 9.00 ಕ್ಕೆ ಪಿಲಿಕುಳ ದೋಣಿ ವಿಹಾರ ಕೆರೆಯ ಬಳಿ ಪಿಲಿಕುಳ ಮತ್ಸ್ಯೋತ್ಸವ (ಪಿಲಿಕುಳ ಫಿಶ್ ಕಾರ್ನಿವಾಲ್) ನಡೆಯಲಿದೆ.

ಪಿಲಿಕುಳ ಮತ್ಸ್ಯೋತ್ಸವ (ಪಿಲಿಕುಳ ಫಿಶ್ ಕಾರ್ನಿವಾಲ್) ಮಾನ್ಯ  ಜಿಲ್ಲಾಧಿಕಾರಿಯವರು ದಕ್ಷಿಣ ಕನ್ನಡ ಜಿಲ್ಲೆ ಇವರಿಂದ ಬೆಳಿಗ್ಗೆ 9.00 ಕ್ಕೆ ವಿನೂತನವಾಗಿ ಉಧ್ಘಾಟನೆಗೊಳ್ಳಲಿದೆ.          ಪಿಲಿಕುಳ ಕೆರೆಯ ಮೀನನ್ನು ಹಿಡಿದು ಮಾರಾಟ ಮಾಡುವುದು, ಗಾಳ ಹಾಕುವ ಹವ್ಯಾಸಕ್ಕೆ ಪ್ರೋತ್ಸಾಹ ನೀಡುವುದು, ಸ್ಥಳದಲ್ಲೇ ತಾಜಾ ಮೀನುಗಳ ಖಾದ್ಯ ತಯಾರಿಸುವುದು, ವೈಜ್ಞಾನಿಕ ಮತ್ತು ಪರಿಸರ ಸ್ನೇಹಿ ಮೀನುಗಾರಿಕೆ  ಬಗ್ಗೆ ಅರಿವು ಮೂಡಿಸುವುದು ಇತ್ಯಾದಿ  ಕಾರ್ಯಕ್ರಮಗಳು ಸಾಕಾರಗೊಳ್ಳಲಿವೆ.

ಮೀನುಗಾರಿಕೆ ಮಾಹಾವಿದ್ಯಾಲಯ ಮಂಗಳೂರು, ಮೀನುಗಾರಿಕೆ ಅಭಿವೃದ್ಧಿ ನಿಗಮ, ಮೀನುಗಾರಿಕಾ ಇಲಾಖೆ ಇವರ ಸಹಯೋಗದಲ್ಲಿ ಪಿಲಿಕುಳ ಮತ್ಸ್ಯೋತ್ಸವ (ಪಿಲಿಕುಳ ಫಿಶ್ ಕಾರ್ನಿವಾಲ್) ನಡೆಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಕಾರ್ಯಕಾರಿ ಮಂಡಳಿ ಅಧ್ಯಕ್ಷರು ಹಾಗೂ ದ.ಕ. ಜಿಲ್ಲಾಧಿಕಾರಿಗಳಾದ ಎ.ಬಿ.ಇಬ್ರಾಹಿಂ ಕೋರಿದ್ದಾರೆ.


Spread the love