ಮಂಗಳೂರು: ಪ್ರಧಾನ ಮಂತ್ರಿ ಆವಾಸ್ ಯೋಜನೆ: ಫೆ.28 ರಂದು ಫಲಾನುಭವಿಗಳ ಸಭೆ
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಇಡ್ಯಾ ಗ್ರಾಮದ ಸರ್ವೆ ನಂ 16 ಪಿ 1 ರಲ್ಲಿ 600 ಮನೆಗಳನ್ನು ಜಿ+3 ಮಾದರಿಯಲ್ಲಿ ನಿರ್ಮಿಸಿ ವಿತರಿಸುವ ಯೋಜನೆಗೆ ಈಗಾಗಲೇ ಆಯ್ಕೆಯಾಗಿರುವ ಫಲಾನುಭವಿಗಳಿಂದ ವಂತಿಕೆ ಕ್ರೋಡಿಕರಿಸುವ ಬಗ್ಗೆ ಈಗಾಗಲೇ 600 ಫಲಾನುಭವಿಗಳಿಗೆ ನೋಟಿಸ್ ಜಾರಿ ಮಾಡಿದ್ದು 390 ಫಲಾನುಭವಿಗಳು ವಂತಿಕೆಯನ್ನು ನೀಡಿದ್ದು ಉಳಿಕೆ 210 ಫಲಾನುಭವಿಗಳು ವಂತಿಕೆ ಪಾವತಿಸಬೇಕಾಗಿರುತ್ತದೆ.
ಸದರಿ ಯೋಜನೆಗೆ ರೂ. 40 ಕೋಟಿ ಯೋಜನಾ ವೆಚ್ಚದಲ್ಲಿ ಫಲಾನುಭವಿಗಳಿಂದ ಒಟ್ಟು ರೂ. 1143.20 ಲಕ್ಷ ವಂತಿಕೆ ಸಂಗ್ರಹಿಸಬೇಕಾಗಿರುತ್ತದೆ. ಪ್ರಸ್ತುತ ಫಲಾನುಭವಿಗಳ ವಂತಿಕೆ ರೂ. 1 ಕೋಟಿ ಸಂಗ್ರಹವಾಗಿದ್ದು, ಸದರಿ ಕಾಮಗಾರಿಯನ್ನು ಪೂರ್ಣಗೊಳಿಸಲು ಬಾಕಿ ಮೊತ್ತವನ್ನು ಫಲಾನುಭವಿಗಳ ಬ್ಯಾಂಕ್ ಸಾಲದ ಮೂಲಕ ಮತ್ತು ಉಳಿದ ಫಲಾನುಭವಿಗಳ ವಂತಿಕೆಯಿಂದ ಪಾವತಿಸಬೇಕಾದಿದೆ, ಫಲಾನುಭವಿಯು ಬ್ಯಾಂಕ್ ಸಾಲ ಪಡೆಯಲು ಅವಶ್ಯಕ ದಾಖಲೆಗಳನ್ನು ಸಲ್ಲಿಸಬೇಕು.
ಆದ್ದರಿಂದ ಈ ಯೋಜನೆಯನ್ನು ತುರ್ತಾಗಿ ಪೂರ್ಣಗೊಳಿಸಿ ವಸತಿ ವಿತರಿಸುವ ಸಲುವಾಗಿ ಫಲಾನುಭವಿಗಳಿಗೆ ಫೆ.28ರಂದು ನಗರದ ಕುದ್ಮಲ್ ರಂಗರಾವ್ ಮಿನಿ ಪುರಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ಸಭೆ ನಡೆಯಲಿದೆ ಎಂದು ಮಂಗಳೂರು ಮಹಾನಗರಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.