ಮಂಗಳೂರು: ಪ್ರಸೂತಿ ಬಳಿಕ ಮಹಿಳೆಯ ಸಾವು ; ವೈದ್ಯರ ನಿರ್ಲ್ಯಕ್ಷ್ಯ ಆರೋಪ

Spread the love

ಮಂಗಳೂರು: ಪ್ರಸೂತಿಯ ಬಳಿಕ ಮಹಿಳೆಯೋರ್ವರು ಸಾವನ್ನಪ್ಪಿದ ಘಟನೆ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಶುಕ್ರವಾರ ವರದಿಯಾಗಿದೆ

ಸಾವನಪ್ಪಿದ ಮಹಿಳೆಯನ್ನು ಅಜ್ಜಾವರ ಸುಳ್ಯದ ಗಣೇಶ್ ಅವರ ಪತ್ನಿ  ಪೂವಕ್ಕ(25) ಎಂದು ಗುರುತಿಸಲಾಗಿದೆ.

ಪೂವಕ್ಕರನ್ನು  ಎಪ್ರಿಲ್ 20ರಂದು ಲೇಡಿಗೋಶನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಪ್ರಿಲ್ 21 ರಂದು ಪೂವಕ್ಕ ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗು ಮತ್ತು ತಾಯಿ ಆರೋಗ್ಯವಾಗಿದ್ದರು. ಮೇ 6 ರಂದು ಪೂವಕ್ಕ  ಆರೋಗ್ಯದಲ್ಲಿ ಏರುಪೇರಾಗಿದ್ದು, ಆಕೆಯನ್ನು ವೆನ್ಲಾಕ್ ಆಸ್ಪತ್ರಗೆ ದಾಖಲಿಸಲಾಯಿತು. ಮೇ 7 ರಂದು ಬೆಳಿಗ್ಗೆ 8.45 ಕ್ಕೆ ಪೂವಕ್ಕ ಸಾವನಪ್ಪಿದ್ದು, ಆಕೆಯ ಗಂಡ ಗಣೇಶ್ ವೈದ್ಯರ ನಿರ್ಲಕ್ಷ್ಯದಿಂದ ಪೂವಕ್ಕ ಸಾವನಪ್ಪಿದ್ದಾರೆ ಎಂದು ಆರೋಪಿಸಿ ಬಂದರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

poovakka_Sullia_20150508

poovakka_Ganesh_Ladygoschen_20150508

ಮೇ 8ರಂದು ಪೂವಕ್ಕರ ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಮ್ ಬಳಿಕ ಲೇಡಿಗೋಷನ್ ಆಸ್ಪತ್ರೆಗೆ ತರಲಾಯಿತು ಅಲ್ಲಿ ಪೂವಕ್ಕರ ಸಂಬಂಧಿಗಳು ಹಾಗೂ ಊರಿನವರು ನೂರಾರು ಸಂಖ್ಯೆಯಲ್ಲಿ ಸೇರಿದ್ದು ಆಸ್ಪತ್ರೆಯ ವಿರುದ್ದ ಘೋಷಣೆಗಳನ್ನು ಕೂಗತೊಡಗಿದರು ಮತ್ತು ವೈದ್ಯರ ವಿರುದ್ದ ಕೂಡಲೇ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಪೂವಕ್ ಅವರ ಸಂಬಂಧಿ ಸುಂದರಿ ಮ್ಯಾಂಗಲೋರಿಯನ್ ಪ್ರತಿನಿಧಿಯೊಂದಿಗೆ ಮಾತನಾಡಿ ಒಂದು ವರೆ ವರ್ಷದ ಹಿಂದೆ ಪೂವಕ್ಕರನ್ನು ಸುಳ್ಯ ಅಜ್ಜಾವರದ ಗಣೇಶ್ ಅವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಎಪ್ರಿಲ್ 20ರಂದು ಪೂವಕ್ಕರನ್ನು ಪ್ರಸೂತಿಗಾಗಿ ಲೇಡಿಗೋಶನ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಎಪ್ರಿಲ್ 21 ರಂದು ಪೂವಕ್ಕ ಸಿಸೇರಿಯನ್ ಮೂಲಕ ಪೂವಕ್ಕರ  ಪ್ರಸೂತಿ ನಡೆಲಾಯಿತು. ಆಕೆ ಗಂಡು ಮಗುವನ್ನು ಹೆತ್ತಿದ್ದು, ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದರು. ಮೇ 6 ರಂದು ಪೂವಕ್ಕ ಕಾಲುನೋವಿನಿಂದ ಬಳಲು ಆರಂಭವಾಗಿದ್ದು ಕಾಲುಗಳು ಬಾತಲು ಆರಂಭವಾದವು. ನಾನು ಕೂಡಲೇ ವೈದ್ಯರಿಗೆ ಮಾಹಿತಿ ನೀಡಿದ್ದು ಅವರು ನೀರಿನ ಮಸಾಜ್ ಮಾಡಿದರು ಆದರೆ ಯಾವುದೆ ಪರಿಹಾರ ಕಾಣಲಿಲ್ಲ. ಬಳಿಕ ವೈದ್ಯರು ಅವರನ್ನು ವೆನ್ಲಾಕ್ ಆಸ್ಪತ್ರೆಗೆ ಆಕೆಯನ್ನು ವರ್ಗಾಯಿಸಿದರು. ಮೇ 7 ರಂದು ಆಕೆ ಅಲ್ಲಿ ಸಾವನಪ್ಪಿದ್ದು ಆಕೆಯ ಸಾವಿಗೆ ಲೇಡಿಗೋಷನ ಆಸ್ಪತ್ರೆಯ ವೈದ್ಯರ ನಿರ್ಲ್ಯಕ್ಷವೇ ಕಾರಣ ಎಂದರು. ಈ ಬಗ್ಗೆ ಸರಿಯಾದ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾಕಾರರು ನೂರಾರು ಸಂಖ್ಯೆಯಲ್ಲಿ ಆಸ್ಪತ್ರೆಯ ಮುಂಬಾಗದಲ್ಲಿ ಜಮಾಯಿಸಿದ್ದು ಪೋಲಿಸರ ಆಶ್ವಾಸನೆಯ ಬಳಿಕ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು.

ಬಂದರು ಪೋಲಿಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ


Spread the love