Home Mangalorean News Kannada News ಮಂಗಳೂರು: ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಮತ್ತು ಯುನೆಸ್ಕೊ ಚೇರ್ ಇನ್ ಬಯೋ ಎಥಿಕ್ಸ್ ಸಹಯೋಗದೊಂದಿಗೆ ರಾಷ್ಟ್ರಮಟ್ಟದ ಸೈಕೋಫಾರ್ಮಿನರ್

ಮಂಗಳೂರು: ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಮತ್ತು ಯುನೆಸ್ಕೊ ಚೇರ್ ಇನ್ ಬಯೋ ಎಥಿಕ್ಸ್ ಸಹಯೋಗದೊಂದಿಗೆ ರಾಷ್ಟ್ರಮಟ್ಟದ ಸೈಕೋಫಾರ್ಮಿನರ್

Spread the love

ಮಂಗಳೂರು: ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು, ಮಂಗಳೂರು ಮತ್ತು ಯುನೆಸ್ಕೊ ಚೇರ್ ಇನ್ ಬಯೋ ಎಥಿಕ್ಸ್, ದಕ್ಷಿಣ ಭಾರತ ಘಟಕ ಸಹಯೋಗದೊಂದಿಗೆ ರಾಷ್ಟ್ರಮಟ್ಟದ ಸೈಕೋಫಾರ್ಮಿನರ್ 2016 ಮತ್ತು ರಾಷ್ಟ್ರಮಟ್ಟದ ಬಯೋ ಎಥಿಕ್ಸ್ ಸ್ಕಿಟ್ ಸ್ಪರ್ಧೆ ಯ ಪತ್ರಿಕಾಗೋಷ್ಠಿ, ಮಂಗಳವಾರ, ಜನವರಿ 12, 2016 ಪತ್ರಿಕಾ ಭವನ, ಮಂಗಳೂರಿನಲ್ಲಿ ನಡೆಯಿತು.

1-fmmc-press

ಸಭೆಯನ್ನುದ್ದೇಶಿಸಿ, ಡಾ. ಪ್ರಿನ್ಸಿ ಲೂಯಿಸ್ ಪಾಲಟ್ಟಿ, ಮುಖ್ಯಸ್ಥರು, ಯುನೆಸ್ಕೊ ಚೇರ್ ಬಯೋ ಎಥಿಕ್ಸ್, FMMC, ಎಥಿಕ್ಸ್ ಯುನೆಸ್ಕೊ ಚೇರ್ – ದಕ್ಷಿಣ ಭಾರತ ಘಟಕ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ಜನವರಿ 17, 2016 ರಂದು ಮೂರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸೈಕೊಫಾರ್ಮಾಕಾಲಾಜಿ ಸೆಮಿನಾರನ್ನು ಸತತ ಮೂರನೇ ಬಾರಿಗೆ ಯಶಸ್ವಿಯಾಗಿ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ಸೈಕೊಫಾರ್ಮಾಕಾಲಾಜಿ ಬಗ್ಗೆ ತಿಳುವಳಿಕೆಯನ್ನು ಬೆಳೆಸಿಕೊಳ್ಳಲು ಈ ಸೆಮಿನಾರ್ ಎರಡು ಬೃಹತ್ ಸಂಸ್ಥೆಗಳ ಯಶಸ್ವಿ ಸಹಯೋಗದೊಂದಿಗೆ ಆಯೋಜಿಸಲಾಗುತ್ತಿದೆ.

ಪ್ರತಿ ಬಾರಿಯಂತೆ ಸ್ನಾತಕೋತ್ತರ ಪದವೀಧರರಿಗೆ ರಸ ಪ್ರಶ್ನೆ ಕಾರ್ಯಕ್ರಮ, ಸ್ನಾತಕೋತ್ತರ ವಿದ್ಯಾರ್ಥಿ ಮತ್ತು ಸಿಬ್ಬಂದಿಗಳಿಗೆ ಪೇಪರ್ ಪ್ರೆಸೆಂಟೇಶನ್‍ನಂತಹ ವಿಶೇಷ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ರಕ್ರಮದಲ್ಲಿ ಭಾಗವಹಿಸುವ ಸಂಪನ್ಮೂಲ ವ್ಯಕ್ತಿಗಳು ಈ ವಿಷಯದಲ್ಲಿ ಅಪಾರ ಜ್ಞಾನವನ್ನು ಹೊಂದಿದವರಾಗಿರುತ್ತಾರೆ.

ಅಂತರಾಷ್ಟ್ರೀಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳಲ್ಲದೆ ವಿದ್ಯಾರ್ಥಿಗಳು ಕೂಡಾ ಬಯೋ ಎಥಿಕ್ಸ್ ಬಗ್ಗೆ ವಿಷಯಗಳನ್ನು ಮಂಡಿಸಲಿರುವರು. ಬಯೋ ಎಥಿಕ್ಸ್ ಬಗೆಗಿನ ಸ್ಕಿಟ್ ಸ್ಪರ್ಧೆ, ಸಮಾಜದಲ್ಲಿ ಬಯೋ ಎಥಿಕ್ಸ್‍ನ ಪರಿಣಾಮಗಳು ಮತ್ತು ವ್ಯಕ್ತಿತ್ವದ ತಿದ್ದುವಿಕೆಗೆ ಉತ್ತೇಜನ ನೀಡಲಾಗುವುದು. ಕರ್ನಾಟಕ ಹಾಗೂ ಇತರ ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಲಿರುವರು.

ಡಾ. ಪ್ರಿನ್ಸಿ ಲೂಯಿಸ್ ಪಾಲಟ್ಟಿ, ಮುಖ್ಯಸ್ಥರು, ಯುನೆಸ್ಕೊ ಚೇರ್ ಬಯೋ ಎಥಿಕ್ಸ್, FMMC, ದಕ್ಷಿಣ ಭಾರತ ಘಟಕ, ಡಾ. ನಾಗೇಶ್ ಕೆ. ಆರ್, ಕಾರ್ಯದರ್ಶಿ, ಯುನೆಸ್ಕೊ ಚೇರ್ ಬಯೋ ಎಥಿಕ್ಸ್, FMMC, ದಕ್ಷಿಣ ಭಾರತ ಘಟಕ, ಡಾ. ವಿಜಯಲಕ್ಷ್ಮಿ ಎಂ. ಕೆ., ಸಂಯೋಜಕ ಅಧ್ಯಕ್ಷರು, ಸೈಕೋಫಾರ್ಮಿನಾರ್ 2016, ಡಾ. ಸತೀಶ್ ರಾವ್, ಸಂಯೋಜಕ ಅಧ್ಯಕ್ಷರು, ಸೈಕೋಫಾರ್ಮಿನಾರ್ 2016, ಡಾ. ಶಿವಶಂಕರ್ ಎ. ಆರ್, ಸಂಯೋಜಕ ಕಾರ್ಯದರ್ಶಿ, ಬಯೋ ಎಥಿಕ್ಸ್ ಸ್ಕಿಟ್ ಸ್ಪರ್ಧೆ, ಡಾ. ರೇಖಾ ಬಿ, ಸಂಯೋಜಕ ಕಾರ್ಯದರ್ಶಿ, ಬಯೋ ಎಥಿಕ್ಸ್ ಅಪ್‍ಡೇಟ್ ಪತ್ರಿಕಾ ಪ್ರಕಟಣೆಯಲ್ಲಿ ಉಪಸ್ಥಿತರಿದ್ದರು.


Spread the love

Exit mobile version