ಮಂಗಳೂರು: ಬಂಟ್ವಾಳದಲ್ಲಿ ನಡೆದ ಹರೀಶ್ ಕೊಲೆ ಪ್ರಕರಣಕ್ಕೆ ಸಂಬಂಧೀಸಿದಂತೆ ಇನ್ನೋರ್ವ ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ. ಬಂಧಿತರನ್ನು ಗೋಳ್ತಮಜಲು ನಿವಾಸಿ ಮಿಥುನ್ (27) ಎಂದು ಗುರುತಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಪೋಲಿಸ್ ವರಿಷ್ಠಾಧಿಕಾರಿ ಡಾ ಶರಣಪ್ಪ ನವೆಂಬರ್ 11 ರಂದು ಬಂಟ್ವಾಳದಲ್ಲಿ ತನ್ನ ಗೆಳೆಯ ಸಮಿಯುಲ್ಲಾ ಜೊತೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಗಳು ಚೂರಿಯಿಂದ ಹರೀಶ್ ಮತ್ತು ಸಮಿಯುಲ್ಲಾ ಅವರಿಗೆ ಇರಿದು ಪರಾರಿಯಾಗಿದ್ದರು. ಹರೀಶ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನಪ್ಪಿದ್ದರೆ ಸಮಿಯಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ಈಗಾಗಲೇ ಭುವಿತ್ ಶೆಟ್ಟಿ ( 25) ಹಾಗು ಅಚ್ಯುತ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಲಾಯಕ್ಕೆ ಹಾಜರು ಪಡಿಸಿ ಪ್ರಸ್ತುತ ನ್ಯಾಯಾಂಗ ಬಂಧನದಲಿದ್ದಾರೆ.
ಮೂರನೇ ಆರೋಪಿ ಮಿಥುನ್ ವಿರುದ್ದ ಬಂಟ್ವಾಳ ನಗರ ಠಾಣೆಯಲ್ಲಿ ರೌಡಿ ಶೀಟ್ ತೆರೆಯಲಾಗಿದ್ದು, ಈತನ ಮೇಲೆ ಬಂಟ್ವಾಳ ಠಾಣೆಯಲ್ಲಿ ಒಂದು ಕೊಲೆ, 3 ಕೊಲೆ ಯತ್ನ ಪ್ರಕರಣ ಮತ್ತು 8 ಇತರ ಪ್ರಕರಣಗಳು ಹಾಗೂ ವಿಟ್ಲ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಕೊಲೆ ಬಳಸಿದ ಒಮಿನಿ ಕಾರನ್ನು ವಶಪಡಿಸಿಕೊಂಡಿದ್ದು, ಶೀಘ್ರದಲ್ಲಿ ತಲೆಮರಿಸಿಕೊಂಡಿರುವ ಇತರ ಇಬ್ಬರು ಆರೋಪಿಗಳನ್ನು ಬಂಧಿಸಲಾಗುವುದು ಎಂದರು
ಗಲಭೆ ಪ್ರಕರಣ: ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಬಂಧನ
ಗಲಭೆ ಪ್ರಕರಣಗಳಲ್ಲಿ ಭಾಗಿಯಾಗಿ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಸುಳ್ಯ ನಿವಾಸಿಗಳಾದ ಶರೀಫ್ (25) ಹಾಗೂ ಮುನೀರ್ ಬಿ ಎಂ (26) ಎಂದು ಗುರುತಿಸಲಾಗಿದೆ. ಶರೀಫ್ ಅವರನ್ನು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಅಕ್ಟೋಬರ್ 5 ರಂದು ಬಂಧಿಸಿದರೆ, ಮುನಿರನನ್ನು ನವೆಂಬರ್ 30ರಂದು ಕ್ಯಾಲಿಕಟ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
2010 ರ ಎಪ್ರೀಲ್ 14 ರಂದು ಸುಳ್ಯ ನಿವಾಸಿಯಾದ ಶಾಫಿ ಅವರು ತಮ್ಮ ಗೆಳೆಯ ಕೆ ಎಚ್ ನೌಷದ್ ಅವರ ಜೊತೆಯಲ್ಲಿ ಮೋಟಾರ್ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ನಾಲ್ಕು ಬೈಕು ಹಾಗೂ ಒಂದು ಆಲ್ಟೋ ಕಾರಿನಲ್ಲಿ ಬಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದರು. ಈ ಕುರಿತು ಸುಳ್ಯ ಠಾಣೆಯಲ್ಲಿ ಮುಸ್ತಾಫ, ಮುಕ್ರಿ, ಪಿ ಎಂ ಶರೀಫ್, ಮುನೀರ್ ಹುಸೈನಾರ್, ಅಬ್ದುಲ್ ರಹಿಮಾನ್, ಹನೀಫ್ ಮುಕ್ರಿ, ಕಲಂದರ್ ಶಾಫಿ, ಹಕೀಂ, ಆಲೀಲ್, ಅಬ್ದುಲ್ ಇಜಾಜ್, ಎಂಬುವರ ಮೇಲೆ ಪ್ರಕರಣ ದಾಖಲಾಗಿತ್ತು.
ತನಿಖೆಯ ವೇಳೆ 9 ಮಂದಿ ಆರೋಪಿಗಳ ವಿರುದ್ದ ದೋಷಾರೋಪಣಾ ಪಟ್ಟಿ ದಾಖಲಾಗಿದ್ದು ನ್ಯಾಯಾಲಯಕ್ಕೆ ಹಾಜರಾಗದೆ ಇರುವ ಶರೀಫ್ ಹಾಗೂ ಮುನಿರ್ ಅವರಿಗೆ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿತ್ತು. ಈ ಬಗ್ಗೆ ಆರೋಪಿಗಳ ಕುರಿತು ಮಾಹಿತಿ ಕಲೆ ಹಾಕಿದ ತನಿಖಾಧಿಕಾರಿಗಳು ವಿದೇಶಕ್ಕೆ ತೆರಳಿ ತಲೆ ಮರೆಸಿಕೊಂಡ ಮಾಹಿತ ದೊರಕಿತ್ತು. ಇದರ ಹಿನ್ನಲೆಯಲ್ಲಿ 2014 ಮೇ 7 ರಂದು ಆರೋಪಿಗಳ ವಿರುದ್ದ ಲುಕ್ ಔಟ್ ಸರ್ಕುಲ್ಯರ್ ತೆರೆಯಲಾಗಿದ್ದು, ಅದರಂತೆ ಊರಿಗೆ ಬಂದ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.