Home Mangalorean News Kannada News ಮಂಗಳೂರು ಬಾಂಬ್​ ಪತ್ತೆ ಪ್ರಕರಣ: ಪೊಲೀಸರಿಗೆ ಶರಣಾದ ಶಂಕಿತ ಆರೋಪಿ ಆದಿತ್ಯ ರಾವ್

ಮಂಗಳೂರು ಬಾಂಬ್​ ಪತ್ತೆ ಪ್ರಕರಣ: ಪೊಲೀಸರಿಗೆ ಶರಣಾದ ಶಂಕಿತ ಆರೋಪಿ ಆದಿತ್ಯ ರಾವ್

Spread the love

ಮಂಗಳೂರು ಬಾಂಬ್​ ಪತ್ತೆ ಪ್ರಕರಣ: ಪೊಲೀಸರಿಗೆ ಶರಣಾದ ಶಂಕಿತ ಆರೋಪಿ ಆದಿತ್ಯ ರಾವ್

ಬೆಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಆರೋಪಿ ಬೆಂಗಳೂರು ಪೊಲೀಸರಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.

ಶಂಕಿತ ಆರೋಪಿ ಆದಿತ್ಯರಾವ್ ಬೆಂಗಳೂರು ಪೊಲೀಸರು ಎದುರು ಶರಾಣಾಗಿದ್ದಾನೆ. ನಗರದ ಡಿಜಿ & ಐಜಿಪಿ ಕಚೇರಿಗೆ ಬಂದು ಡಿಜಿಐಜಿ ನೀಲಮಣಿರಾಜು ಅವರ ಮುಂದೆ ಉಡುಪಿ ಮೂಲದ ಆದಿತ್ಯರಾವ್ ಶರಣಾಗಿದ್ದಾನೆ.​

ಮಂಗಳವಾರ ರಾತ್ರಿ ಶರಣಾಗಿರುವ ಆರೋಪಿಯನ್ನು ಡಿಜಿ ಕಚೇರಿ ಸಿಬ್ಬಂದಿ ಹಲಸೂರು ಗೇಟ್​ ಪೊಲೀಸ್​ ಠಾಣೆ ವಶಕ್ಕೆ ನೀಡಲಾಗಿದ್ದು, ರಾತ್ರಿ ಆರೋಪಿಯ ವಿಚಾರಣೆ ನಡೆಸಲಾಗಿದೆ. ಈ ವೇಳೆ ಬಾಂಬ್​ ಇಟ್ಟಿದ್ದು ನಾನೇ ಎಂದು ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ.

ಸದ್ಯ ವಶಕ್ಕೆ ಪಡೆದಿರುವ ಹಲಸೂರು ಗೇಟ್​ ಪೊಲೀಸರು ಆರೋಪಿಯನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ.

ಘಟನೆ ಹಿನ್ನೆಲೆ ಏನು?
ಸೋಮವಾರ ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣ ಬಳಿ ಅನುಮಾನಾಸ್ಪದ ಬ್ಯಾಗ್​ ಪತ್ತೆಯಾಗಿತ್ತು. ತದನಂತರ ಪರಿಶೀಲನೆ ನಡೆಸಿದಾಗ ಸಜೀವ್​ ಬಾಂಬ್​ ಇರುವುದು ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ತೀವ್ರ ಕಟ್ಟೆಚ್ಚರ ವಹಿಸಿ, ಬಾಂಬ್​ ನಿಷ್ಟ್ರಿಯ ದಳ ಬಾಂಬ್​ ಅನ್ನು ಕೆಂಜಾರು ಮೈದಾನ ಕಡೆ ಸುರಕ್ಷಿತವಾಗಿ ತೆಗೆದುಕೊಂಡು ಹೋಗಿ ಸಂಜೆ ವೇಳಿ ಸ್ಫೋಟಿಸಿ, ಸಂಭವಿಸಬಹುದಾದ ಅನಾಹುತವನ್ನು ತಪ್ಪಿಸಿತು.

ಈ ಬೆಳವಣಿಗೆಯ ನಡುವೆಯೇ ಬಾಂಬ್​ ಇಟ್ಟವರು ಯಾರು ಎಂಬುದರ ಬಗ್ಗೆ ತನಿಖೆ ಆರಂಭಿಸಿಲಾಯಿತು. ಅಲದೆ, ಮಂಗಳೂರು ಪೊಲೀಸರು ಶಂಕಿತ ವ್ಯಕ್ತಿ ಮತ್ತು ವಾಹನ ಫೋಟೋವನ್ನು ಬಿಡುಗಡೆ ಮಾಡಿದರು.

ಶಂಕಿತ ವ್ಯಕ್ತಿ ಆಟೋದಲ್ಲಿ ಬಂದು ಬ್ಯಾಗ್​ ಇಟ್ಟು ತೆರಳಿದ್ದಾನೆ. ಆತ ಸ್ಟಿಲ್​ ಡಬ್ಬಿಯಲ್ಲಿ ಬಾಂಬ್​ ತುಂಬಿಟ್ಟಿದ್ದ. ಮಂಗಳೂರು ಬಸ್​ ನಿಲ್ದಾಣದಿಂದ ವಿಮಾನ ನಿಲ್ದಾಣದವರೆಗೂ ಬಸ್​ನಲ್ಲೇ ಪ್ರಯಾಣ ಮಾಡಿದ್ದಾನೆ. ನಂತರ ವಿಮಾನ ನಿಲ್ದಾಣಕ್ಕೆ ಆಟೋದಲ್ಲಿ ತೆರಳಿದ್ದಾನೆ ಎಂದು ಕೇಂದ್ರೀಯ ಕೈಗಾರಿಕ ಭದ್ರತಾ ಪಡೆಯ ಡಿಜಿಜಿ ಅನಿಲ್​ ಪಾಂಡೆ ಮಾಹಿತಿ ನೀಡಿದ್ದರು.

ಮಂಗಳವಾರ ಸಂಜೆ ಮಂಗಳೂರು ಪೊಲೀಸರು ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದರು. ಅದರಲ್ಲಿ ವ್ಯಕ್ತಿಯೊಬ್ಬ ಟೋಪಿ ಧರಿಸಿ ಕೈಯಲ್ಲಿ ಪುಸ್ತಕ ಹಿಡಿದು ವಿಮಾನ ನಿಲ್ದಾಣದ ಪ್ರವೇಶ ದ್ವಾರದ ಬಳಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ಪತ್ತೆಯಾಗಿತ್ತು.


Spread the love

Exit mobile version