ಮಂಗಳೂರು: ಬಾವುಟಗುಡ್ಡೆ ತಂಗುದಾಣ ಬಸ್ ಬೇ ಬಳಕೆಗೆ ಅನುವು

Spread the love

ಮಂಗಳೂರು: ಬಾವುಟಗುಡ್ಡೆ ತಂಗುದಾಣ ಬಸ್ ಬೇ ಬಳಕೆಗೆ ಅನುವು

ಮಂಗಳೂರು: ಬಾವುಟಗುಡ್ಡೆಯ ಎಬಿ ಶೆಟ್ಟಿ ರಸ್ತೆಯ ಅಲೋಶಿಯಶ್ ಶಿಕ್ಷಣ ಸಂಸ್ಥೆಯ ಎದುರಿನ ಬಸ್ ತಂಗುದಾಣದ ಎದುರು ‘ಬಸ್ ಬೇ ಗೆಂದು ಮೀಸಲಿರಿಸಿದ್ದ ಜಾಗ ಬನಗಳ ನಿಲುಗಡೆಗೆ ಸಿಗಲಿದೆ ಟ್ರಾಫಿಕ್ ಜಾಮ್ ಸಮಸ್ಯೆಗೆ ಪರಿಹಾರ ಸಿಗುವ ನಿರೀಕ್ಷೆ ಇದೆ

ಬಾವುಟಗುಡ್ಡೆಯಲ್ಲಿ ಬಸ್ ತಂಗು ದಾಣದ ಎದುರು ಇದ್ದ ಖಾಲಿ ಜಾಗ ಮತ್ತು ರಸ್ತೆಯ ನಡುವೆ ಫುಟ್‌ಪಾತ್ ನಿರ್ಮಿಸಲಾಗಿತ್ತು. ಹಾಗಾಗಿ ಬಸ್‌ಗಳು ತಂಗುದಾಣದ ಎದುರಿನ ಸ್ಥಳದಲ್ಲಿ ನಿಲುಗಡೆಯಾಗದೆ ಅದಕ್ಕಿಂತ ರಸ್ತೆಯಲ್ಲಿಯೇ ನಿಲುಗಡೆಯಾಗುತ್ತಿದ್ದವು. ಇದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿ ಯಾಗಿತ್ತು.

ಇದೀಗ ಈ ಹಿಂದೆ ತಂಗುದಾಣವಿದ್ದ ಸ್ಥಳದಲ್ಲಿ ಶಿಕ್ಷಣ ಸಂಸ್ಥೆಯವರಿಂದಲೇ ವ್ಯವಸ್ಥಿತವಾದ ಹೊಸ ತಂಗುದಾಣ ನಿರ್ಮಾಣಗೊಂಡಿದೆ. ಮಾತ್ರವಲ್ಲದೆ, ರಸ್ತೆ ಮತ್ತು ತಂಗುದಾಣದ ಎದುರಿನ ಜಾಗದ ನಡುವೆ ಇದ್ದ ಫುಟ್ಪಾತ್‌ ನ್ನು ತೆರವುಗೊಳಿಸಲಾಗಿದೆ. ಹಾಗಾಗಿ ಬಸ್‌ಗಳು ತಂಗುದಾಣ ಸನಿಹಕ್ಕೆ ಹೋಗಲು ಸಾಧ್ಯವಾಗಲಿದೆ. ನೂತನ ತಂಗುದಾನ ಪೂರ್ಣ ಗೊಂಡ ನಂತರ ಬಸ್ಗಳು ಬಸ್ ಬೇ ಗಳನ್ನೇ ಬಳಸಿಕೊಲ್ಲುವಂತ್ತೆ ನೋಡಿಕೊಳ್ಳಬೇಕು


Spread the love