ಮಂಗಳೂರು :ಬೃಹತ್ ಜನಾಗ್ರಹ ಸಭೆಯ ವಾಹನ ನಿಲುಗಡೆಯ ವಿವರ
ಮಂಗಳೂರು : ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕಾಗಿ ಆದಿತ್ಯವಾರ 25/11/2018 ರಂದು 2:30ಗಂಟೆಗೆ ಜ್ಯೋತಿ ವೃತ್ತದಿಂದ ಬೃಹತ್ ಶೋಭಾಯಾತ್ರೆ ಮತ್ತು ಸಂಜೆ 4ಗಂಟೆಗೆ ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆಯುವ ಬೃಹತ್ ಜನಾಗ್ರಹ ಸಭೆ ಗೆ ವಿವಿಧ ಕಡೆಗಳಿಂದ ಆಗಮಿಸುವ ವಾಹನಗಳನ್ನು ನಿಲುಗಡೆ ವಿವರವನ್ನು ಕೆಳಗಡೆ ತಿಳಿಸಲಾಗಿದೆ
ವಾಹನ ನಿಲುಗಡೆ ವಿವರ
1) ಮೂಡಬಿದ್ರೆ, ಎಡಪದವು, ಕೈಕಂಬ, ಗುರುಪುರ, ವಾಮಂಜೂರು ಕಡೆಯಿಂದ ಬರುವ ವಾಹನಗಳು ನಂತೂರ್ ಮಲ್ಲಿಕಟ್ಟೆ ಮಾರ್ಗವಾಗಿ ಬಂಟ್ಸಹಾಸ್ಟೆಲ್ ನಲ್ಲಿ ಜನರನ್ನು ಇಳಿಸಿ, ಬಂಟ್ಸಹಾಸ್ಟೆಲ್ ಮೈದಾನದಲ್ಲಿ ನಿಲುಗಡೆ ಮಾಡಬಹುದು.
2) ಮುಲ್ಕಿ, ಸುರತ್ಕಲ್ ಕಡೆಯಿಂದ ಬರುವ ವಾಹನಗಳು ಕೂಳೂರು ಕೊಟ್ಟಾರ ಲೇಡಿಹಿಲ್ ಲಾಲ್ ಭಾಗ್ ಪಿ ವಿ ಯಸ್ ಮಾರ್ಗವಾಗಿ ಬಂಟ್ಸಹಾಸ್ಟೆಲ್ ನಲ್ಲಿ ಜನರನ್ನು ಇಳಿಸಿ, ಬಂಟ್ಸಹಾಸ್ಟೆಲ್ ಮೈದಾನದಲ್ಲಿ ನಿಲುಗಡೆ ಮಾಡಬಹುದು.
3) ಬಜ್ಪೆ, ಕಟೀಲು, ಕಿನ್ನಿಗೋಳಿ ಕಡೆಯಿಂದ ಬರುವ ವಾಹನಗಳು ಕಾವೂರ್ ಯೆಯ್ಯಾಡಿ ಮಾರ್ಗವಾಗಿ ನಂತೂರ್ ಮಲ್ಲಿಕಟ್ಟೆ ಮೂಲಕ ಬಂದು ಬಂಟ್ಸಹಾಸ್ಟೆಲ್ ನಲ್ಲಿ ಜನರನ್ನು ಇಳಿಸಿ, ಕದ್ರಿ ಮೈದಾನದಲ್ಲಿ ನಿಲುಗಡೆ ಮಾಡಬಹುದು.
4) ಸುಳ್ಯ, ಪುತ್ತೂರು, ವಿಟ್ಲ, ಬೆಳ್ತಂಗಡಿ, ಬಂಟ್ವಾಳ ಕಡೆಯಿಂದ ಬರುವ ವಾಹನಗಳು ಬಿ ಸಿ ರೋಡ್ ಮೂಲಕ ಬಂದು ಪಡೀಲ್ ಪಂಪುವೆಲ್, ಕಂಕನಾಡಿ ಮಾರ್ಗವಾಗಿ ಬಲ್ಮಠ ವೃತ್ತದಲ್ಲಿ ಜನರನ್ನು ಇಳಿಸಿ ಶಾಂತಿ ನಿಲಯ ರಸ್ತೆಯ ಮೂಲಕ ಸಾಗಿ ಎಮ್ಮೆಕೆರೆ ಮೈದಾನದಲ್ಲಿ ನಿಲುಗಡೆ ಮಾಡಬಹುದು
5) ತೊಕ್ಕೊಟ್ಟು ಕಡೆಯಿಂದ ಬರುವ ವಾಹನಗಳು ಪಂಪುವೆಲ್, ಕಂಕನಾಡಿ ಮಾರ್ಗವಾಗಿ ಬಲ್ಮಠ ವೃತ್ತದಲ್ಲಿ ಜನರನ್ನು ಇಳಿಸಿ ಶಾಂತಿ ನಿಲಯ ರಸ್ತೆಯ ಮೂಲಕ ಸಾಗಿ ಮಂಗಳಾದೇವಿ ಪಾಂಡೇಶ್ವರ ರಸ್ತೆಯ ಅಕ್ಕ ಪಕ್ಕದಲ್ಲಿ ನಿಲುಗಡೆ ಮಾಡಬಹುದು.
6) ಮಂಗಳೂರು ನಗರದಿಂದ ಬರುವ ಬಸ್ಸುಗಳು ಮತ್ತು ಚತುರ್ಚಕ್ರ ವಾಹನಗಳನ್ನು ಅನ್ಸ್ ಮತ್ತು ರೋಜರಿಯೋ ರಸ್ತೆಯ ಅಕ್ಕ ಪಕ್ಕದಲ್ಲಿ ನಿಲುಗಡೆ ಮಾಡಬಹುದು, ಹಾಗು ದ್ವಿಚಕ್ರ ವಾಹನಗಳನ್ನು ಕೇಂದ್ರ ಮೈದಾನದ ಒಳಗಡೆ ಕ್ರಿಕೆಟ್ ಗ್ರೌಂಡಿನ ಎರಡು ಬದಿಯಲ್ಲಿ ನಿಲುಗಡೆ ಮಾಡಬಹುದು,