ಮಂಗಳೂರು: ಬ್ಯಾಂಕ್ ಭದ್ರತೆ ಕುರಿತು ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಪೊಲೀಸರಿಂದ ಸಭೆ
ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ರಾಷ್ಟಿçÃಕೃತ ಬ್ಯಾಂಕ್ಗಳು, ಖಾಸಾಗಿ ಬ್ಯಾಂಕ್ಗಳು. ಕೋ-ಅಪರೇಟಿವ್ ಸೊಸೈಟಿ ಬ್ಯಾಂಕ್ಗಳು, ಇತರ ಬ್ಯಾಂಕ್ಗಳು, ಎಟಿಎಂಗಳು,, ಸಹಕಾರಿ ಸಂಘಗಳು, ಕೋ-ಅಪರೇಟಿವ್ ಸೊಸೈಟಿಗಳು, ಪೈನಾನ್ಸ್ ಕಂಪೆನಿಗಳು, ಮೈಕ್ರೋ ಪೈನಾನ್ಸ್ ಕಂಪೆನಿಗಳು, ಜುವೆಲ್ಲರಿ ಅಂಗಡಿಗಳು ಚಿನ್ನದ ಗಿರವಿ ಅಂಗಡಿಗಳು ಹೀಗೆ ಬೇರೆಬೇರೆ ಹಣಕಾಸು ವಹಿವಾಟುಗಳಿರುವ ಹಾಗೂ ಚಿನ್ನವನ್ನು ಸಂಗ್ರಹಿಸುವ ಸಂಸ್ಥೆಗಳಲ್ಲಿ ಸೂಕ್ತ ಭದ್ರತೆ ಹಾಗೂ ಸುರಕ್ಷತೆಯನ್ನು ಕೈಗೊಳ್ಳುವ ಕುರಿತಂತೆ ಪ್ರತಿ ಸಂಸ್ಥೆಗಳ ಮುಖ್ಯಸ್ಥರುಗಳನ್ನು ಒಟ್ಟುಗೂಡಿಸಿ ಸಭೆಯನ್ನು ಪ್ರತ್ಯೇಕವಾಗಿ 3 ದಿನಗಳಲ್ಲಿ ದಿನಾಂಕ 03-02-2025 ರಿಂದ 05-02-2025 ರವರೆಗೆ ಸಭೆಯನ್ನು ನಡೆಸಲಾಗಿರುತ್ತದೆ.
ಸಭೆಯಲ್ಲಿ ವಿವಿಧ ಸಂಸ್ಥೆಗಳ 723 ಜನ ಪ್ರತಿನಿಧಿಯವರು ಬಾಗವಹಿಸಿದ್ದು ಸಭೆಯಲ್ಲಿ ಸಂಸ್ಥೆಯವರು ನಿರ್ವಹಿಸಬೇಕಾಗಿರುವ High resolution ಸಿಸಿ ಕ್ಯಾಮೆರಾ, Grills Collapsible gate, Burglary Alarm panic switches, Sensor doors & Sensor lockers, Armed security guards, ಹಾಗೂ ಸಿಬ್ಬಂದಿಯವರಿಗೆ ಬ್ಯಾಂಕ್ ಸುರಕ್ಷತೆಯ ಬಗ್ಗೆ ತರಬೇತಿ ಇತರ ವಿಚಾರಗಳ ಬಗ್ಗೆ ಚರ್ಚಿಸಲಾಗಿದೆ, ದರೋಡೆ, ಕಳ್ಳತನ ಅಪರಾಧವನ್ನು ತಡೆಗಟ್ಟಲು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಜಾಗೃತಿ ಮತ್ತು ಸೂಕ್ತ ಸೂಚನೆಯನ್ನು ನೀಡಲಾಗಿರುತ್ತದೆ.
ಆರ್.ಬಿ.ಐ ರವರ ಮಾರ್ಗಸೂಚಿಯಂತೆ ಅತ್ಯಾಧುನಿಕ ಭದ್ರತಾ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಸಲಹೆ ಮತ್ತು ಸೂಚನೆಯನ್ನು ನೀಡಲಾಗಿದೆ. ಅಪಾಯ ಮತ್ತು ತುರ್ತು ಸಂಧರ್ಭದಲ್ಲ್ಲಿ ಸಹಾಯವಾಣಿ 112 ಕ್ಕೆ ಕರೆ ಮಾಡುವಂತೆಯು, ಕರೆ ಮಾಡಿದ ಕೆಲವೇ ನಿಮಿಷಗಳಲ್ಲಿ, ಹೊಯ್ಸಳ ಪೊಲೀಸರು ಕೃತ್ಯ ನಡೆದ ಸ್ಥಳಗಳಿಗೆ ತಲುಪಿ ತುರ್ತು ಕ್ರಮವನ್ನು ಕೈಗೊಳ್ಳುತ್ತಾರೆಂದು ಮನವರಿಕೆ ಮಾಡಿಕೊಡಲಾಗಿರುತ್ತದೆ. ಕೆಲವು ಸಂಸ್ಥೆಗಳು ಸೂಕ್ತ ಸುರಕ್ಷತೆ ಹಾಗೂ ಭದ್ರತೆಗಾಗಿ ಅತ್ಯಾಧುನಿಕ ಸೆಕ್ಯೂರಿಟಿ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದು, ಅವರುಗಳನ್ನು ಪ್ರಶಂಶಿಸಿ ಇತರೆ ಸಂಸ್ಥೆಗಳಲ್ಲಿಯೂ ಸಹ ಅದೇ ರೀತಿ ಸೆಕ್ಯೂರಿಟಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಸೂಚಿಸಲಾಗಿದೆ. ಎಲ್ಲಾ ಠಾಣಾಧಿಕಾರಿಗಳು ಈಗಾಗಲೇ ಎಲ್ಲಾ ಸಂಸ್ಥೆಗಳಿಗೆ ಭೇಟಿ ನೀಡಿ ಸಂಬಂಧಪಟ್ಟ ವ್ಯಕ್ತಿಗಳೊಂದಿಗೆ ಭದ್ರತೆಯ ಬಗ್ಗೆ ಚರ್ಚಿಸಿ ಪರಿಶೀಲಿಸಿ ಸುರಕ್ಷತಾ ಕ್ರಮದ ಬಗ್ಗೆ ಸೂಕ್ತ ಸಲಹೆಯನ್ನು ನೀಡಿರುತ್ತಾರೆ
ಅಲ್ಲದೇ ಸೈಬರ್ ಅಪರಾಧಗಳನ್ನು ತಡೆಗಟ್ಟಲು ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಸೂಚಿಸಿದ್ದು, ತಮ್ಮ ಗ್ರಾಹಕರು ಅಪರಿಚಿತರಿಂದ ಸೈಬರ್ ವಂಚನೆಗೊಳಗಾಗಿದ್ದಲ್ಲಿ ಕೂಡಲೇ ಸೈಬರ್ ಕ್ರೆöÊಮ್ ಸಹಾಯವಾಣಿ 1930 ನೇ ನಂಬ್ರಕ್ಕೆ ಕರೆಮಾಡಲು ತಿಳುವಳಿಕೆ ನೀಡುವಂತೆ ಕೋರಲಾಗಿದೆ.
ಮೈಕ್ರೋ ಫೈನಾನ್ಸ್ ಸಂಸ್ಥೆಯವರಿಗೆ ಸಹ ಸೂಚನೆ ನೀಡಿ ಗ್ರಾಹಕರಿಗೆ ಸಾಲ ವಸೂಲಿ ನೆಪದಲ್ಲಿ ಯಾವುದೇ ಮಾನಸಿಕ ಕಿರುಕುಳ ಮತ್ತು ತೊಂದರೆ ಕೊಡದಂತೆ ತಾಕೀತು ಮಾಡಲಾಗಿದೆ, ಎಲ್ಲಾ ಕ್ರಮಗಳನ್ನು ಸೂಕ್ತ ರೀತಿಯಲ್ಲಿ ಅನುಸರಿಸಬೇಕೆಂದು ತಿಳುವಳಿಕೆ ನೀಡಲಾಗಿದೆ .ತಪ್ಪಿದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ.