ಮಂಗಳೂರು-ಭಟ್ಕಳ ಮಾರ್ಗದಲ್ಲಿ ನಾಳೆಯಿಂದ ಕೆಎಸ್ಆರ್ ಟಿಸಿ ವೋಲ್ವೋ
ಮಂಗಳೂರು: ಮಂಗಳೂರು ವಿಭಾಗದಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಮಾ. 05 ರಿಂದ ಜಾರಿಗೆ ಬರುವಂತೆ 6 ಹೊಸ ವೋಲ್ವೋ ವಾಹನವನ್ನು ಮಂಗಳೂರು-ಭಟ್ಕಳ ಮಾರ್ಗದಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭಿಸಲು ಯೋಜಿಸಲಾಗಿದೆ. ಸದರಿ ಸಾರಿಗೆಗಳಿಂದ ಪ್ರತಿ ದಿನ ಮಂಗಳೂರಿನಿಂದ 9 ಹಾಗೂ ಭಟ್ಕಳದಿಂದ 9 ಟ್ರಿಪ್ಸ್‍ಗಳನ್ನು ಕಾರ್ಯಾಚರಣೆ ಗೊಳಿಸಲಾಗುತ್ತಿದೆ.
ಮಂಗಳೂರು-ಭಟ್ಕಳ ಮಾರ್ಗದ ಪ್ರಮುಖ ಸ್ಥಳಗಳ ಪ್ರಯಾಣದರ ಮಂಗಳೂರು-ಭಟ್ಕಳ ರೂ.225, ಮಂಗಳೂರು-ಕುಂದಾಪುರ ರೂ.160, ಉಡುಪಿ-ಕುಂದಾಪುರ ರೂ. 65, ಮಣಿಪಾಲ-ಕುಂದಾಪುರ ರೂ. 65, ಕುಂದಾಪುರ-ಬೈಂದೂರು ರೂ. 45. ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಕರಾರಸಾಸಂ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.
ವೋಲ್ವೊ ಬಸ್ಸಿನ ಸಮಯ
ಬೆಳಿಗ್ಗೆ 6.45ಕ್ಕೆ ಮಂಗಳೂರಿನಿಂದ ಹೊರಟು 9.54ಕ್ಕೆ ಭಟ್ಕಳ ತಲುಪಲಿದೆ. ಇದೇ ರೀತಿ ಬೆಳಿಗ್ಗೆ 7.15, 7.45, 10, 10.30, 11 ಅಪರಾಹ್ನ 2.45, 3.15, 3.45 ಕ್ಕೆ ಮಂಗಳೂರಿನಿಂದ ಭಟ್ಕಳಕ್ಕೆ ಹೊರಡಲಿದೆ.
ಭಟ್ಕಳ- ಮಂಗಳೂರು : ಬೆಳಿಗ್ಗೆ 6ಕ್ಕೆ ಭಟ್ಕಳದಿಂದ ಹೊರಡಲಿದ್ದು, ಇದೇ ರೀತಿ ಬೆಳಿಗ್ಗೆ 6.30, 7, 10.45, 11.15, 11.45, ಅಪರಾಹ್ನ 2, 2.30, 3 ಕ್ಕೆ ಹೊರಡಲಿದೆ. ಸುರತ್ಕಲ್, ಮೂಲ್ಕಿ, ಉಡುಪಿ, ಮಣಿಪಾಲ, ಬ್ರಹ್ಮಾವರ, ಕುಂದಾಪುರ, ಬೈಂದೂರುಗಳಲ್ಲಿ ನಿಲುಗಡೆ ಇದೆ. ಇದಲ್ಲದೆ ಈಗಾಗಲೇ ಇರುವ ಮಂಗಳೂರು-ಮಣಿಪಾಲದ ವೋಲ್ವೊ ಬಸ್ಸುಗಳು ಎಂದಿನಂತೆ ಒಡಾಡಲಿವೆ.