Spread the love
ಮಂಗಳೂರು: ಮಧ್ಯಾಹ್ನ 12: 30 ರಿಂದ ಖಾಸಗಿ ವಾಹನ ಸಂಚಾರ ಸಂಪೂರ್ಣ ನಿಷೇಧ – ಡಾ.ಹರ್ಷ
ಮಂಗಳೂರು: “ದ್ವಿಚಕ್ರ ವಾಹನಗಳ ಸಂಚಾರ ಸೇರಿದಂತೆ ಎಲ್ಲಾ ಖಾಸಗಿ ವಾಹನಗಳನ್ನು ಮಧ್ಯಾಹ್ನ 12: 30 ರಿಂದ ನಿಷೇಧಿಸಲಾಗಿದೆ” ಎಂದು ಪೊಲೀಸ್ ಆಯುಕ್ತ ಡಾ.ಹರ್ಷಾ ಏಪ್ರಿಲ್ 2 ರಂದು ಟ್ವೀಟ್ ಮಾಡಿದ್ದಾರೆ.
ಡಾ. ಹರ್ಷ ತಮ್ಮ ಟ್ವೀಟರ್ ಸಂದೇಶದಲ್ಲಿ, “ಇಂದು ಮಧ್ಯಾಹ್ನ 12: 30 ರಿಂದ ದ್ವಿಚಕ್ರ ಮತ್ತು ಕಾರುಗಳು ಸೇರಿದಂತೆ ಖಾಸಗಿ ವಾಹನಗಳ ಎಲ್ಲಾ ಸಂಚಾರಕ್ಕೆ ಸಂಪೂರ್ಣ ನಿಷೇಧವಿದೆ. ತುರ್ತು ವೈದ್ಯಕೀಯ ಅಗತ್ಯಗಳಿಗಾಗಿ ಜನರು ಆಂಬ್ಯುಲೆನ್ಸ್ ಸೇವೆಗಳನ್ನು ಪಡೆಯಬಹುದು . ಜನರನ್ನು ‘ಮನೆಯಲ್ಲೇ ಸುರಕ್ಷಿತವಾಗಿರಲು’ ವಿನಂತಿಸಲಾಗಿದೆ.
Spread the love