ಮಂಗಳೂರು: ಮಹಾಕಾಳಿಪಡ್ಡು ಅಂಡರ್ ಪಾಸ್ ಜೂನ್ ಆರಂಭದಲ್ಲಿ ಸಂಚಾರಕ್ಕೆ ಮುಕ್ತ?

Spread the love

ಮಂಗಳೂರು: ಮಹಾಕಾಳಿಪಡ್ಡು ಅಂಡರ್ ಪಾಸ್ ಜೂನ್ ಆರಂಭದಲ್ಲಿ ಸಂಚಾರಕ್ಕೆ ಮುಕ್ತ?

ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯ ಬಹುನಿರೀಕ್ಷಿತ ಯೋಜನೆಗಳಲ್ಲಿ ಒಂದಾಗಿರುವ ಜಪ್ಪು ಮಹಾಕಾಳಿಪಡ್ಡು ರೈಲ್ವೇ ಕೆಳ ಸೇತುವೆ (ಆರ್‌ಯುಬಿ) ಕಾಮಗಾರಿಯನ್ನು ತಿಂಗಳೊಳಗೆ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಲು ಉದ್ದೇಶಿಸ ಲಾಗಿದೆ. ನಿಗದಿಯಂತೆ ಕಾಮಗಾರಿಗಳು ನಡೆದರೆ ಮಳೆಗಾಲ ಆರಂಭವಾಗುತ್ತಿದ್ದಂತೆ ವಾಹನ ಸಂಚಾರಕ್ಕೂ ಮುಕ್ತಗೊಳ್ಳುವ ಸಾಧ್ಯತೆಯಿದೆ.

ಈ ನಡುವೆ ನೆಲದಡಿಯಲ್ಲಿ ಕಾಣಿಸಿಕೊಂಡಿರುವುದು ಕಾಮಗಾರಿಗೆ ಸ್ವಲ್ಪ ಹಿನ್ನಡೆಯಾಗಿದೆ. ಸದ್ಯ ಕಾಮಗಾರಿಗೆ ವೇಗ ಪಡೆದಿದೆಯಾದರೂ, ಸ್ಥಳದಲ್ಲಿ ರುವ ಬಂಡೆಯನ್ನು ಒಡೆದು ಕಾಂಕ್ರೀಟ್ ಬಾಕ್ಸ್ಗಳನ್ನು ಮುಂದಕ್ಕೆ ದೂಡಿ ನಿಗದಿತ ಸ್ಥಾನದಲ್ಲಿ ಇರಿಸುವ ಸವಾಲಿನ ಕೆಲಸ ಇದೆ. ನೆಲದಡಿಯಲ್ಲಿ ಬಂಡೆಯನ್ನು ಒಡೆಯದೆ ಬಾಕ್ಸ್ಗಳನ್ನು ಮುಂದಕ್ಕೆ ದೂಡಲು ಸಾಧ್ಯವಾಗುವುದಿಲ್ಲ. ಪ್ರಸ್ತುತ ಶೇ. 25ರಷ್ಟು ಮಾತ್ರ ಬಾಕ್ಸ್ ಪುಕ್ಕಿಂಗ್ ಕಾಮಗಾರಿ ನಡೆದಿದೆ. ಅಕ್ಕಪಕ್ಕದಲ್ಲಿರುವ ಕಟ್ಟಡಗಳಿಗೆ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ಒಡೆಯಬೇಕಾದ ಅಗತ್ಯವೂ ಇದೆ. ಹೈಡ್ರಾಲಿಕ್ ತಂತ್ರಜ್ಞಾನ ಮೂಲಕ ಬಾಕ್ಸ್‌ಗಳನ್ನು ರೈಲ್ವೇ ಟ್ರ್ಯಾಕ್‌ನ ಅಡಿಭಾಗದಲ್ಲಿ ಇರಿಸುವ ಮೂಲಕ ಒಂದು ಹಂತದ ಕಾಮಗಾರಿಯನ್ನು ವಾರದೊಳಗೆ ಪೂರ್ಣಗೊಳಿಸಲಾಗುವುದು ಎನ್ನುತ್ತಾರೆ ಅಧಿಕಾರಿಗಳು.

ರೈಲ್ವೇ ಕೆಳ ಸೇತುವೆ ಕಾಮಗಾರಿ ವಿಳಂಬವಾಗಿರುವುದು ಸಾರ್ವಜನಿಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಈ ಭಾಗದಲ್ಲಿ ಪರ್ಯಾಯ ರಸ್ತೆ ನಿರ್ಮಾಣ ಮಾಡಲಾಗಿದ್ದು, ಅದರಲ್ಲಿ ದ್ವಿಚಕ್ರ ವಾಹನ ಸಂಚಾರಕ್ಕೆ ಮಾತ್ರ ಅವಕಾಶವಿದೆ. ಕಿರಿದಾದ ಹಾಗೂ ಇಕ್ಕಟ್ಟಿನ ಓಣಿ ರಸ್ತೆಯಾಗಿರುವುದರಿಂದ ಬೆಳಗ್ಗೆ ಸಂಜೆ ಹೊತ್ತು ಅತೀ ಹೆಚ್ಚು ಸಂಖ್ಯೆಯಲ್ಲಿ ದ್ವಿಚಕ್ರ ವಾಹನಗಳು ಸಾಗುವುದರಿಂದ ದಟ್ಟನೆ ಉಂಟಾಗುತ್ತಿದೆ. ಲೆವೆಲ್ ಕ್ರಾಸಿಂಗ್‌ನಲ್ಲಿ ಗೇಟ್ ಹಾಕುವುದರಿಂದ ದಟ್ಟನೆಯೂ ಇರುತ್ತದೆ. ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಎಲ್ಲ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ವಾಹನ ಸವಾರರು ಆಗ್ರಹಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments