ಮಂಗಳೂರು ಮಹಾನಗರಪಾಲಿಕೆ: ಬೀದಿನಾಯಿ, ಬೆಕ್ಕು ಗಣತಿ ಕಾರ್ಯ

Spread the love

ಮಂಗಳೂರು ಮಹಾನಗರಪಾಲಿಕೆ: ಬೀದಿನಾಯಿ, ಬೆಕ್ಕು ಗಣತಿ ಕಾರ್ಯ

ಮಂಗಳೂರು: ಮಹಾನಗರಪಾಲಿಕೆ ಮತ್ತು ಶಕ್ತಿನಗರದ ಎಂ/ಎಸ್ ಆ್ಯನಿಮಲ್ ಕೇರ್ ಟ್ರಸ್ಟ್  ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಹಯೋಗದಲ್ಲಿ ವರ್ಲ್ಡ್ ವೈಡ್ ವೆಟರ್ನರಿ ಸರ್ವಿಸ್  ಸಂಸ್ಥೆ ಜೊತೆ ಸೇರಿ ಬೀದಿನಾಯಿಗಳ ಗಣತಿ ಕಾರ್ಯ ಮಾಡಲಾಗುತ್ತಿದೆ.

ಜನವರಿ 27 ರಿಂದ 30 ರವರೆಗೆ ಮ್ಯಾಪಿಂಗ್ ಕಾರ್ಯಕ್ರಮ ಕೈಗೊಳ್ಳಲಾಗಿದೆ. ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ಮನೆಗಳಲ್ಲಿ ಇರುವಂತ ಬೀದಿ/ಸಾಕು ನಾಯಿಗಳ ಹಾಗೂ ಸಾಕು ಬೆಕ್ಕುಗಳ ಗಣತಿ ಕಾರ್ಯ ನಡೆಯಲಿದೆ.

ಮಹಾನಗರಪಾಲಿಕೆಯ ಸಿಬ್ಬಂದಿಗಳ ಸಹಕಾರದೊಂದಿಗೆ ಈ ಗಣತಿ ಕಾರ್ಯ ನಡೆಸಿ ಮುಂದಿನ ದಿನಗಳಲ್ಲಿ ಗಣತಿ ಕಾರ್ಯದ ವರದಿ ತಯಾರಿಕೆ ಮಾಡಲಾಗುವುದರಿಂದ, ಸಾರ್ವಜನಿಕರು ಗಣತಿ ಕಾರ್ಯಕ್ಕೆ ಸಹಕರಿಸಬೇಕು ಹಾಗೂ ಹೆಚ್ಚಿನ ಮಾಹಿತಿಗೆ ಶಕ್ತಿನಗರ ಎಂ/ಎಸ್ ಆ್ಯನಿಮಲ್ ಕೇರ್ ಟ್ರಸ್ಟ್, ದೂ.ಸಂ 9845255777 ಸಂಪರ್ಕಿಸುವಂತೆ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love
1 Comment
Inline Feedbacks
View all comments
anamika
1 month ago

1st come to pumpuwell and kankanady, nagori