Spread the love
ಮಂಗಳೂರು ಮಹಾನಗರಪಾಲಿಕೆ: ಸ್ಥಾಯೀ ಸಮಿತಿಗಳಿಗೆ ಆಯ್ಕೆ
ಮಂಗಳೂರು : ಮಂಗಳೂರು ಮಹಾನಗರಪಾಲಿಕೆಯ ವಿವಿಧ ಸ್ಥಾಯೀ ಸಮಿತಿಗಳಿಗೆ ಗುರುವಾರ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಮೈಸೂರು ಪ್ರಾದೇಶಿಕ ಆಯುಕ್ತೆ ವಿ. ಜಯಂತಿ ಅವರು ಸ್ಥಾಯೀ ಸಮಿತಿ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು. ಹೆಚ್ಚುವರಿ ಪ್ರಾದೇಶಿಕ ಆಯಕ್ತೆ ಭಾರತೀ, ಅಪರ ಜಿಲ್ಲಾಧಿಕಾರಿ ಕುಮಾರ, ಮಹಾನಗರಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್ ಉಪಸ್ಥಿತರಿದ್ದರು. ವಿವರ ಇಂತಿವೆ;
ಹಣಕಾಸು, ತೆರಿಗೆ ನಿರ್ವಹಣೆ ಸ್ಥಾಯೀ ಸಮಿತಿ: ಬಶೀರ್ ಅಹಮದ್, ಕೆ. ಜುಬೈದಾ, ಪ್ರತಿಭಾ ಕುಳಾಯಿ, ಮೀರಾ ಕರ್ಕೇರಾ, ರಾಧಾಕೃಷ್ಣ, ಸುಧೀರ್ ಶೆಟ್ಟಿ, ಪ್ರಕಾಶ್ ಸಾಲ್ಯಾನ್
ಸಾರ್ವಜನಿಕ ಆರೋಗ್ಯ, ಶಿಕ್ಷಣ ಸ್ಥಾಯೀ ಸಮಿತಿ: ಅಪ್ಪಿ, ನಾಗವೇಣಿ, ಗುಣಶೇಖರ ಶೆಟ್ಟಿ, ಜಯಂತಿ ಆಚಾರ್, ಎ.ಸಿ.ವಿನಯರಾಜ್, ಆಶಾ ಡಿಸಿಲ್ವಾ, ದೀಪಕ್ ಪೂಜಾರಿ.
ನಗರ ಯೋಜನೆ ಮತ್ತು ಸುಧಾರಣೆ ಸಮಿತಿ: ಅಶೋಕ್ ಶೆಟ್ಟಿ, ಪ್ರವೀನ್ಚಂದ್ರ ಆಳ್ವ, ಅಬ್ದುಲ್ ರವೂಫ್, ತಿಲಕ್ರಾಜ್, ಹರೀಶ್ ಎಂ. ಶೆಟ್ಟಿ, ಕವಿತಾ, ಕೆ. ಮುಹಮ್ಮದ್
ಲೆಕ್ಕಪತ್ರ ಸ್ಥಾಯೀ ಸಮಿತಿ: ಸಬಿತಾ ಮಿಸ್ಕಿತ್, ಸುಮಯ್ಯಾ, ಶೈಲಜಾ, ರತಿಕಲಾ, ಹೇಮಲತಾ ಸಾಲ್ಯಾನ್, ದಿವಾಕರ್, ಪ್ರಕಾಶ್
Spread the love