Home Mangalorean News Kannada News ಮಂಗಳೂರು: ವಂಚನೆ ಆರೋಪದಲ್ಲಿ ಮಹಿಳೆ ಮತ್ತು ಮಗುವನ್ನು ಬಂಧಿಸಿದ ಬೆಂಗಳೂರು ಪೋಲಿಸರು; ಸಾಥ್ ನೀಡಿದ ಬರ್ಕೆ...

ಮಂಗಳೂರು: ವಂಚನೆ ಆರೋಪದಲ್ಲಿ ಮಹಿಳೆ ಮತ್ತು ಮಗುವನ್ನು ಬಂಧಿಸಿದ ಬೆಂಗಳೂರು ಪೋಲಿಸರು; ಸಾಥ್ ನೀಡಿದ ಬರ್ಕೆ ಠಾಣೆಯ ಪೋಲಿಸರು

Spread the love

ಮಂಗಳೂರು: ಮಹಿಳೆ ಮತ್ತು 4 ವರ್ಶದ ಮಗುವನ್ನು ಕಾಯಿದೆ ಕಾನೂನನ್ನು ಗಾಳಿಗೆ ತೂರಿ ವಂಚನೆ ಆರೋಪದಲ್ಲಿ  ಬೆಂಗಳೂರು ಪೋಲಿಸರು ಸ್ಥಳೀಯ ಪೋಲಿಸರ ಸಹಾಯದೊಂದಿಗೆ ಬಂಧಿಸಿದ ಘಟನೆ ಭಾನುವಾರ ಸಂಜೆ ನಡೆದಿದೆ.

ಘಟನೆಯ ವಿವರ ಮಂಗಳೂರಿನ ನಿವಾಸಿ ಅನುರಾಧ ಪಡಿಯಾರ್ ತನ್ನ ಪತಿ ಎಮ್ ಎನ್ ಪಡಿಯಾರ್ ಜೊತೆ ಸೇರಿಕೊಂಡು ನಂಜುಡಪ್ಪ ಎಂಬ ವ್ಯಕ್ತಿಯ ಹೆಸರಿನಲ್ಲಿ  ಸುಳ್ಳು ದಾಖಲೆ ಪತ್ರ ತಯಾರಿಸಿ ಅದನ್ನು ದುರುಪಯೋಗ ಪಡಿಸಿದ್ದು ಈ ಕುರಿತು ಬೆಂಗಳೂರಿನ ತಿಲಕನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅನುರಾಧ ಪಡಿಯಾರ್ ಜೊತೆ ಇತರ ಏಳು ಮಂದಿಯರಾದ ಅನುರಾಧ, ಕವಿತಾ, ಗೌರಿ ಸುಹಾಸ್, ಶಾಲಿನಿ ಸುಹಾಸ್, ಸುಹಾಸ್ ರಾವ್ ದೀನೇಶ್  ಮೇಲೆ ಕೂಡ ದೂರು ದಾಖಲಾಗಿತ್ತು.

ದೂರು ದಾಖಲಾದ ಸುದ್ದಿ ತಿಳಿದ ಬಳಿಕ ಇವರುಗಳು ಮಂಗಳೂರಿನ ಕೊಡಿಯಾಲ್ ಬೈಲ್ ನಲ್ಲಿ ಯಾರಿಗೂ ಗೊತ್ತಾಗದಂತೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಆದರ ಪೋಲಿಸರು ಇವರುಗಳನ್ನು ಗಮನಿಸುತ್ತಲೇ ಇದ್ದರು. ಇದಕ್ಕೆ ಪುಷ್ಟಿ ಎಂಬಂತೆ ಮೂರು ದಿನಗಳ ಹಿಂದೆ ಅನುರಾಧ ಪಡಿಯಾರ್ ತನ್ನ ನಾಯಿ ಮರಿಯನ್ನು ಸಹ ಬಿಡದೆ ಮನೆಯಿಂದ ನಾಪತ್ತೆಯಾಗಿದ್ದರು. ಇದರಿಂದ ಸಂಶಯಗೊಂಡ ಪೋಲಿಸರು ಭಾನುವಾರ ಪೋಲಿಸರು ಇವರುಗಳ ನೆಲೆಸಿರುವ ಬಾಡಿಗೆ ಮನೆಗೆ ತೆರಳಿದ್ದು, ಮನೆಯಲ್ಲಿ ಯಾರು ಇಲ್ಲದ ವೇಳೆ ಗೌರಿ ಸುಹಾಸ್ ಒರ್ವರು ಮನೆಯಲ್ಲಿ ಇರುವ ವೇಳೆ ಅವರನ್ನು ತನ್ನ ಮೂರು ತಿಂಗಳ ಮಗುವಿನೊಂದಿಗೆ ಮನೆಯಿಂದ ಬಲತ್ಕಾರವಾಗಿ ಕರೆದೊಯ್ದಿದ್ದಾರೆ ಎನ್ನಲಾಗಿದೆ ಈ ವೇಳೆ ಗೌರಿ ಸುಹಾಸ್ ಅವರ ಪತಿ ಕೆಲಸ ನಿಮಿತ್ತ ಕುಂದಾಪುರಕ್ಕೆ ತೆರಳಿದ್ದರು ಎನ್ನಲಾಗಿದೆ.

ಎಲ್ಲದಕ್ಕೂ ಮಿಗಿಲಾಗಿ ಪೋಲಿಸರು ಮಹಿಳೆ ಮತ್ತು ಮಗುವನ್ನು ಪೋಲಿಸ್ ವಾಹನದಲ್ಲಿ ಕರೆದೊಯ್ಯದೆ ಖಾಸಗಿ ವಾಹನದಲ್ಲಿ ಕರೆದೊಯ್ದಿದ್ದು, ಅದರಲ್ಲಿ ಇತರ ಐದು ಮಂದಿ ಪುರುಷ ಕೈದಿಗಳಿದ್ದರು ಇದು ಸಂಪೂರ್ಣ ಸುಪ್ರೀಮ್ ಕೋರ್ಟಿನ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಸಾರ್ವಜನಿಕರು ಹಾಗೂ ಸಾಮಾಜಿಕ ಸಂಘಟನೆಯ ನಾಯಕರು ಆರೋಪಿಸಿದ್ದಾರೆ. ಬೆಂಗಳೂರಿನ ಪೋಲಿಸರ ವರ್ತನೆಗೆ ಬರ್ಕೆ ಪೋಲಿಸರು ಕೂಡ ಸಾಥ್ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.


Spread the love

Exit mobile version