Home Mangalorean News Kannada News ಮಂಗಳೂರು: ಮಾದಕವಸ್ತು ಕಳ್ಳಸಾಗಣೆ ಆರೋಪ – ಇಬ್ಬರ ಬಂಧನ

ಮಂಗಳೂರು: ಮಾದಕವಸ್ತು ಕಳ್ಳಸಾಗಣೆ ಆರೋಪ – ಇಬ್ಬರ ಬಂಧನ

Spread the love

ಮಂಗಳೂರು: ಮಾದಕವಸ್ತು ಕಳ್ಳಸಾಗಣೆ ಆರೋಪ – ಇಬ್ಬರ ಬಂಧನ

ಮಂಗಳೂರು: ಮಾದಕವಸ್ತು ಕಳ್ಳಸಾಗಣೆ ವಿರುದ್ಧ ಮಹತ್ವದ ಪ್ರಗತಿಯೊಂದರಲ್ಲಿ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿ, 50,000 ರೂಪಾಯಿ ಮೌಲ್ಯದ ಎಂಡಿಎಂಎ, 10,000 ರೂಪಾಯಿ ಮೌಲ್ಯದ ಎರಡು ಮೊಬೈಲ್ ಫೋನ್ಗಳು ಮತ್ತು 50,000 ರೂಪಾಯಿ ಮೌಲ್ಯದ ದ್ವಿಚಕ್ರ ವಾಹನವನ್ನು ಬಜ್ಪೆಯಿಂದ ಕಟೀಲು ರಸ್ತೆಯಲ್ಲಿ ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಜೋಕಟ್ಟೆ, 62ನೇ ತೋಕೂರು ಗ್ರಾಮದ ಎಚ್ ಅಬ್ದುಲ್ ಖಾದರ್ ಅವರ ಪುತ್ರ ಉಮರ್ ಫಾರೂಕ್ (38) ಮತ್ತು ಬಜ್ಪೆ ಜರಿನಗರ ನಿವಾಸಿ ಮನ್ಸೂರ್ ಎಂಬವರ ಪುತ್ರ ಮಹಮ್ಮದ್ ಅಬ್ದುಲ್ ಜುನೈದ್ (34) ಎಂದು ಗುರುತಿಸಲಾಗಿದೆ.

ಸುಳಿವಿನ ಮೇರೆಗೆ ಸಿಸಿಬಿ ತಂಡವು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾರ್ಗದರ್ಶನದಲ್ಲಿ ನವೆಂಬರ್ 2 ರಂದು ಕಾರ್ಯಾಚರಣೆ ನಡೆಸಿ 9.11 ಗ್ರಾಂ ಎಂಡಿಎಂಎ ಮತ್ತು ಇತರ ನಿಷಿದ್ಧ ವಸ್ತುಗಳನ್ನು ಹೊಂದಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಪಿಎಸ್ ಐ ರೇವಣಸಿದ್ದಪ್ಪ ನೇತೃತ್ವದಲ್ಲಿ ಸಿಸಿಬಿ ಘಟಕದ ವಿವಿಧ ಸಿಬ್ಬಂದಿ ತಂಡಕ್ಕೆ ಬೆಂಬಲ ನೀಡಿದರು. ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Exit mobile version