ಮಂಗಳೂರು : ಮಾದರಿಯಾದ ಸಂಘನಿಕೇತನ ಗಣೇಶೋತ್ಸವ

Spread the love

ಮಂಗಳೂರು : ಮಾದರಿಯಾದ ಸಂಘನಿಕೇತನ ಗಣೇಶೋತ್ಸವ

ಮಂಗಳೂರು : ನಗರದ ಸಂಘನಿಕೇತನದಲ್ಲಿ ಆಚರಿಸಲ್ಪಡುವ 73 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ನಗರದ ಎಲ್ಲ ಗಣೇಶೋತ್ಸವಕ್ಕೆ ಮಾದರಿಯಾಗಿದೆ ಬೆಳಿಗ್ಗೆ ಸರಳರೀತಿಯಲ್ಲಿ ಸಾಂಕೇತಿಕವಾಗಿ ದೀಪ ಪ್ರಜ್ವಲನೆ ಮುಖಾಂತರ ವಿದ್ಯುಕ್ತವಾಗಿ ಉದ್ಘಾಟನೆ ಗೊಂಡು ಗಣೇಶೋತ್ಸವಕ್ಕೆ ಚಾಲನೆ ದೊರಕಿತು .

ಕೇವಲ ಧಾರ್ಮಿಕ ಚಿಂತನೆ ಮಾತ್ರವಲ್ಲದೆ ರಾಷ್ಟ್ರೀಯ ವಿಚಾರ ದೊಂದಿಗೆ ಆಚರಿಸಲ್ಪಡುತ್ತದೆ . ಐದು ದಿನಗಳ ಪರ್ಯಂತ ಉತ್ಸವ ನೆರವೇರಲಿದ್ದು ಅತ್ಯಂತ ಸರಳ ರೀತಿಯಲ್ಲಿ ಆಚರಿಸಲಾಗುವುದು ಕೊರೋನಾ ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ನೀಡಲಾದ ಎಲ್ಲಾ ನಿಯಮಗಳನ್ನು ಕಟ್ಟು ನಿಟ್ಟಿನಲ್ಲಿ ಪಾಲಿಸಲಾಗುತ್ತಿದ್ದು ಬಾರಿ ಯಾವುದೇ ಸೇವೆಗೆ ಅವಕಾಶವಿರುವುದಿಲ್ಲ ಭಜಕರಿಗೆ ಶ್ರೀ ದೇವರ ದರ್ಶನ ಹಾಗೂ ಕಾಣಿಕೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ .

ಮಧ್ಯಾಹ್ನ ಪೂಜೆ ಒಂದು ಗಂಟೆಗೆ ಹಾಗೂ ರಾತ್ರಿ 7 ಗಂಟೆಗೆ ರಾತ್ರಿ ಪೂಜೆ ನಡೆಯಲಿರುವುದು ಒಂದು ಬಾರಿ ಕೇವಲ 20 ಸಾರ್ವಜನಿಕರಿಗೆ ಸಭಾಂಗಣದ ಒಳಗೆ ಪ್ರವೇಶಕ್ಕೆ ಅವಕಾಶ ಸ್ಯಾನಿಟೈಜೆಷನ್ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿದೆ

ಉದ್ಘಾಟನೆಯನ್ನು ಪ್ರಾಂತ ಸಹ ಸಂಘಚಾಲಕ್ ಪಿ ವಾಮನ್ ಶೆಣೈ ಸಂಘ ಚಾಲಕರಾದ ಸುನಿಲ್ ಆಚಾರ್ ಕೇಶವ ಸ್ಮ್ರತಿ ಸಂವರ್ಧನ ಸಮಿತಿಯ ಅಧ್ಯಕ್ಷ ವಿನೋದ್ ಶೆಣೈ ಕಾರ್ಯದರ್ಶಿ ಕೆ ರಘುವೀರ್ ಕಾಮತ್ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್ ಕಾರ್ಯದರ್ಶಿಗಳಾದ ಸತೀಶ್ ಪ್ರಭು , ಸುರೇಶ ಕಾಮತ್ , ಜೀವನರಾಜ್ ಶೆಣೈ , ಮಹಾ ಪೌರರಾದ ದಿವಾಕರ್ , ಹಾಗೂ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.


Spread the love