ಮಂಗಳೂರು: ಮೇ ತಿಂಗಳ ಪಡಿತರ ವಿತರಣೆ
ಮಂಗಳೂರು: ಲಾಕ್‌ಡೌನ್ ಸಂದರ್ಭದಲ್ಲಿ ಬಿಡುಗಡೆಯಾದ ಆಹಾರ ಧಾನ್ಯವನ್ನು ಮೇ ತಿಂಗಳಲ್ಲಿ ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ.
ಅಂತ್ಯೋದಯ ಕಾರ್ಡ್‌ದಾರರ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆ.ಜಿ. ಅಕ್ಕಿ, ಪ್ರತಿ ಪಡಿತರ ಚೀಟಿಗೆ 1 ಕೆ.ಜಿ. ತೊಗರಿಬೇಳೆ ಉಚಿತವಾಗಿ ನೀಡಲಾಗುವುದು. ಬಿ.ಪಿ.ಎಲ್ ಕಾರ್ಡ್‌ದಾರರ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆ.ಜಿ. ಅಕ್ಕಿ, ಪ್ರತಿ ಪಡಿತರ ಚೀಟಿಗೆ 4 ಕೆ.ಜಿ. ಗೋಧಿ, ಪ್ರತಿ ಪಡಿತರ ಚೀಟಿಗೆ 1 ಕೆ.ಜಿ. ತೊಗರಿಬೇಳೆ ಉಚಿತವಾಗಿ ನೀಡಲಾಗುವುದು. ಎ.ಪಿ.ಎಲ್. ಕಾರ್ಡ್‌ದಾರರ ಏಕ ಸದಸ್ಯ ಕುಟುಂಬಕ್ಕೆ 5 ಕೆ.ಜಿ. ಅಕ್ಕಿ, 2 ಮತ್ತು ಹೆಚ್ಚಿನ ಸದಸ್ಯರಿಗೆ 10 ಕೆ.ಜಿ.ಅಕ್ಕಿಯನ್ನು ₹15 ರ ದರದಲ್ಲಿ ನೀಡಲಾಗುವುದು.
ಹೊಸದಾಗಿ ಎ.ಪಿ.ಎಲ್ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಪ್ರತಿ ಅರ್ಜಿಗೆ ಅಕ್ಕಿ 10 ಕೆ.ಜಿ. ಅಕ್ಕಿಯನ್ನು ₹15 ರ ದರದಲ್ಲಿ ನೀಡಲಾಗುವುದು.
ಅಂತರ ರಾಜ್ಯ, ಅಂತರ ಜಿಲ್ಲೆ ಪೋರ್ಟೆಬಿಲಿಟಿ ಜಾರಿಯಲ್ಲಿದ್ದು, ಯಾವುದೇ ವರ್ಗದ ಪಡಿತರ ಚೀಟಿ ಹಾಗೂ ಅರ್ಜಿಗೆ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಪ್ರಕಟಣೆ ತಿಳಿಸಿದೆ.