ಮಂಗಳೂರು| ಮೊಬೈಲ್ ಹ್ಯಾಕ್ ಮಾಡಿ 1 ಲಕ್ಷ ರೂ. ವಂಚನೆ: ಪ್ರಕರಣ ದಾಖಲು
ಮಂಗಳೂರು: ಮೊಬೈಲ್ ಹ್ಯಾಕ್ ಮಾಡಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯಿಂದ 1 ಲಕ್ಷ ರೂ. ವರ್ಗಾಯಿಸಿ ವಂಚನೆ ಮಾಡಿದ ಬಗ್ಗೆ ಅಪರಿಚಿತರ ವಿರುದ್ಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತನ್ನ ಮೊಬೈಲ್‌ಗೆ ಅಕ್ಟೋಬರ್ 7ರಂದು ಕೆವೈಸಿ ಅಪ್‌ಡೇಟ್ ಮಾಡಲು ಸಂದೇಶ ಬಂದಿತ್ತು. ಲಿಂಕನ್ನು ಒತ್ತಿದ ಕೂಡಲೇ ಮೊಬೈಲ್ ಹ್ಯಾಂಗ್ ಆಗಲು ಆರಂಭಿಸಿದೆ. ಅದೇ ದಿನ ಮನೆಯ ಕರೆಂಟ್ ಬಿಲ್ ಪೇಟಿಎಂ ಮೂಲಕ ಕಟ್ಟಿದ್ದು, ತಕ್ಷಣ ಎರಡು ಹಂತದಲ್ಲಿ 1 ಲಕ್ಷ ರೂ. ಬ್ಯಾಂಕ್‌ನಿಂದ ವರ್ಗಾವಣೆಯಾಗಿದೆ. ಸೈಬರ್ ಕ್ರೈಂ ನಂಬರ್ 1930ಗೆ ದೂರು ದಾಖಲಿಸಿದಾಗ ಅದರ ಖಾತೆದಾರ ಅಭಯ್ ಕುಮಾರ್ ಸಿಂಗ್ ಹಾಗೂ ಸುಮಿತ್ ಸಿಂಗ್ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಗೊಂಡಿರುವುದು ತಿಳಿದು ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.