Home Mangalorean News Kannada News ಮಂಗಳೂರು: ಯುವನಿಧಿ ನೋಂದಣಿ – ಉತ್ತಮ ಪ್ರತಿಕ್ರಿಯೆ

ಮಂಗಳೂರು: ಯುವನಿಧಿ ನೋಂದಣಿ – ಉತ್ತಮ ಪ್ರತಿಕ್ರಿಯೆ

Spread the love

ಮಂಗಳೂರು: ಯುವನಿಧಿ ನೋಂದಣಿ – ಉತ್ತಮ ಪ್ರತಿಕ್ರಿಯೆ

ಮಂಗಳೂರು: ಪದವೀಧರರಿಗೆ ಮತ್ತು ಡಿಪ್ಲೋಮೋ ಹೊಂದಿರುವವರಿಗೆ ನಿರುದ್ಯೋಗ ಭತ್ಯೆ ನೀಡುವ “ಯುವನಿಧಿ” ಯೋಜನೆ ನೋಂದಾವಣಿಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ.

 ಸೋಮವಾರ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಈ ಸಂಬಂಧ ಮಾತನಾಡಿ ಪ್ರಗತಿ ಪರಿಶೀಲನೆ ನಡೆಸಿ, ಜಿಲ್ಲೆಯಲ್ಲಿ ಈ ಯೋಜನೆಗಳ ಅರ್ಹರಾದರಾದ ಸುಮಾರು 4500 ಮಂದಿ ನಿರುದ್ಯೋಗಿಗಳಿದ್ದಾರೆ, ಈಗಾಗಲೇ 916 ನೋಂದಾಣಿ ಆಗಿದ್ದು ಉಳಿದವರು ನೋಂದಾಣಿಯನ್ನು ಉಳಿದೆರಡು ದಿನಗಳಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದರು

ಶಿಕ್ಷಣ ಸಂಸ್ಥೆಗಳ ಹಳೆ ವಿದ್ಯಾರ್ಥಿಗಳ ಮಾಹಿತಿ, ಆಯಾ ಕಾಲೇಜು ಮತ್ತು ಡಿಪ್ಲೋಮೋ ಸಂಸ್ಥೆಗಳಲ್ಲಿ ಇದೆ. ಈ ನಿಟ್ಟಿನಲ್ಲಿ ಅಲ್ಲಿನ ಹಳೆ ವಿದ್ಯಾರ್ಥಿಗಳ ನೋಂದಣಿ ಜವಾಬ್ದಾರಿ ಆಯಾ ಕಾಲೇಜು, ಪ್ರಾಂಶುಪಾಲರದ್ದಾಗಿದೆ. ಈ ಬಗ್ಗೆ ತುರ್ತಾಗಿ ಗಮನಹರಿಸಲು ಅವರು ಸೂಚಿಸಿದರು.

ಕೆಲವು ವಿದ್ಯಾರ್ಥಿಗಳ ಅಂಕಪಟ್ಟಿ ವಿವರ ನಾಡ್ ವ್ಯವಸ್ಥೆಯಲ್ಲಿ ಕಂಡುಬಾರದಿರುವ ತಾಂತ್ರಿಕ ದೋಷಗಳನ್ನು ಸರಿಪಡಿಸಲು ಮಂಗಳೂರು ವಿಶ್ವವಿದ್ಯಾನಿಲಯದ ಸಿಸ್ಟಮ್‍ಅನಾಲಿಸ್ಟ್ ಮನೋಹರ್ ಅವರನ್ನು ಸಂಪರ್ಕಿಸುವಂತೆ ಸಭೆಯಲ್ಲಿ ತಿಳಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಪ್ರದೀಪ್ ಡಿ’ಸೋಜಾ, ಮಂಗಳೂರು ವಿಶ್ವವಿದ್ಯಾಲಯ ಕೌಶಲಾಭಿವೃದ್ಧಿ ಪ್ರೋ. ಎ.ಎಂ. ಖಾನ್. ಮತ್ತಿತರರು ಉಪಸ್ಥಿತರಿದ್ದರು.


Spread the love

Exit mobile version